Asianet Suvarna News Asianet Suvarna News

ಲಾಕ್‌ಡೌನ್‌ ಎಫೆಕ್ಟ್: ಭಾರತದಲ್ಲಿ ಮಾಲಿನ್ಯ ಶೇ.26ರಷ್ಟು ಇಳಿಕೆ!

ಭಾರತದಲ್ಲಿ ಮಾಲಿನ್ಯ ಶೇ.26ರಷ್ಟು ಇಳಿಕೆ| ಇದು ಲಾಕ್‌ಡೌನ್‌ ಎಫೆಕ್ಟ್| ವಿಶ್ವ ಮಾಲಿನ್ಯ ಶೇ.17ರಷ್ಟುಕುಸಿತ

World carbon pollution falls 17 percent during pandemic peak
Author
Bangalore, First Published May 21, 2020, 9:02 AM IST

ನವದೆಹಲಿ(ಮೇ.21):: ಕೊರೋನಾ ಹಿನ್ನೆಲೆ ಜಾರಿಗೊಳಿಸಲಾದ ಲಾಕ್‌ಡೌನ್‌ ಪರಿಣಾಮ ಜಾಗತಿಕ ಮಾಲಿನ್ಯ ಪ್ರಮಾಣ ಶೇ.17ರಷ್ಟುತಗ್ಗಿದೆ. ಹಾಗೆಯೇ ಭಾರತದಲ್ಲಿ ಮಾಲಿನ್ಯ ಪ್ರಮಾಣ ಶೇ.26ರಷ್ಟುಇಳಿಕೆಯಾಗಿದೆ ಎಂದು ವರದಿಯೊಂದು ತಿಳಿಸಿದೆ. ‘ರಾಷ್ಟ್ರೀಯ ಹವಾಮಾನ ಬದಲಾವಣೆ’ ಎಂಬ ಬ್ರಿಟನ್‌ ನಿಯತಕಾಲಿಕೆಯಲ್ಲಿ ಅಧ್ಯಯನ ವರದಿಯೊಂದು ಪ್ರಕಟವಾಗಿದ್ದು, ಅದರಲ್ಲಿ ಮಾಲಿನ್ಯ ಇಳಿಕೆಯ ಪ್ರಮಾಣ ಪ್ರಕಟಿಸಲಾಗಿದೆ.

2019ರ ಅಂಕಿ ಅಂಶಗಳಿಗೆ ಹೋಲಿಸಿದರೆ ಈ ವರ್ಷದ ಜನವರಿಯಿಂದ ಏಪ್ರಿಲ್‌ವರೆಗೆ ಜಾಗತಿಕ ಇಂಗಾಲ ಹೊರಸೂಸುವಿಕೆ ಪ್ರಮಾಣ ಗಣನೀಯವಾಗಿ ತಗ್ಗಿದೆ. ಈ ವರ್ಷಾಂತ್ಯದ ವೇಳೆಗೆ ಇಳಿಕೆ ಪ್ರಮಾಣ ಶೇ.4.4 ಹಾಗೂ ಶೇ.8ರ ನಡುವೆ ಇರಬಹುದು ಎಂದು ಅಧ್ಯಯನ ಹೇಳಿದೆ. ವಿಶ್ವಯುದ್ಧ-2ರ ಬಳಿಕ ವಾರ್ಷಿಕ ಪ್ರಮಾಣದಲ್ಲಿ ಮಾಲಿನ್ಯ ಇಳಿಯುತ್ತಿರುವುದು ಇದೇ ಮೊದಲು.

ಭಾರತವಷ್ಟೇ ಅಲ್ಲ, ಅಮೆರಿಕದಲ್ಲಿ ಶೇ.31.6 ಹಾಗೂ ಬ್ರಿಟನ್‌ನಲ್ಲಿ ಶೇ.30.7ರಷ್ಟುಮಾಲಿನ್ಯ ತಗ್ಗಿದೆ. ಕೊರೋನಾ ಮೂಲವಾದ ಚೀನಾದಲ್ಲಿ ಶೇ.23.9ರಷ್ಟುತಗ್ಗಿದೆ.

ಏಪ್ರಿಲ್‌ 7ರಂದು ಈ ಅವಧಿಯಲ್ಲೇ ಗರಿಷ್ಠ ಎಂದರೆ ಶೇ.17ರಷ್ಟುಅಥವಾ 17 ದಶಲಕ್ಷ ಟನ್‌ನಷ್ಟುಇಂಗಾಲ ಹೊರಸೂಸುವಿಕೆ ತಗ್ಗಿದೆ. ಇಷ್ಟೊಂದು ಏಕದಿನದ ಮಾಲಿನ್ಯ ಇಳಿಕೆ 2016ರಲ್ಲಾಗಿತ್ತು.

ಒಟ್ಟಾರೆ ತಗ್ಗಿದ ಮಾಲಿನ್ಯದಲ್ಲಿ ಭೂಸಾರಿಗೆಯ ಪಾಲು ಶೇ.43, ವಿದ್ಯುತ್‌ ಉತ್ಪಾದನಾ ಘಟಕಗಳದ್ದು ಶೇ.19, ಉದ್ದಿಮೆಗಳದ್ದು ಶೇ.25 ಹಾಗೂ ವಿಮಾನಯಾನ ಕ್ಷೇತ್ರದ್ದು ಶೇ.10 ಎಂದು ಅಧ್ಯಯನ ವಿವರಿಸಿದೆ.

Follow Us:
Download App:
  • android
  • ios