ಸೊಗಸಾಗಿ ಪಿಯಾನೋ ನುಡಿಸಿದ ದೃಷ್ಟಿಹೀನ ಬಾಲಕಿ ಬಾಲಕಿಯ ಪ್ರತಿಭೆಗೆ ಬೆರಗಾದ ನೆಟ್ಟಿಗರು ಟ್ವಿಟ್ಟರ್‌ನಲ್ಲಿ ಬಾಲಕಿಯ ವಿಡಿಯೋ ವೈರಲ್  

ದೃಷ್ಟಿಹೀನ ಬಾಲಕಿಯೊಬ್ಬಳು ಸೊಗಸಾಗಿ ಪಿಯಾನೋ ನುಡಿಸುತ್ತಿರುವ ಭಾವಪೂರ್ಣ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಕಣ್ಣು ಕಾಣಿಸದೇ ಇದ್ದರೂ ಪಿಯಾನೋದಲ್ಲಿ ಭಾವಪೂರ್ಣವಾದ ರಾಗಗಳನ್ನು ನುಡಿಸುವ ಬಾಲಕಿಯ ಪ್ರತಿಭೆ ನೋಡಿ ಜನ ಭಾವುಕರಾದರು. Buitengebieden ಟ್ಟಿಟ್ಟರ್‌ ಖಾತೆಯಿಂದ ಈ ವಿಡಿಯೋ ಅಪ್‌ಲೋಡ್ ಆಗಿದ್ದು, ಇದುವರೆಗೆ 6 ಲಕ್ಷಕ್ಕೂ ಹೆಚ್ಚು ಜನ ಈ ವಿಡಿಯೋವನ್ನು ವೀಕ್ಷಿಸಿದ್ದಾರೆ. 

ದೃಷ್ಟಿಹೀನ ಹುಡುಗಿಯೊಬ್ಬಳು ಪಿಯಾನೋದಲ್ಲಿ ಭಾವಪೂರ್ಣವಾದ ರಾಗಗಳನ್ನು ನುಡಿಸುವ ವೀಡಿಯೊವನ್ನು ನೋಡಿದ ನಂತರ ಸಾಮಾಜಿಕ ಮಾಧ್ಯಮ ಬಳಕೆದಾರರು ಭಾವುಕರಾದರ. Buitengebieden ನಿಂದ Twitter ಗೆ ಪೋಸ್ಟ್ ಮಾಡಿದ ಈ ಸಣ್ಣ ವಿಡಿಯೋವನ್ನ ಈಗಾಗಲೇ ಲಕ್ಷಾಂತರ ಜನ ವೀಕ್ಷಿಸಿದ್ದಾರೆ. ವೀಡಿಯೊದಲ್ಲಿ, ಕೇವಲ 7 ವರ್ಷದ ಇಪೆಕ್ ನಿಸಾ ಗೋಕರ್ (Ipek Nisa Goker) ಎಂಬ ಬಾಲಕಿ ಅವರು ಪಿಯಾನೋದಲ್ಲಿ ಸೊಗಸಾದ ಹಾಡನ್ನು ನುಡಿಸುವುದನ್ನು ಕೇಳಬಹುದು. ಉತ್ತಮವಾದ ಟ್ಯೂನ್‌ನಿಂದಾಗಿ ಇದು ಮತ್ತೆ ಮತ್ತೆ ಹಾಡನ್ನು ಕೇಳುವಂತೆ ಮಾಡುತ್ತಿದೆ.

Scroll to load tweet…
Scroll to load tweet…
Scroll to load tweet…

ಈ ಬಾಲಕಿ ಇಪೆಕ್ ನಿಸಾ ಗೋಕರ್, 7 ವರ್ಷ ವಯಸ್ಸು, ಈಕೆಗೆ ಕಣ್ಣು ಕಾಣಿಸದೇ ಇರುವುದರಿಂದ ಆಕೆ ನೋಡಲಾಗದು ಕೇಳಲು ಮಾತ್ರ ಸಾಧ್ಯ ಎಂದು ಬರೆದು ಈ ವಿಡಿಯೋವನ್ನು ಪೋಸ್ಟ್ ಮಾಡಲಾಗಿದೆ. ಈ ವಿಡಿಯೋವನ್ನು ಅನೇಕ ಟ್ವಿಟ್ಟರ್ ಬಳಕೆದಾರರು ರಿಟ್ವಿಟ್‌ ಮಾಡಿದ್ದು, ಚಿಕ್ಕ ಅಂಧತ್ವವನ್ನು ಮೀರಿದ ಚಿಕ್ಕ ಹುಡುಗಿಯ ಕೌಶಲ್ಯವನ್ನು ಶ್ಲಾಘಿಸಿದರು.

ದೃಷ್ಟಿಹೀನ ಬಾಲಕಿ ಕೊಟ್ಟ ಪಂಚ್‌ಗೆ ರೈಲು ಕಾಮಣ್ಣ ಪಂಚರ್‌! ಮಾದರಿ ಹೆಣ್ಣುಮಗಳು

ನೀವು ತುಂಬಾ ಸುಂದರವಾಗಿದ್ದೀರಾ. ಮತ್ತು ನಿಮ್ಮ ನಗು ತುಂಬಾ ಭಾವನಾತ್ಮಕವಾಗಿದೆ. ನನಗೆ ಒಳ್ಳೆಯ ಕಣ್ಣುಗಳಿವೆ ಆದರೆ ನೀನು ಮಾಡುವುದನ್ನು ನಾನು ಮಾಡಲಾರೆ. ನಾನು ಮಾನಸಿಕವಾಗಿ ಕುಸಿಯುವ ಪ್ರತಿ ಕ್ಷಣದಲ್ಲಿ ಈ ವಿಡಿಯೋವನ್ನು ನೋಡಿ ಸ್ಪೂರ್ತಿ ಪಡೆಯುವುದಕ್ಕಾಗಿ ಇದನ್ನು ಸುರಕ್ಷಿತವಾಗಿ ಇರಿಸಿಕೊಳ್ಳುವೆ ಎಂದು ನೋಡುಗರೊಬ್ಬರು ಈ ವಿಡಿಯೋಗೆ ಕಾಮೆಂಟ್ ಮಾಡಿದ್ದಾರೆ.

Gujarat Rape Case: ಧ್ವನಿ ಮೂಲಕ ಅತ್ಯಾಚಾರಿಯನ್ನು ಗುರುತಿಸಿದ ದೃಷ್ಟಿಹೀನ ಮಹಿಳೆ!