ಕೆಲವೊಮ್ಮೆ ಅದೃಷ್ಟಒಲಿದರೆ ಭಿಕ್ಷುಕರೂ ರಾತ್ರಿ ಬೆಳಗಾಗುವುದರೊಳಗೆ ಶ್ರೀಮಂತರಾಗಿಬಿಡುತ್ತಾರೆ. ಇದಕ್ಕೊಂದು ತಾಜಾ ಉದಾಹರಣೆ ಫ್ರಾನ್ಸ್‌ನ ಬ್ರೆಸ್ಟ್‌ ನಗರದಲ್ಲಿ ನಡೆದಿದೆ. ಒಂದೇ ದಿನ ರಾತ್ರಿ ಈ ನಾಲ್ವರು ಲಕ್ಷಾಧಿಪತಿಗಳಾಗಿ ಬದಲಾಗಿದ್ದಾರೆ.

ನಾಲ್ಕು ಮಂದಿ ನಿರ್ಗತಿಕರು ಲಾಟರಿ ಅಂಗಡಿಯೊಂದರ ಮುಂದೆ ಭಿಕ್ಷೆ ಬೇಡುತ್ತಿದ್ದರು.  ಲಾಟರಿ ಅಂಗಡಿಗೆ ಬಂದ ಮಹಿಳೆ ಭಿಕ್ಷುಕರ ಜೊತೆ ಮಾತನಾಡಿ ನಂತರ ಕರುಣೆ ತೋರಿ ಒಂದು ಯುರೋ ಕೊಟ್ಟು ಸ್ಕ್ರಾಚ್‌ ಕಾರ್ಡ್‌ವೊಂದನ್ನು ಖರೀದಿಸಿಕೊಟ್ಟಿದ್ದರು.

ಅಮೆ​ರಿಕದ ಲೂಯಿಸ್‌ಗೆ ನೊಬೆಲ್‌ ಸಾಹಿತ್ಯ ಪ್ರಶ​ಸ್ತಿ, 8.08 ಕೋಟಿ ರು. ನಗದು ಬಹು​ಮಾನ

ಸಾಮಾನ್ಯವಾಗಿ ಫ್ರಾನ್ಸ್‌ನಲ್ಲಿ ಈ ರೀತಿಯ ಸ್ಕ್ರಾಚ್‌ಕಾರ್ಡ್‌ಗಳನ್ನು ಉಜ್ಜಿದರೆ ಹೆಚ್ಚೆಂದರೆ 5 ಯುರೋ ಸಿಕ್ಕುತ್ತದೆ. ಅದೇ ರೀತಿ ಭಿಕ್ಷುಕರು ಕೂಡ ಹೆಚ್ಚಿನ ನಿರೀಕ್ಷೆ ಇಟ್ಟುಕೊಂಡಿರಲಿಲ್ಲ. ಆದರೆ, ಸ್ಕ್ರಾಚ್‌ಕಾರ್ಡ್‌ ಉಜ್ಜಿದ ವೇಳೆ 50,000 ಯುರೋ (43.07 ಲಕ್ಷ ರು.) ಲಭ್ಯವಾಗಿದೆ! ಇದನ್ನು ಕಂಡು ಭಿಕ್ಷುಕರು ಅಚ್ಚರಿಗೆ ಒಳಗಾಗಿದ್ದಾರೆ.

ಬಹಳಷ್ಟು ಜನ ಭಿಕ್ಷಕುರಿಗೆ ತಿನ್ನುವುದಕ್ಕೆ ಅಥವಾ ಕೆಲವು ನಾಣ್ಯ ಕೊಟ್ಟು ಬಿಡುತ್ತಾರೆ. ಆದರೆ ಈ ಮಹಿಳೆ ಸ್ಕ್ರಾಚ್ ಕಾರ್ಡ್ ಕೊಟ್ಟಿದ್ದರು. ನಾಲ್ವರೂ ಸಮನಾಗಿ ಹಣವನ್ನು ಹಂಚಿಕೊಂಡಿದ್ದಾರೆ.