ಇಲ್ಲೊಬ್ಬ ವಿದೇಶೀ ಮಹಿಳೆ ಟಾಯ್ಲೆಟ್‌ನ ಕಮೋಡ್‌ನಲ್ಲಿ ಹಣ್ಣು, ಐಸ್‌ಕ್ರೀಮು ಹಾಗೂ ವಿವಿಧ ಥರದ ಡ್ರಿಂಕ್ಸ್‌ ಹಾಕಿ ಜ್ಯೂಸ್‌ ಮಾಡಿದ ವಿಡಿಯೋ ಭಾರೀ ವೈರಲ್‌ ಆಗಿದೆ 

ಬೆಂಗಳೂರು (ಏ.30): ಹಣ್ಣು ಅಥವಾ ಐಸ್‌ ಕ್ರೀಂ ಬೆರೆಸಿ ಮಿಕ್ಸರ್‌ನಲ್ಲಿ ಜ್ಯೂಸ್‌ ಮಾಡುವುದು ಕಾಮನ್‌. ಆದರೆ ಇಲ್ಲೊಬ್ಬ ವಿದೇಶೀ ಮಹಿಳೆ ಟಾಯ್ಲೆಟ್‌ನ ಕಮೋಡ್‌ನಲ್ಲಿ ಹಣ್ಣು, ಐಸ್‌ಕ್ರೀಮು ಹಾಗೂ ವಿವಿಧ ಥರದ ಡ್ರಿಂಕ್ಸ್‌ ಹಾಕಿ ಜ್ಯೂಸ್‌ ಮಾಡಿದ ವಿಡಿಯೋ ಭಾರೀ ವೈರಲ್‌ ಆಗಿದೆ 

ಸುಮಾರು 1 ಕೋಟಿ ಜನರು ಈ ವಿಡಿಯೋ ವೀಕ್ಷಿಸಿದ್ದಾರೆ. ನಾನಾ ಹಣ್ಣುಗಳ ತುಂಡುಗಳು, ಐಸ್‌ಕ್ರೀಮು ಹಾಗೂ ಕೂಲ್‌ಡ್ರಿಂಕ್ಸನ್ನು ಟಾಯ್ಲೆಟ್‌ ಕಮೋಡಲ್ಲಿ ಈಕೆ ಸುರುವುತ್ತಾಳೆ.

Scroll to load tweet…

ಆಮೇಲೆ ಮೆಲ್ಲಗೆ ಫ್ಲಶ್‌ ಮಾಡಿ ಸೌಟು ಹಾಕಿ ಕಲಕುತ್ತಾಳೆ. ಅಲ್ಲಿಗೆ ಜ್ಯೂಸ್‌ ರೆಡಿಯಾಗುತ್ತದೆ. ಅಲ್ಲದೇ ಅದನ್ನು ತನ್ನ ಫ್ರೆಂಡ್ಸ್‌ಗೆ ಕುಡಿಯಲು ನೀಡಿದ್ದಾಳೆ. ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ.