ಕಳೆದ ಮಂಗಳವಾರ ಸಿನ್ಸಿನಾಟಿ ರೆಡ್ಸ್ ತಂಡದ ಬೇಸ್ ಬಾಲ್ ಆಟದ ಸಂದರ್ಭದಲ್ಲಿ ತನ್ನ ಮಗನ ದಿಕ್ಕಿನತ್ತ ಪುಟಿಯುತ್ತಲೇ ವೇಗವಾಗಿ ಬಂದ ಚೆಂಡನ್ನು ಹಿಡಿದ ಜಾಕೋಬ್ ಕಿಂಗ್ಸ್ಲಿ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಮೆಚ್ಚುಗೆ ವ್ಯಕ್ತವಾಗಿದೆ.

ಸಿನ್ಸಿನಾಟಿ (ಏ.28): ಕ್ರಿಕೆಟ್ ಮ್ಯಾಚ್ (Cricket Match) ನೋಡೋವಾಗ ಸ್ಟ್ರೇಡಿಯಂನಲ್ಲಿ ಲವ್ ಪ್ರಪೋಸ್ ಮಾಡೋದು, ಹಾರುತ್ತಾ ಬರುವ ಚೆಂಡನ್ನು ಹಿಡಿಯುವುದು ಇಂಥವೆಲ್ಲಾ ವಿಡಿಯೋಗಳು ಕ್ಷಣಾರ್ಧದಲ್ಲಿ ವೈರಲ್ ಆಗಿ ಬಿಡುತ್ತವೆ. ಆದರೆ, ಅಮೆರಿಕದಲ್ಲಿ (USA) ನಡೆದ ಬೇಸ್ ಬಾಲ್ (Base Ball) ಪಂದ್ಯವೊಂದರಲ್ಲಿ ಆದ ಇಂಥದ್ದೇ ಒಂದು ಘಟನೆಯಿಂದಾಗಿ ಜಾಕೋಬ್ ಕಿಂಗ್ಸ್ಲಿ (Jacob Kingsley ) ಎನ್ನುವ ವ್ಯಕ್ತಿ "ಸೂಪರ್ ಡ್ಯಾಡಿ" ಎಂದು ಪ್ರಖ್ಯಾತನಾಗಿದ್ದಾನೆ.

ಸ್ಯಾನ್ ಡಿಯಾಗೋ ಪ್ಯಾಡ್ರೆಸ್ (San Diego Padres) ಹಾಗೂ ಸಿನ್ಸಿನಾಟಿ ರೆಡ್ಸ್ (Cincinnati Reds) ನಡುವಿನ ಬೇಸ್ ಬಾಲ್ ಪಂದ್ಯ ವೀಕ್ಷಿಸಲು ಜಾಕೋಬ್ ಕಿಂಗ್ಸ್ಲಿ ತಮ್ಮ ಪುಟ್ಟ ಮಗುವಿನೊಂದಿಗೆ ತೆರಳಿದ್ದರು. ಗ್ರೇಟ್ ಅಮೇರಿಕನ್ ಬಾಲ್ ಪಾರ್ಕ್ ನಲ್ಲಿ ನಡೆಯುತ್ತಿದ್ದ ಪಂದ್ಯದ ವೇಳೆ ತನ್ನ ಮಗುವಿನ ಬಾಟಲಿಯಲ್ಲಿದ್ದ ಹಾಲುಕುಡಿಸುತ್ತಾ ಪಂದ್ಯ ವೀಕ್ಷಣೆ ಮಾಡುತ್ತಿದ್ದ. ಈ ವೇಳೆ ಫೌಲ್ ಬಾಲ್ ವೇಗವಾಗಿ ಅವರ ದಿಕ್ಕಿನತ್ತ ಬರುವುದನ್ನು ಗಮನಿಸಿದ ಜಾಕೋಬ್ ಕಿಂಗ್ಸ್ಲಿ ಎಚ್ಚರಗೊಂಡಿದ್ದರು. ತಮ್ಮ ಮುಂದಿದ್ದ ಸೀಟ್ ನತ್ತ ಕೈ ಚಾಚಿ ಹಾರುತ್ತಾ ಬಂದ ಚೆಂಡನ್ನು ಬಲಗೈಯಲ್ಲಿ ಹಿಡಿದ್ದರೆ, ಎಡಗೈನಲ್ಲಿ ತನ್ನ ಮಗನಿಗೆ ಬಾಟಲಿಯಿಂದ ಹಾಲುಣಿಸುತ್ತಿದ್ದರು.

ಜಾಕೋಬ್ ಚೆಂಡು ಹಿಡಿಯುವವರೆಗೂ ಅವರ ಕೈಯಲ್ಲಿ ಮಗುವನ್ನು ಹಿಡಿದುಕೊಂಡಿದ್ದಾರೆ, ಆ ಮಗುವಿಗೆ ಬಾಟಲಿಯಿಂದ ಹಾಲುಣಿಸುತ್ತಿದ್ದಾರೆ ಎನ್ನುವ ಯಾವ ಸೂಚನೆಯೂ ಇರಲಿಲ್ಲ. ಇದರ ರಿಪ್ಲೇಯನ್ನು ಪ್ರಸಾರ ಮಾಡಿದ ಬಳಿಕ ವಿಶ್ಲೇಷಕರು ಕೂಡ ಜಾಕೋಬ್ ಅವರ ಕ್ಯಾಚ್ ಗೆ ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದರು.

Scroll to load tweet…


"ಮಗುವಿಗೆ ಹಾಲು ನೀಡುತ್ತಿರುವಾಗ! ಅಬ್ಬಾ..ಬಾಟಲಿಯನ್ನು ಹಿಡಿದಿಟ್ಟುಕೊಂಡು, ಯಾವುದೇ ಗಲಾಟೆಯಿಲ್ಲದೆ ಪರಿಪೂರ್ಣವಾಗಿ ತಗೆದುಕೊಂಡ ಕ್ಯಾಚ್. ಆನಂದದಲ್ಲಿರುವ ಮಗು,ಇದಕ್ಕಿಂತ ದೊಡ್ಡ ಸ್ಮರಣಿಕೆ ಬೇಕಿಲ್ಲ' ಎಂದು ವಿಶ್ಲೇಷಣೆಯಲ್ಲಿ ಹೇಳಲಾಗಿದೆ. ಇದೊಂದು ಅವಿಸ್ಮರಣೀಯ ಕ್ಯಾಚ್ ಎಂದೂ ಅವರು ಬಣ್ಣಿಸಿದ್ದಾರೆ.

ಆಟದ ನಂತರ ಮಾತನಾಡಿದ ಕಿಂಗ್ಸ್ಲಿ ಕ್ಯಾಚ್ ಪಡೆಯುವ ವೇಳೆ ಮಗುವಿನ ಸುರಕ್ಷತೆ ಬಗ್ಗೆ ಬಹಳ ಜಾಗರೂಕನಾಗಿದ್ದೆ. ಅದೇ ನನ್ನ ಪಾಲಿಗೆ ಮುಖ್ಯ ವಿಷಯವಾಗಿತ್ತು ಎಂದು ಹೇಳಿದ್ದಾರೆ. ನಾನು ಚೆಂಡು ಚಿಮ್ಮಿ ನನ್ನ ಬಳಿ ಬರುತ್ತಿರುವುದನ್ನು, ನನ್ನ ಮಗನನ್ನು ಸಂತೋಷಕ್ಕೆ ಯಾವುದೇ ಅಡ್ಡಿ ಬರದಂತೆ ನನ್ನ ಕೈಲಾದಷ್ಟು ಪ್ರಯತ್ನ ನಡೆಸಿದೆ ಅದರಲ್ಲಿ ಯಶಸ್ಸು ಸಿಕ್ಕಿತು ಎಂದು ಹೇಳಿದ್ದಾರೆ.

ಆನ್ ಲೈನ್ ನಲ್ಲಿ ಸೆಕೆಂಡ್ ಹ್ಯಾಂಡ್ ಕಬೋರ್ಡ್ ಖರೀದಿ ಮಾಡಿದ್ದ ವ್ಯಕ್ತಿಗೆ ಅಚ್ಚರಿ, ಯಾಕೆಂದರೆ ಅದ್ರಲ್ಲಿತ್ತು 1.2 ಕೋಟಿ!

ಆಟದ ನಡುವೆ ಬರುವ ಫೌಲ್ ಬಾಲ್ ಅನ್ನು ಹಿಡಿಯುವುದು ಬೇಸ್ ಬಾಲ್ ನಲ್ಲಿ ಸಾಮಾನ್ಯ. ಆದರೆ, ಪುಟ್ಟ ಮಗುವಿನ ತಂದೆ, ಒಂದು ಕೈಯಲ್ಲಿ ಮಗುವಿಗೆ ಬಾಟಲಿಯಲ್ಲಿ ಹಾಲುಣಿಸುತ್ತಾ, ಕ್ಯಾಚ್ ಹಿಡಿದಿರುವುದು ಬಹಳ ಅಪರೂಪ ಎನಿಸಿಕೊಳ್ಳುತ್ತದೆ. "ನನಗೆ ಆ ಕ್ಷಣದಲ್ಲಿ ಏನಾಗುತ್ತಿದೆ ಎನ್ನುವುದೇ ಗೊತ್ತಿರಲಿಲ್ಲ. ಆದರೆ, ಈತ ದೊಡ್ಡವನಾದ ಬಳಿಕ ಈ ನೆನಪನ್ನು ಖಂಡಿತವಾಗಿ ಹಂಚಿಕೊಳ್ಳುತ್ತೇನೆ. ಇದು ಈತನ ಮೊದಲ ಸಿನ್ಸಿನಾಟಿ ರೆಡ್ಸ್ ಪಂದ್ಯ. ಈಗ ಈತನೊಂದಿಗೆ ಹಂಚಿಕೊಳ್ಳಲು ಪ್ರಮಾಣಪತ್ರ ಕೂಡ ಇರುತ್ತದೆ ಎನ್ನುವುದು ಅದ್ಭುತ ಸಂಗತಿ' ಎಂದು ಜಾಕೋಬ್ ಪ್ರತಿಕ್ರಿಯಿಸಿದ್ದಾರೆ.

ಮದುವೆಗೆ ಬಂದವರಿಗೆ ಕಿಕ್ಕೇರಿಸಿದ ವಧುವಿನ ಬಂಧನ

ಜಾಕೋಬ್ ನ ಪಕ್ಕದಲ್ಲಿಯೇ ಕುಳಿತಿದ್ದ ಪತ್ನಿ ಜೋರ್ಡನ್ ಕೂಡ ಮಾತನಾಡಿದ್ದು, ಪಂದ್ಯದ ಇಡೀ ಹೊತ್ತು ನಾನು ಚೆಂಡಿನ ಮೇಲೆ ಗಮನ ನೀಡಿದ್ದೆ. ನನ್ನ ಮಗ ಶೇಪರ್ಡ್ ಗೆ ಯಾವುದೇ ಪೆಟ್ಟಾಗಬಾರದು ಎನ್ನುವ ಕಾರಣಕ್ಕೆ ಚೆಂಡಿನ ಮೇಲೆ ಗಮನ ನೀಡಿದ್ದೆ ಎಂದಿದ್ದಾರೆ. ಮೇಜರ್ ಲೀಗ್ ಬೇಸ್ ಬಾಲ್ ಈ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದು ಬಹುತೇಕ ಮಂದಿ ಜಾಕೋಬ್ ಅವರ ಸಾಹಸಕ್ಕೆ ಮೆಎಚ್ಚುಗೆ ವ್ಯಕ್ತಪಡಿಸಿದ್ದಲ್ಲದೆ, ನಿಮ್ಮ ಮಗನಿಗೆ ಇದಕ್ಕಿಂತ ದೊಡ್ಡ ಗಿಫ್ಟ್ ಇಲ್ಲ ಎಂದು ಕೂಡ ಹೇಳಿದ್ದಾರೆ.