Asianet Suvarna News Asianet Suvarna News

ಹೀಗಿದೆ ಕೊರೋನಾ ಬಿಟ್ಕೊಂಡ ವುಹಾನ್ ನಗರ: ಮೂಲೆ ಮೂಲೆಯೂ ವೈರಸ್ ಆಗರ!

ಚೀನಾದ ಅತಿ ದೊಡ್ಡ ನಗರಗಳಲ್ಲೊಂದು ವುಹಾನ್, ಕೊರೋನಾ ವೈರಸ್ ಹುಟ್ಟಿಕೊಂಡಿದ್ದು ಇಲ್ಲೇ| ಜಗತ್ತಿನ ನಿದ್ದೆಗೆಡಿಸಿದೆ ಕೊರೋನಾ ವೈರಸ್| 112 ಪ್ರಾಣಿಗಳ ಮಾಂಸ ಮಾರಾಟವಾಗುತ್ತಿದ್ದ ವುಹಾನ್ ನಗರವೀಗ ಸಂಪೂರ್ಣ ಬಂದ್

Wuhan The Chinese mega city at the center of coronavirus outbreak
Author
Bangalore, First Published Jan 29, 2020, 4:57 PM IST
  • Facebook
  • Twitter
  • Whatsapp

ವುಹಾನ್[ಜ.29]: ಚೀನಾದಲ್ಲಿ ಹರಡಿರುವ ಕೊರೋನಾ ವೈರಸ್ ಇಲ್ಲಿನ ಜನರನ್ನು ಇನ್ನಿಲ್ಲದಂತೆ ಕಾಡಿದೆ. ಈ ಸೋಂಕು ಮತ್ತಷ್ಟು ಹಬ್ಬಿಕೊಳ್ಳದಂತೆ ಸರ್ಕಾರ ಕಠಿಣ ಕ್ರಮ ಕೈಗೊಳ್ಳಲಾರಂಭಿಸಿದೆ. ಈ ವೈರಸ್ ಚೀನಾದ ವುಹಾನ್ ಎಂಬ ನಗರದಿಂದ ಹಬ್ಬಿಕೊಂಡಿದೆ. ಹೀಗಾಗಿ ಈ ನಗರ ಕಳೆದ 7 ದಿನಗಳಿಂದ ಬಂದ್ ಆಗಿದೆ. ಇಲ್ಲಿನ ಲಕ್ಷಾಂತರ ಮಂದಿ ತಮ್ಮ ಮನೆಯಲ್ಲೇ ಕೈದಿಯಂತಿದ್ದಾರೆ. ಕೊರೋನಾ ವೈರಸ್ ಮತ್ತಷ್ಟು ಹರಡುವುದನ್ನು ತಡೆ ಹಿಡಿಯಲು ಜನರಿಗೆ ತಮ್ಮ ಮನೆಯಲ್ಲೇ ಉಳಿದುಕೊಳ್ಳಲು ಸೂಚಿಸಿದೆ. ವುಹಾನ್ ನಲ್ಲಿ ಭಾರತೀಯ ವಿದ್ಯಾರ್ಥಿಗಳೂ ಇದ್ದಾರೆ. ಅವರು ಕೂಡಾ ಇತರರಂತೆ ಬಂಧಿತರಂತಿದ್ದಾರೆ.

ಕೊರೋನಾ ವೈರಸ್ ಹರಡುವುದಕ್ಕೂ ಮುನ್ನ ಚೀನಾದ ವುಹಾನ್ ನಗರದ ಬಗ್ಗೆ ಅನೇಕರಿಗೆ ತಿಳಿದಿರಲಿಲ್ಲ. ಆದರೀಗ ಈ ನಗರದ ಬಗ್ಗೆ ಇಡೀ ವಿಶ್ವವೇ ಮಾತನಾಡಿಕೊಳ್ಳುತ್ತಿದೆ. ವುಹಾನ್ ಚೀನಾದ ಅತಿ ಹೆಚ್ಚು ಜನಸಂಖ್ಯೆ ಇರುವ ನಗರಗಳಲ್ಲೊಂದು. ಇದು ಶಾಂಘೈ ಹಾಗೂ ಬೀಜಿಂಗ್ ನಂತಹ ಮೆಘಾ ಸಿಟಿಯಂತೆಯೇ ಇದೆ.

ಚೀನಾದ ಅತಿದೊಡ್ಡ ನಗರಗಳಲ್ಲೊಂದು

ವುಹಾನ್ ಚೀನಾದ ಹುಬೇಯಿ ಪ್ರಾಂತ್ಯದ ರಾಜಧಾನಿಯಾಗಿದೆ. ಸರ್ಕಾರಿ ದಾಖಲೆಗಳನ್ವಯ ವುಹಾನ್ ಜನಸಂಖ್ಯೆ 11 ಲಕ್ಷ. ಚೀನಾದ ಮಧ್ಯ ಪ್ರಾಂತ್ಯದಲ್ಲಿರುವ ವುಹಾನ್, ಇಲ್ಲಿನ ಅತಿ ದೊಡ್ಡ ನಗರಗಳಲ್ಲೊಂದು. ಶಾಂಘೈ ನ ಸುಮಾರು 800 ಕಿ. ಮೀ ಪಶ್ಚಿಮದಲ್ಲಿರುವ ಈ ನಗರಕ್ಕೆ, ಶಾಂಘೈನಿಂದ ಸ್ಫಡ್ ಟ್ರೈನ್ ನಲ್ಲಿ ಕೇವಲ 4 ಗಂಟೆಯೊಳಗೆ ತಲುಪಬಹುದು.

ಬೆಂಗಳೂರಲ್ಲಿ ಮತ್ತೆ ನಾಲ್ವರಿಗೆ ಕೊರೋನಾ ವೈರಸ್ ಭೀತಿ! ಆತಂಕದಲ್ಲಿ ಜನತೆ

ಚೀನಾದ ಕೇಂದ್ರ ಭಾಗದಲ್ಲಿರುವ ಈ ನಗರವನ್ನು ಕಳೆದೊಂದು ದಶಕದಿಂದ ಅಭಿವೃದ್ಧಿಪಡಿಸಲಾಗಿದೆ. ಪ್ರೈಮ್ ಲೊಕೇಷನ್ ನಲ್ಲಿರುವ ಈ ನಗರ ಟ್ರಾನ್ಸ್ ಪೋರ್ಟ್ ಹಬ್ ಎಂದೇ ಪ್ರಸಿದ್ಧಿ ಪಡೆದಿದೆ. ಇದು ಚೀನಾದ ಒಟ್ಟು 9 ನಗರಗಳಿಗೆ ಸಂಪರ್ಕ ಕಲ್ಪಿಸುತ್ತದೆ.

ವುಹಾನ್ ನಗರದಿಂದ ರೈಲ್ವೇ ಸಂಪರ್ಕವಿದೆ. ಇಲ್ಲಿನ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಚೀನಾದ ಏಕೈಕ ಅತಿ ದೊಡ್ಡ ವಿಮಾನ ನಿಲ್ದಾಣವಾಗಿದೆ. ಇಲ್ಲಿಂದ 5 ಮಹಾದ್ವೀಪಗಳಿಗೆ ಹಾಗೂ 20 ದೇಶಗಳ109 ನಗರಗಳಿಗೆ ವಿಮಾನಗಳಿವೆ. 

ಕೊರೋನಾ ವೈರಸ್ ಹುಟ್ಟಿಕೊಂಡ ಬಳಿಕ 23 ಜನವರಿಯಿಂದ ಸರ್ಕಾರ ವುಹಾನ್ ವಿಮಾನ ನಿಲ್ದಾಣ ಹಾಗೂ ರೈಲ್ವೇ ನಿಲ್ದಾಣವನ್ನು ಬಂದ್ ಮಾಡಿದೆ. ಸೋಂಕು ತಡೆಗಟ್ಟುವ ನಿಟ್ಟಿನಲ್ಲಿ ಸರ್ಕಾರ ಈ ಮಹತ್ವದ ಕ್ರಮ ಕೈಗೊಂಡಿದೆ. ನಗರದ ಸಾರ್ವಜನಿಕ ಸಾರಿಗೆ ವ್ಯವಸ್ಥೆಯನ್ನೂ ಸ್ಥಗಿತಗೊಳಿಸಲಾಗಿದೆ. ಜನರೆಲ್ಲಾ ಕೈದಿಗಳಂತೆ ಬದುಕುತ್ತಿದ್ದಾರೆ.

90,000 ಜನರಿಗೆ ಕೊರೋನಾ ವೈರಸ್‌?: ಶಾಕಿಂಗ್ ವಿಡಿಯೋ ಔಟ್

ಚೀನಾದಲ್ಲೀಗ ಹೊಸ ವರ್ಷದ ರಜೆ. ಇದನ್ನಾಚರಿಸಲು ಜನರು ಬೇರೆ ನಗರಗಳಿಗೆ, ದೇಶಕ್ಕೆ ತೆರಳುತ್ತಾರೆ. ಹೀಗಿರುವಾಗ ಅನೇಕ ವಿಮಾನಗಳು ವುಹಾನ್ ಮೂಲಕ ಹಾರಾಡುತ್ತವೆ. ಆದರೀಗ ಕೊರೋನಾ ವೈರಸ್ ನಿಂದಾಗಿ ಈ ಎಲ್ಲಾ ವಿಮಾನಗಳನ್ನು ಕ್ಯಾನ್ಸಲ್ ಮಾಡಲಾಗಿದೆ.

ವುಹಾನ್ ನಲ್ಲಿ ಸಿಲುಕಿದ ಭಾರತೀಯ ವಿದ್ಯಾರ್ಥಿಗಳು

ವುಹಾನ್ ನಗರದಲ್ಲಿ ಸುಮಾರು 700ಕ್ಕೂ ಅಧಿಕ ಭಾರತೀಯ ವಿದ್ಯಾರ್ಥಿಗಳು ಸಿಲುಕಿದ್ದಾರೆ. ಇವರೆಲ್ಲಾ ವುಹಾನ್ ಹಾಗೂ ಆಸುಪಾಸಿನ ವಿಶ್ವವಿದ್ಯಾನಿಲಯಗಳಲ್ಲಿ ವ್ಯಾಸಂಗ ನಡೆಸುತ್ತಿದ್ದಾರೆ. ಇವರಲ್ಲಿ ಬಹುತೇಕರು ಮೆಡಿಕಲ್ ವಿದ್ಯಾರ್ಥಿಗಳು. ದೆಹಲಿ, ಅಸ್ಸಾಂ ಹಾಗೂ ಪಶ್ಚಿಮ ಬಂಗಾಳದ ವಿದ್ಯಾರ್ಥಿಗಳು ಇಲ್ಲಿದ್ದಾರೆ. ತಮ್ಮ ಮನೆಗಳಲ್ಲಿ ಕೈದಿಗಳಂತಿರುವ ವಿದ್ಯಾರ್ಥಿಗಳಿಗೆ ಏನೂ ಮಾಡಲಾಗದ ಪರಿಸ್ಥಿತಿ ಬಂದೊದಗಿದೆ. ಕೊರೋನಾ ವೈರಸ್ ದಾಳಿಯಿಂದಾಗಿ ಬೆಲೆ ಏರಿಕೆ ಬಿಸಿಯೂ ತಟ್ಟಿದೆ. 

ವುಹಾನ್ ನಲ್ಲಿ ಹೇಗೆ ಹರಡಿತು ಕೊರೋನಾ ವೈರಸ್

ವುಹಾನ್ ನಲ್ಲಿ ಬಹುದೊಡ್ಡ ಮಾಂಸದ ಬಹುದೊಡ್ಡ ಮಾರ್ಕೆಟ್ ಇದೆ. ಇಲ್ಲಿ ವಿವಿಧ ಬಗೆಯ ಪ್ರಾಣಿಗಳ ಮಾಂಸ ಮಾರಟ ಮಾಡಲಾಗುತ್ತದೆ. ಇಲ್ಲಿ ಕೇವಲ ಕೋಳಿ, ಮೊಟ್ಟೆ ಹಾಗೂ ಮೀನು ಮಾರಾಟ ಮಾತ್ರವಲ್ಲಿದೇ ಸುಮಾರು 112 ಬಗೆಯ ಪ್ರಾಣಿಗಳ ಮಾಂಸ ಸಿಗುತ್ತದೆ. ಇದರೊಂದಿಗೆ ಮೃತಪಟ್ಟ ಪ್ರಾಣಿಗಳೂ ಇಲ್ಲಿ ಸಿಗುತ್ತವೆ.

ಚೀನಾದಲ್ಲಿ ಕೊರೋನಾ, ಪರಿಸ್ಥಿತಿ ಅತೀ ಗಂಭೀರ: ಮತ್ತೆ 15 ಬಲಿ, 237 ಜನರ ಸ್ಥಿತಿ ಚಿಂತಾಜನಕ!

ಹಾವಿನಿಂದ ಹಿಡಿದು ಕರಡಿ, ಒಂಟೆ, ಬಾವಲಿ, ಕತ್ತೆ, ನವಿಲು ಸೇರಿದಂತೆ ಹಲವು ಜಾತಿಯ ಕೀಟ, ಪತಂಗಗಳೂ ಸಿಗುತ್ತವೆ. ಮಾಂಸಾಹಾರವನ್ನು ಇಷ್ಟಪಡುವ ಚೀನಿಯರಿಗೆ ಹಾವಿನಿಂದ ಈ ಕೊರೋನಾ ವೈರಸ್ ಹರಡಿದೆ ಎನ್ನಲಾಗಿದೆ. ಬಳಿಕ ಇದು ಮಾನವನಿಂದ ಮಾನವನಿಗೆ ಹರಡಿದೆ. ಬಳಿಕ ವುಹಾನ್ ನಿಂದಲೇ ಈ ವೈರಸ್ ಬೇರೆ ದೇಶಕ್ಕೆ ವ್ಯಾಪಿಸಿದೆ.

Follow Us:
Download App:
  • android
  • ios