US President; ಕಮಲಾ ಹ್ಯಾರಿಸ್‌ಗೆ ಅಧಿಕಾರ ಹಸ್ತಾಂತರಿಸಿದ ಅಮೆರಿಕ ಅಧ್ಯಕ್ಷ ಜೋ ಬೈಡೆನ್!
- ಅಮೆರಿಕದ ಮೊದಲ ಮಹಿಳಾ ಅಧ್ಯಕ್ಷೆ ಅನ್ನೋ ಹೆಗ್ಗಳಿಕೆಗೆ ಪಾತ್ರರಾದ ಕಮಲಾ
- ಶುಕ್ರವಾರ 1 ಗಂಟೆ 25 ನಿಮಿಷ ಅಮೆರಿಕಾ ಅಧ್ಯಕ್ಷೆಯಾಗಿ ಅಧಿಕಾರ
- ಭಾರತೀಯ ಮೂಲದ ಕಮಾಲಾಗೆ ವಿಶ್ವದ ದೊಡ್ಡಣ್ಣ ಚುಕ್ಕಾಣಿ
ವಾಶಿಂಗ್ಟನ್(ನ.20): ಅಮೆರಿಕ ಅಧ್ಯಕ್ಷೆಯಾದ ಕಮಲಾ ಹ್ಯಾರಿಸ್..ಹೌದು, ಇದು ಸತ್ಯ. ಅಮೆರಿಕ ಉಪಾಧ್ಯಕ್ಷೆಯಾಗಿರುವ ಭಾರತೀಯ ಮೂಲದ ಕಮಲಾ ಹ್ಯಾರಿಸ್(kamala Harris) ಅಧ್ಯಕ್ಷೆಯಾಗಿ ಅಧಿಕಾರ ಚಲಾಯಿಸಿದ್ದಾರೆ. ಸ್ವತಃ ಅಮೆರಿಕ ಅಧ್ಯಕ್ಷ ಜೋ ಬೈಡನ್(Joe Biden) ಅಧಿಕಾರ ಹಸ್ತಾಂತರಿಸಿದ್ದಾರೆ. ಈ ಮೂಲಕ ಅಮೆರಿಕದ ಮೊದಲ ಮಹಿಳಾ ಅಧ್ಯಕ್ಷೆ( first woman US President) ಅನ್ನೋ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಆದರೆ ಕಮಲಾ ಹ್ಯಾರಿಸ್ ಅಧ್ಯಕ್ಷ ಅಧಿಕಾರ ಅವಧಿ ಕೇವಲ 1 ಗಂಟೆ 25 ನಿಮಿಷ ಮಾತ್ರ ಇತ್ತು.
ಶುಕ್ರವಾರ(ನ.19) ರಂದು ಜೋ ಬೈಡನ್ ಆರೋಗ್ಯ ತಪಾಸಣೆ ಮಾಡಬೇಕಿತ್ತು. ರೂಟಿನ್ ಚೆಕ್ಅಪ್(Medical check-up) ಕಾರಣ ಜೋ ಬೈಡನ್ ರೀಡ್ ನ್ಯಾಷನಲ್ ಮೆಡಿಕಲ್ ಸೆಂಟರ್‌ಗೆ ದಾಖಲಾಗಿದ್ದರು. ಆರೋಗ್ಯ ತಪಾಸಣೆಗೆ ತೆರಳುವು ಮುನ್ನ ಜೋ ಬೈಡೆನ್ ಅಮೆರಿಕ ಅಧ್ಯಕ್ಷ ಅಧಿಕಾರವನ್ನು ಉಪಾಧ್ಯಕ್ಷೆ ಜೋ ಬೈಡನ್‌ಗೆ ಹಸ್ತಾಂತರಿಸಿದರು. ಬೆಳಗ್ಗೆ ಬೆಳಗ್ಗೆ 10.10ಕ್ಕೆ ಜೋ ಬೈಡನ್ ಅಧ್ಯಕ್ಷ ಅಧಿಕಾರವನ್ನು ಕಮಲಾ ಹ್ಯಾರಿಸ್‌ಗೆ ಹಸ್ತಾಂತರಿಸಿದ್ದರು.
ಜೋ ಬೈಡೆನ್, ಕಮಲಾ ಹ್ಯಾರಿಸ್ ಮಧ್ಯೆ ಬಿರುಕು?: ಹೀಗಿದೆ ಕಾರಣ
ಶುಕ್ರವಾರ ಬೆಳಗ್ಗೆ ಜೋ ಬೈಡನ್ ತಮ್ಮ ಎಂದಿನ ಆರೋಗ್ಯ ತಪಾಸಣೆ ಒಳಗಾಗಿದ್ದಾರೆ. ವಾಶಿಂಗ್ಟನ್‌ನಲ್ಲಿರುವ ರೀಡ್ ನ್ಯಾಷನಲ್ ಮೆಡಿಕಲ್ ಸೆಂಟರ್‌ಗೆ ದಾಖಲಾದ ಬೈಡನ್ ಕೊಲನೋಸ್ಕೋಪಿ ಚಿಕಿತ್ಸೆಗೆ ಒಳಗಾಗಿದ್ದಾರೆ. ಈ ವೇಳೆ ಅರಿವಳಿಕೆ ಮದ್ದು ನೀಡಲಾಗುತ್ತದೆ. ಹೀಗಾಗಿ ತಪಾಸಣೆ ಬಹುಬೇಗನೆ ಮುಗಿದರೂ, ತಕ್ಷಣವೇ ಕರ್ತವ್ಯಕ್ಕೆ ಹಾಜರಾಗಲು ಸಾಧ್ಯವಿಲ್ಲ. ಹೀಗಾಗಿ ಅಧ್ಯಕ್ಷ ಅಧಿಕಾರವನ್ನು ಉಪಾಧ್ಯಕ್ಷೆ ಕಮಲಾ ಹ್ಯಾರಿಸ್‌ಗೆ ಹಸ್ತಾಂತರಿಸಿ, ಆರೋಗ್ಯ ತಪಾಸಣೆ ತೆರಳಿದರು ಎಂದು ಶ್ವೇತಭವನದ ಕಾರ್ಯದರ್ಶಿ ಜೆನ್ ಪ್ಸಸ್ಕಿ ಹೇಳಿದ್ದಾರೆ.
2002 ಹಾಗೂ 2007ರಲ್ಲಿ ಅಮೆರಿಕ ಅಧ್ಯಕ್ಷರಾಗಿದ್ದ ಜಾರ್ಜ್ ಡಬ್ಲ್ಯೂ ಬುಶ್(George W Bush) ಕೂಡ ಇದೇ ಕೊಲನೋಸ್ಕೋಪಿ ತಪಾಸಣೆಗೆ ಒಳಗಾದಿದ್ದರು. ಈ ವೇಳೆ ಅಧಿಕಾರವನ್ನು ಉಪಾಧ್ಯಕ್ಷರಿಗೆ ಹಸ್ತಾಂತರಿಸಿದ್ದರು. ಇದೀಗ ಜೋ ಬೈಡನ್ ಕೂಡ ಉಪಾಧ್ಯಕ್ಷೆಗೆ ಅಧಿಕಾರ ಹಸ್ತಾಂತರಿಸಿ ತಪಾಸಣೆಗೆ ಒಳಗಾಗಿದ್ದಾರೆ.
Modi In US: ಅಮೆರಿಕ ಉಪಾಧ್ಯಕ್ಷೆ ಕಮಲಾ ಭೇಟಿಯಾದ ಪ್ರಧಾನಿ ಮೋದಿ!
ಕಮಲಾ ಹ್ಯಾರಿಸ್ 1 ಗಂಟೆ 25 ನಿಮಿಷಗಳ ಕಾಲ ಅಮರಿಕ ಅಧ್ಯಕ್ಷರಾಗಿ(America President) ಅಧಿಕಾರ ಚಲಾಯಿಸಿದ್ದಾರೆ. ಈಗಾಗಲೇ ಅಮೆರಿಕ ಉಪಾಧ್ಯಕ್ಷೆಯಾಗಿ ಅತ್ಯುನ್ನತ ಸ್ಥಾನ ಅಲಂಕರಿಸಿರುವ ಏಷ್ಯಾದ ಮೊದಲ ಮಹಿಳೆ ಅನ್ನೋ ಹೆಗ್ಗಳಿಕೆಗೆ ಪಾತ್ರರಾಗಿರುವ ಕಮಲಾ ಹ್ಯಾರಿಸ್, ಇದೀಗ ಅಧ್ಯಕ್ಷರಾಗಿ ಅಧಿಕಾರಿ ಚಲಾಯಿಸಿ ಇತಿಹಾಸ ರಚಿಸಿದ್ದಾರೆ.
ಇಂದು ಜೋ ಬೈಡನ್ 79ನೇ ವಸಂತಕ್ಕೆ ಕಾಲಿಡುತ್ತಿದ್ದಾರೆ. ಈ ಮೂಲಕ ಅಮೆರಿಕ ಅಧ್ಯಕ್ಷರಾಗಿ ಅಧಿಕಾರ ನಡೆಸಿದ ಅತ್ಯಂತ ಹಿರಿಯ ವ್ಯಕ್ತಿ ಅನ್ನೋ ದಾಖಲೆಯನ್ನು ಬೈಡನ್ ಬರೆದಿದ್ದಾರೆ. 2019ರಲ್ಲಿ ಜೈ ಬೈಡನ್ ಸಂಪೂರ್ಣ ಆರೋಗ್ಯ ತಪಾಸಣೆ ನಡೆಸಿದ್ದರು. ಬಳಿಕ ಇದೀಗ ಸಂಪೂರ್ಣ ಆರೋಗ್ಯ ತಪಾಸಣೆ ನಡೆಸುತ್ತಿದ್ದಾರೆ. 2019ರಲ್ಲಿ ಅಮೆರಿಕ ಅಧ್ಯಕ್ಷೀಯ ಚುನಾವಣೆ ಅಭ್ಯರ್ಥಿ ಘೋಷಣೆ ಮಾಡಿದಾಗಲೇ ಬೈಡನ್ ಆರೋಗ್ಯ ಕುರಿತು ಊಹಾಪೋಗಳು ಎದ್ದಿತ್ತು.
2024ರಲ್ಲಿ ಅಮೆರಿಕದ ಅಧ್ಯಕ್ಷೀಯ ಚುನಾವಣೆ ನಡೆಯಲಿದೆ. 79 ವರ್ಷದ ಜೋ ಬೈಡನ್ ಅಮೆರಿಕದ ಎರಡನೇ ಅವಧಿಗೆ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸುವ ಸಾಧ್ಯತೆ ಕಡಿಮೆ ಎಂದು ಹೇಳಲಾಗುತ್ತಿದೆ. ಅವರ ವಯಸ್ಸು ಹಾಗೂ ಆರೋಗ್ಯ ಇದಕ್ಕೆ ಕಾರಣ ಎಂದು ಹೇಳಲಾಗುತ್ತಿದೆ. ಹೀಗಾಗಿ ಬೈಡನ್ ಸರ್ಕಾರ ಎರಡನೇ ಅವಧಿಯಲ್ಲಿ ಅಧಿಕಾರ ಹಿಡಿಯಲು ಕಮಲಾ ಹ್ಯಾರಿಸ್ ಅಖಾಡಕ್ಕಿಳಿಯುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಕಮಲಾ ಹ್ಯಾರಿಸ್ ಅಮೆರಿಕ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸುವ ಸಾಧ್ಯತೆಗಳು ದಟ್ಟವಾಗಿದೆ ಎಂದು ಚರ್ಚೆಯಾಗುತ್ತಿದೆ. ಇದಕ್ಕೆ ಪೂರಕವಾದ ಕೆಲ ಘಟನೆಗಳು ಹಾಗೂ ಊಹಾಪೋಹಗಳು ನಡಿದೆದೆ. ಕಮಲಾ ಹ್ಯಾರಿಸ್ ಹಾಗೂ ಜೋ ಬೈಡನ್ ನಡುವೆ ಭಿನ್ನಾಭಿಪ್ರಾಯಗಳು ಎದ್ದಿದೆ ಅನ್ನೋ ಮಾತುಗಳು ಕೇಳಿಬಂದಿದೆ. ಕಮಲಾ ಹ್ಯಾರಿಸ್ ಜನರೊಂದಿಗೆ ಹೆಚ್ಚು ಬೆರೆಯುತ್ತಿದ್ದ, ಜನಪ್ರಿಯತೆ ಹೆಚ್ಚಿಸಿಕೊಳ್ಳುತ್ತಿದ್ದಾರೆ ಎಂದು ಬೈಡನ್ ಬಣ ಆರೋಪಿಸಿದೆ ಎಂದು ಮಾಧ್ಯಮ ವರದಿ ಪ್ರಕಟಿಸಿತ್ತು.