ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ ತೂಕ ಇಳಿಸಲಾಗದೇ ವೈದ್ಯರೊಬ್ಬರು ರಾಜಿನಾಮೆ ನೀಡಿರುವ ಇಂಟರೆಸ್ಟಿಂಗ್ ಸುದ್ದಿ ಇಲ್ಲಿದೆ ನೋಡಿ! 

ವಾಷಿಂಗ್‌ಟನ್ (ಮಾ. 02): ತೂಕ ಇಳಿಸಲು ಎಲ್ಲರೂ ಹಸಿ ತರಕಾರಿ ತಿನ್ನುವುದು, ವ್ಯಾಯಾಮ ಹೀಗೆ ನಾನಾ ಕಸರತ್ತು ಮಾಡುತ್ತಾರೆ. ಆದರೆ, ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ಗೆ ಇದಾವುದೂ ಆಗಿ ಬರುವುದಿಲ್ಲ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ತರಕಾರಿಗಳನ್ನು ಅವರು ಕಣ್ಣೆತ್ತಿಯೂ ನೋಡುವುದಿಲ್ಲ. ಹೀಗಾಗಿ ಆಹಾರದ ಒಳಗಡೆ ತರಕಾರಿಗಳನ್ನು ಅಡಗಿಸಿ ಇಡುತ್ತಿದ್ದೆ. ಆದರೆ, ತನ್ನ ಪ್ರಯತ್ನ ಕೊನೆಗೂ ಈಡೇರಲೇ ಇಲ್ಲ ಎಂಬ ಸಂಗತಿಯನ್ನು ಟ್ರಂಪ್‌ ಅವರ ಮಾಜಿ ವೈದ್ಯ ರೋನಿ ಜಾಕ್ಸನ್‌ ಬಹಿರಂಗ ಪಡಿಸಿದ್ದಾರೆ.

ಭಾರತದ ಎದುರು ಅಮೆರಿಕಾ ಫುಲ್ ಡಲ್: ಟ್ರಂಪ್

ಟ್ರಂಪ್‌ ತೂಕವನ್ನು ಕನಷ್ಠ 6 ಕೆ.ಜಿ.ಯಷ್ಟಾದರೂ ಇಳಿಸಬೇಕು ಎಂಬುದು ತನ್ನ ಗುರಿಯಾಗಿತ್ತು. ಆದರೆ, ಟ್ರಂಪ್‌ಗೆ ಡಯಟ್‌ಕಲಿಸಲು ಸಾಧ್ಯವಾಗಲೇ ಇಲ್ಲ. ತೂಕ ಇಳಿಯುವ ಬದಲು 2 ಕೆ.ಜಿ. ಹೆಚ್ಚಾಯಿತು. ಹೀಗಾಗಿ ತಾನು ಹುದ್ದೆಗೆ ರಾಜೀನಾಮೆ ನೀಡಿದೆ ಎಂದು ಹೇಳಿದ್ದಾರೆ.

#NewsIn100Seconds | ಈ ಕ್ಷಣದ ಪ್ರಮುಖ ಹೆಡ್‌ಲೈನ್ಸ್:

"