Asianet Suvarna News Asianet Suvarna News

ಭಾರತೀಯರ ಮೇಲಿನ ದಾಳಿ ತಡೆಗೆ ಬೈಡೆನ್ ಶತಪ್ರಯತ್ನ: ಅಮೆರಿಕ

ಅಮೆರಿಕದಲ್ಲಿ 2 ತಿಂಗಳಲ್ಲಿ 6ಕ್ಕೂ ಅಧಿಕ ಭಾರತೀಯರ ಹತ್ಯೆ ಆಗಿರುವ ಬಗ್ಗೆ ಅಮೆರಿಕ ಸರ್ಕಾರ ಮೌನ ಮುರಿದಿದೆ.  ಭಾರತೀಯರ ಮೇಲಿನ ದಾಳಿ ತಡೆಗೆ ಬೈಡೆನ್‌ ಸರ್ವ ಯತ್ನ ಮಾಡುತ್ತಿದ್ದಾರೆ ಎಂದಿದೆ.

White House Reacts to Growing Attacks on Indians in US gow
Author
First Published Feb 17, 2024, 8:43 AM IST

ವಾಷಿಂಗ್ಟನ್‌: ಅಮೆರಿಕದಲ್ಲಿ 2 ತಿಂಗಳಲ್ಲಿ 6ಕ್ಕೂ ಅಧಿಕ ಭಾರತೀಯರ ಹತ್ಯೆ ಆಗಿರುವ ಬಗ್ಗೆ ಅಮೆರಿಕ ಸರ್ಕಾರ ಮೌನ ಮುರಿದಿದೆ. ದಾಳಿಗಳನ್ನು ತಡೆಗಟ್ಟಲು ಜೋ ಬೈಡೆನ್‌ ಸರ್ಕಾರವು ಶತಪ್ರಯತ್ನ ಮಾಡುತ್ತಿರುವುದಾಗಿ ಶ್ವೇತಭವನ ವಕ್ತಾರ ಜಾನ್‌ ಕಿರ್ಬಿ ತಿಳಿಸಿದ್ದಾರೆ.

ಶುಕ್ರವಾರ ಸುದ್ದಿಗಾರರ ಜತೆ ಮಾತನಾಡಿದ ಅವರು, ‘ಅಮೆರಿಕದಲ್ಲಿ ಹಿಂಸಾ ಪ್ರವೃತ್ತಿಗೆ ಶೂನ್ಯ ಸಹಿಷ್ಣುತೆಯನ್ನು ಅನುಸರಿಸಲಾಗುತ್ತದೆ. ಹತ್ಯೆಯಾದವರು ಯಾವುದೇ ಪಂಗಡ, ಲಿಂಗ, ಜನಾಂಗಕ್ಕೆ ಸೇರಿದ್ದರೂ ಅದನ್ನು ಗಂಭೀರವಾಗಿ ಪರಿಗಣಿಸಿ ಹತ್ಯೆಗೆ ಕಾರಣವಾದವರನ್ನು ಪತ್ತೆ ಹಚ್ಚುವುದರ ಜೊತೆಗೆ ಮುಂದೆ ಇಂತಹ ಕೊಲೆಗಳು ನಡೆಯದಂತೆ ಸರ್ಕಾರ ಎಚ್ಚರಿಕೆಯ ಹೆಜ್ಜೆ ಇಡುತ್ತಿದೆ’ ಎಂದರು.

ಅಮೆರಿಕ, ಯುರೋಪ್‌ಗೆ ಹಿಮಯುಗದ ಭೀತಿ!
ಲಂಡನ್‌: ಅಮೆರಿಕ ಹಾಗೂ ಯುರೋಪ್‌ನ ಉತ್ತರ ಅಟ್ಲಾಂಟಿಕ್‌ ವಲಯದ ಹವಾಮಾನದ ಮೇಲೆ ಸಾಕಷ್ಟು ಪ್ರಭಾವ ಬೀರುವ ಮೆಕ್ಸಿಕನ್‌ ಕೊಲ್ಲಿಯ ಬೆಚ್ಚಗಿನ ಪ್ರವಾಹವು (ಬಿಸಿ ಸಮುದ್ರ) 2025ರ ವೇಳೆಗೆ ಕುಸಿತಗೊಳ್ಳುವ ಭೀತಿ ಎದುರಾಗಿದೆ. ಇದರಿಂದಾಗಿ ಈ ಭಾಗದಲ್ಲಿ ಹವಾಮಾನ ತೀವ್ರ ವೈಪರೀತ್ಯಗೊಂಡು, ಚಳಿಗಾಲದಲ್ಲಿ ಭಾರೀ ಉಷ್ಣಾಂಶ ಕುಸಿತ (ಹಿಮಯುಗ) ಹಾಗೂ ಬೇಸಿಗೆಯಲ್ಲಿ ಭಾರೀ ತಾಪಮಾನ ಏರಿಕೆ ಉಂಟಾಗುವ ಸಾಧ್ಯತೆಯಿದೆ ಎಂದು ವಿಜ್ಞಾನಿಗಳು ಎಚ್ಚರಿಸಿದ್ದಾರೆ.

ಜಾಗತಿಕ ತಾಪಮಾನ ಏರಿಕೆಯಿಂದಾಗಿ ಉತ್ತರ ಹಾಗೂ ದಕ್ಷಿಣ ಧ್ರುವದಲ್ಲಿ ಹಿಮಗಡ್ಡೆಗಳು ಕರಗುತ್ತಿವೆ. ಅದರ ತಣ್ಣಗಿನ ಪ್ರವಾಹವು ಗಲ್ಫ್‌ ಸ್ಟ್ರೀಮ್‌ (ಬೆಚ್ಚಗಿನ ಪ್ರವಾಹ)ಗೆ ಬಂದು ಸೇರುತ್ತಿದೆ. 2025ರ ವೇಳೆಗೆ ಈ ವಿದ್ಯಮಾನ ತೀವ್ರಗೊಳ್ಳುವ ಸಾಧ್ಯತೆಯಿದೆ. ಮೆಕ್ಸಿಕನ್‌ ಕೊಲ್ಲಿಯ ಬೆಚ್ಚಗಿನ ಪ್ರವಾಹವು ಉತ್ತರ ಅಮೆರಿಕ, ಏಷ್ಯಾದ ಕೆಲ ಭಾಗ ಹಾಗೂ ಯುರೋಪ್‌ನ ಕೆಲ ಭಾಗದಲ್ಲಿ ಚಳಿಗಾಲದಲ್ಲಿ ಚಳಿ ತುಂಬಾ ಹೆಚ್ಚಾಗದಂತೆ ಹಾಗೂ ಬೇಸಿಗೆಯಲ್ಲಿ ತಾಪಮಾನ ತುಂಬಾ ಹೆಚ್ಚಾಗದಂತೆ ನೋಡಿಕೊಳ್ಳುತ್ತಿದ್ದು, ಗಲ್ಫ್‌ ಸ್ಟ್ರೀಮ್‌ ಕುಸಿದರೆ ಇದು ವ್ಯಾಪಕವಾಗಿ ಏರುಪೇರಾಗಲಿದೆ. ಆಗ ಚಳಿಗಾಲದಲ್ಲಿ 10 ಡಿಗ್ರಿ ಸೆಲ್ಸಿಯಸ್‌ನಷ್ಟು ಉಷ್ಣಾಂಶ ಕುಸಿದು ಹಿಮಯುಗದಂತಹ ಪರಿಸ್ಥಿತಿ ಎದುರಾಗಬಹುದು. ಹಾಗೆಯೇ ಬೇಸಿಗೆಯಲ್ಲಿ ತಾಪಮಾನ ತೀವ್ರ ಏರಿಕೆಯಾಗಿ, ಮಳೆ, ಕೃಷಿ ಸೇರಿದಂತೆ ಎಲ್ಲ ಚಟುವಟಿಕೆಗಳನ್ನೂ ಏರುಪೇರಾಗಿಸಬಹುದು ಎಂದು ಈ ಕುರಿತು ಅಧ್ಯಯನ ನಡೆಸಿದ ಡೆನ್ಮಾರ್ಕ್‌ನ ವಿಜ್ಞಾನಿಗಳು ಎಚ್ಚರಿಸಿದ್ದಾರೆ.

ಈ ಹಿಂದೆ, 2025ರಿಂದ 2095ರ ನಡುವೆ ಬೆಚ್ಚಗಿನ ಪ್ರವಾಹ ಕುಸಿಯಬಹುದು ಎಂದು ಅಂದಾಜಿಸಲಾಗಿತ್ತು. ಆದರೆ ಅದು ನಿರೀಕ್ಷೆಗಿಂತ ಬೇಗನೇ ಉಂಟಾಗುತ್ತಿದೆ. 2025ರಲ್ಲೇ ಅದರ ಮೊದಲ ಪರಿಣಾಮ ಗೋಚರಿಸಬಹುದು ಎನ್ನಲಾಗಿದೆ. 2004ರಲ್ಲಿ ಬಂದ ‘ಎ ಡೇ ಆಫ್ಟರ್‌ ಟುಮಾರೋ’ ಸಿನಿಮಾದಲ್ಲಿ ಇದನ್ನು ಕಾಲ್ಪನಿಕವಾಗಿ ತೋರಿಸಲಾಗಿತ್ತು.

Follow Us:
Download App:
  • android
  • ios