ವಿಶ್ವ ಆರೋಗ್ಯ ಸಂಸ್ಥೆ ಪದೇ ಪದೇ ಕೊರೋನಾ ನಿಯಂತ್ರಿಸಲು ಮಾಸ್ಕ್ ಧರಿಸಿ ಎನ್ನುತ್ತಿದ್ದರೂ ಜನರು ಮಾತ್ರ ಯಾವುದನ್ನೂ ಕಿವಿ ಮೇಲೆ ಹಾಕಿಕೊಳ್ಳುತ್ತಿಲ್ಲ. ಹೀಗಿರುವಾಗಳೆ ಮಾಸ್ಕ್ ಧರಿಸಿ ಎಂದ ಪತ್ನಿಯ ಮಾತು ಕೇಳದ ಪತಿಗೆ ಬಂದೊದಗಿದ ದುಸ್ಥಿತಿಯ ವಿಡಿಯೋ ಒಂದು ಸೋಶಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗಿದೆ. 

EasyJetನಲ್ಲಿ ಪ್ರಯಾಣಿಸುತ್ತಿದ್ದ ಪತಿ, ಪತ್ನಿ ನಡುವೆ ಮಾಸ್ಕ್ ಧರಿಸುವ ಸಂಬಂಧ ಜಗಳವಾಗಿದ್ದು, ಇದು ತಾರಕಕ್ಕೇರಿ ಇಬ್ಬರೂ ಹೊಡೆದಾಡಿಕೊಂಡಿದ್ದಾರೆ. ಪತಿರಾಯ ಮಾಸ್ಕ್ ಧರಿಸಲು ನಿರಾಕರಿಸಿದಾಗ ಕೋಪಗೊಂಡ ಪತ್ನಿ ಆತನಿಗೆ ಸಾರ್ವಜನಿಕವಾಗೇ ಕಪಾಳ ಮೋಕ್ಷ ಮಾಡಿದ್ದಾಳೆ. ಸದ್ಯ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ವಾಸ್ತವವಾಗಿ ವಿಮಾನದ ಸಿಬ್ಬಂದಿ ಆ ವ್ಯಕ್ತಿಗೆ ಮಾಸ್ಕ್ ಧರಿಸುವಂತೆ ಹೇಳಿದ್ದಾರೆ. ಆದರೆ ಈ ವೇಳೆ ಕೋಪಗೊಂಡ ಆತ ಸಿಬ್ಬಂದಿಗೆ ಬೈಯ್ಯಲಾರಂಭಿಸಿದ್ದಾನೆ. ಈ ವಿಚಾರವನ್ನು ಶಾಂತಿಯಿಂದ ಕೊನೆಯಾಘಿಸಲು ಪತ್ನಿ ಇವರಿಬ್ಬರ ನಡುವೆ ಮಾತು ತೆಗೆದು ಪತಿಯನ್ನು ಸಮಾಧಾನಪಡಿಸಲಾರಂಭಿಸಿದ್ದಾಳೆ. ಅಷ್ಟರಲ್ಲಿ ಪತಿರಾಯ ಪತ್ನಿಗೇ ಬೈದಿದ್ದು, ಇದನ್ನು ತಡೆಯಲಾರದ ಹೆಂಡತಿ ಆತನಿಗೆ ಹೊಡೆದಿದ್ದಾಳೆ. ಸದ್ಯ ಈ ವಿಡಿಯೋ ಭಾರೀ ವೈರಲ್ ಆಗಿದೆ.