ಭಾರತಕ್ಕೆ ವಾರದಲ್ಲಿ 100 ವೆಂಟಿಲೇಟರ್‌ ಕಳಿಸುವೆ| ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಮಾತು

ವಾಷಿಂಗ್ಟನ್(ಜೂ.04)‌: ಕೊರೋನಾ ಸೋಂಕಿತರ ಚಿಕಿತ್ಸೆಗಾಗಿ ಮುಂದಿನ ವಾರ 100 ವೆಂಟಿಲೇಟರ್‌ಗಳನ್ನು ಉಚಿತವಾಗಿ ಭಾರತಕ್ಕೆ ಕಳುಹಿಸಿಕೊಡುವುದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ತಿಳಿಸಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಮಂಗಳವಾರ ಪ್ರಧಾನಿ ನರೇಂದ್ರ ಮೋದಿ ಅವರೊಂದಿಗಿನ ದೂರವಾಣಿ ಕರೆ ವೇಳೆ ಇದನ್ನು ಹೇಳಿದ್ದಾರೆ ಎಂದು ಅಮೆರಿಕ ಅಧ್ಯಕ್ಷರ ಅಧಿಕೃತ ನಿವಾಸ ಶ್ವೇತಭವನ ತಿಳಿಸಿದೆ. ಜಿ7 ಸಮಾವೇಶ, ಪ್ರಾದೇಶಿಕ ಭದ್ರತೆ ಮತ್ತು ಕೊರೋನಾ ಸೋಂಕು ವಿಚಾರವಾಗಿ ಮಂಗಳವಾರ ಉಭಯ ದೇಶಗಳ ನಾಯಕರು ಮಾತುಕತೆ ನಡೆಸಿದ್ದರು.

ಈ ವೇಳೆ ಭಾರತಕ್ಕೆ ಮೊದಲ ಬ್ಯಾಚಿನಲ್ಲಿ 100 ವೆಂಟಿಲೇಟರ್‌ಗಳನ್ನು ದೇಣಿಗೆ ನೀಡುವುದಾಗಿ ಟ್ರಂಪ್‌ ಘೋಷಿಸಿದರು ಎಂದು ಹೇಳಿದೆ. ಭಾರತಕ್ಕೆ 200 ವೆಂಟಿಲೇಟರ್‌ಗಳನ್ನು ಕೊಡುಗೆ ನೀಡುವುದಾಗಿ ಟ್ರಂಪ್‌ ಮೇ 16ರಂದು ಟ್ವೀಟ್‌ ಮಾಡಿದ್ದರು.

ಸದ್ಯ ಭಾರತ ವಿಶ್ವದ ಅತಿ ಹೆಚ್ಚು ಕೊರೋನಾ ಸೋಂಕಿತ ರಾಷ್ಟ್ರಗಳ ಪೈಕಿ 7ನೇ ಸ್ಥಾನಕ್ಕೇರಿರುವ ಹಿನ್ನೆಲೆಯಲ್ಲಿ ಟ್ರಂಪ್‌ ಈ ನೆರವು ಘೋಷಿಸಿದ್ದಾರೆ.

News In 100 Seconds: ಈ ಕ್ಷಣದ ಪ್ರಮುಖ ಸುದ್ದಿಗಳು

"