ಕ್ಯಾನ್‌ಬೆರಾ[ಮಾ.09]: ಕೊರೋನಾ ವೈರಸ್ ಸೋಂಕಿತರ ಸಂಖ್ಯೆ ದಿನೇ ದಿನೇ ಹೆಚ್ಚುತ್ತಿರುವ ಬೆನ್ನಲ್ಲೇ, ಜನರು ಇದನ್ನು ತಡೆಗಟ್ಟುವ ನಿಟ್ಟಿನಲ್ಲಿ ಈ ಹಿಂದೆಗಿಂತಲೂ ಸ್ವಚ್ಛತೆಗೆ ಹೆಚ್ಚು ಮಹತ್ವ ನೀಡಲಾರಂಭಿಸಿದ್ದಾರೆ. ಹೀಗಾಗಿ ಜನರು ಅಧಿಕ ಪ್ರಮಾಣದಲ್ಲಿ ಟಾಯ್ಲೆಟ್ ಪೇಪರ್ ಹಾಗೂ ಹ್ಯಾಂಡ್ ವಾಶ್ ಖರೀದಿಸುತ್ತಿದ್ದು, ಮಾರುಕಟ್ಟೆಯಲ್ಲಿ ಇದರ ಅಭಾವ ಹೆಚ್ಚುತ್ತಿದೆ. ಇದರಿಂದ ಜನರು ಸಮಸ್ಯೆ ಎದುರಿಸುತ್ತಿದ್ದಾರೆ. ಆಸ್ಟ್ರೇಲಿಯಾದಲ್ಲಂತೂ ಜನರು ಟಾಯ್ಲೆಟ್ ಪೇಪರ್ ಗಾಗಿ೯ ಸಾಋ್ವಜನಿಕವಾಗೇ ಹೊ೦ಡೆದಾಡಲಾರಂಭಿಸಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆದ ವಿಡಿಯೋ ಇದಕ್ಕೆ ಸಾಕ್ಷಿ ಎಂಬಂತಿದೆ. 

ಹೌದು ಆಸ್ಟರೇಲಿಯಾದಲ್ಲಿ ಕೊರೋನಾ ವೈರಸ್ ಗೆ ಜನರು ಬೆಚ್ಚಿ ಬಿದ್ದಿದ್ದಾರೆ. ಇದರಿಂದಾಗಿ ಜನರು ಅಗತ್ಯಕ್ಕಿಂತ ಕೊಂಚ ಜಾಸ್ತಿಯೇ ಟಾಯ್ಲೆಟ್ ಪೇಪರ್ ಖರೀದಿಸಲಾರಂಭಿಸಿದ್ದಾರೆ. ಹೀಗಾಗಿ ಮಾರುಕಟ್ಟೆಯಲ್ಲಿ ಟಾಯ್ಲೆಟ್ ಪೇಪರ್ ಅಭಾವ ಹೆಚ್ಚಲಾರಂಭಿಸಿದೆ. ಹೀಗಿರುವಾಗ ಸರ್ಕಾರ ಕೂಡಾ ವ್ಯಕ್ತಿಯೊಬ್ಬ ಒಂದಕ್ಕಿಂತ ಹೆಚ್ಚು ಪ್ಯಾಕೆಟ್ ಖರೀದಿಸುವಂತಿಲ್ಲ ಎಂಬ ನಿಯಮ ಜಾರಿಗೊಳಿಸಿದೆ. ಈ ನಿಯಮ ಜಾರಿಗೊಳಿಸಿದ ಬೆನ್ನಲ್ಲೇ 23 ಹಾಗೂ 60 ವರ್ಷದ ಮಹಿಳೆಯರಿಬ್ಬರು ಸೂಪರ್ ಮಾರ್ಕೆಟ್ ನಲ್ಲಿ ಟಾಯ್ಲೆಟ್ ಪೇಪರ್ ಗಾಗಿ ಜಗಳವಾಡಿಕೊಂಡಿರುವ ಘಟನೆ ಬೆಳಕಿಗೆ ಬಂದಿದೆ. ಬಡಿದಾಡ್ಕೊಂಡ ಇವರ ವಿರುದ್ಧ ದೂರು ದಾಖಲಿಸಿದ್ದಾರೆ. ನ್ಯಾಯಾಲಯ ಇವರಿಗೆ ಕೋರ್ಟ್ ನೋಟಿಸ್ ಜಾರಿಗೊಳಿಸಿದೆ. 

Fact Check: ಶಾಹೀನ್‌ ಬಾಗ್‌ ಪ್ರತಿ​ಭ​ಟ​ನಾ​ಗಾ​ರ್ತಿಗೆ ಕೊರೋ​ನಾ?

ಸೋಶಿಯಲ್ ಮೀಡಿಯಾದಲ್ಲಿ ಜಗಳದ ಈ ವಿಡಿಯೋ ವೈರಲ್ ಆಗಿದೆ. ಮಹಿಳೆಯೊಬ್ಬಳು ಟಾಯ್ಲೆಟ್ ಪೇಪರ್ ನಿಂದ ತುಂಬಿರುವ ಟ್ರೋಲಿ ಹಿಡಿದು ನಿಂತುಕೊಂಡಿರುತ್ತಾಳೆ. ಹೀಗಿರುವಾಗ ಆಕೆಯ ಬಳಿ ಬರುವ ಮತ್ತೊಬ್ಬ ಮಹಿಳೆ ತನಗೊಂದು ಪ್ಯಾಕೆಟ್ ನೀಡುವಂತೆ ಮನವಿ ಮಾಡಿಕೊಳ್ಳುತ್ತಾಳೆ. ಆದರೆ ಟ್ರೋಲಿ ಹಿಡಿದಿದ್ದ ಮಹಿಳೆ ನಿರಾಕರಿಸುತ್ತಾಳೆ. ಒಂದು ಪ್ಯಾಕೆಟ್ ಕೊಡು ಎಂದಾಕೆಗೆ, ಸಾಧ್ಯವಿಲ್ಲ... ಒಂದು ಪ್ಯಾಕೆಟ್ ಕೂಡಾ ಕೊಡುವುದಿಲ್ಲ ಎಂದು ನಿರಾಕರಿಸುತ್ತಾಳೆ. ಬಳಿಕ ಇಬ್ಬರ ನಡುವೆ ಜಗಳವೇ ಏರ್ಪಡುತ್ತದೆ. 

ಇಬ್ಬರ ನಡುವಿನ ಜಗಳ ಹೆಚ್ಚುತ್ತಿದ್ದಂತೆಯೇ ಭಯಬಿದ್ದ ಸಿಬ್ಬಂದಿ ಇವರನ್ನು ತಡೆಯುವ ಯತ್ನ ನಡೆಸುತ್ತಾರೆ. ಆದರೆ ಸಾಧ್ಯವಾಗದಾಗ ಪೊಲೀಸರಿಗೆ ಕರೆ ಮಾಡಿ ಮಾಹಿತಿ ನೀಡುತ್ತಾರೆ. ಸ್ಥಳಕ್ಕಾಗಮಿಸಿದ ಪೊಲೀಸರು ಇಬ್ಬರ ವಿರುದ್ಧ ದೂರು ದಾಖಲಿಸಿದ್ದಾರೆ.