Asianet Suvarna News Asianet Suvarna News

ಜಾರ್ಜ್ ಫ್ಲಾಯ್ಡ್ ಕೊಲೆ: ಪೊಲೀಸ್ ಅಧಿಕಾರಿ ಡೆರೆಕ್‌ಗೆ 22 ವರ್ಷ ಜೈಲು ಶಿಕ್ಷೆ!

* 2020ರ ಮೇ 25ರಂದು ಮಿನೋಪೊಲೀಸ್‌ನಲ್ಲಿ ನಡೆದಿದ್ದ ಹತ್ಯೆ

* 40 ವರ್ಷದ ಕಪ್ಪು ವರ್ಣೀಯ ಜಾರ್ಜ್ ಫ್ಲಾಯ್ಡ್ ಹತ್ಯೆಗೈದಿದ್ದ ಪೊಲೀಸ್ ಅಧಿಕಾರಿ

* ಮಾಜಿ ಪೊಲೀಸ್ ಅಧಿಕಾರಿ ಡೆರೆಕ್‌ಗೆ 22 ವರ್ಷ ಜೈಲು ಶಿಕ್ಷೆ

US Ex Police Officer Sentenced To Over 22 Years For George Floyd Murder pod
Author
Bangalore, First Published Jun 26, 2021, 11:43 AM IST

ವಾಷಿಂಗ್ಟನ್(ಜೂ.26): 2020ರ ಮೇ 25ರಂದು ಮಿನೋಪೊಲೀಸ್‌ನಲ್ಲಿ 40 ವರ್ಷದ ಕಪ್ಪು ವರ್ಣೀಯ ಜಾರ್ಜ್ ಫ್ಲಾಯ್ಡ್ ಹತ್ಯೆ ಪ್ರಕರಣದ ಆರೋಪಿ, ಮಾಜಿ ಪೊಲೀಸ್ ಅಧಿಕಾರಿ ಡೆರೆಕ್ ಚಾವಿನ್‌ಗೆ ಕೋರ್ಟ್‌ 22.5 ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ. ಚಾವಿನ್‌ ವಿರುದ್ಧ ಈ ಹಿಂದೆ ಯಾವುದೇ ಅಪರಾಧ ಪ್ರಕರಣಗಳು ದಾಖಲಾಗಿರಲಿಲ್ಲ. ಹೀಗಾಗಿ ಅವರಿಗೆ ಗರಿಷ್ಠ 12.5 ವರ್ಷ ಜೈಲು ಶಿಕ್ಷೆಯಾಗುವ ಸಾಧ್ಯತೆ ಇತ್ತು. ಆದರೆ ಈ ಪ್ರಕರಣ ಅತ್ಯಂತ ಕ್ರೂರ ಎಂದಿರುವ ಕೋರ್ಟ್ ಹತ್ತು ವರ್ಷ ಹೆಚ್ಚುವರಿ ಶಿಕ್ಷೆ ಘೋಷಿಸಿದೆ. ಮಿನೆಸೋಟಾ ರಾಜ್ಯದ ಕೋರ್ಟ್‌ ಮಾಜಿ ಪೊಲೀಸ್ ಅಧಿಕಾರಿಗೆ ಈ ಶಿಕ್ಷೆ ವಿಧಿಸಿದೆ. ಇನ್ನು ಸಂತ್ರಸ್ತ ಕುಟುಂಬದ ಪರ ವಕೀಲ ಚಾವಿನ್‌ಗೆ ಮೂವತ್ತು ವರ್ಷ ಜೈಲು ಶಿಕ್ಷೆ ವಿಧಿಸುವ ಮನವಿ ಮಾಡಿತ್ತು.

"ನಂಬಿಕೆ ಮತ್ತು ಅಧಿಕಾರದ ಸ್ಥಾನವನ್ನು ದುರುಪಯೋಗಪಡಿಸಿಕೊಂಡ ಕಾರಣಕ್ಕೆ ಈ ಜೈಲು ಶಿಕ್ಷೆ ನೀಡಲಾಗಿದೆ. ಮತ್ತು ಜಾರ್ಜ್ ಫ್ಲಾಯ್ಡ್‌ ಗೆ ತೋರಿಸಿದ ನಿರ್ದಿಷ್ಟ ಕ್ರೌರ್ಯವನ್ನು ಮನದಲ್ಲಿಟ್ಟುಕೊಂಡು ಶಿಕ್ಷೆ ಪ್ರಟಿಸಲಾಗಿದೆ” ಎಂದು ಪೀಟರ್ ಕಾಹಿಲ್ ಹೇಳಿದ್ದಾರೆ. ಇನ್ನು ಫ್ಲಾಯ್ಡ್ ಕುಟುಂಬದ ವಕೀಲರು ಈ ಶಿಕ್ಷೆಯನ್ನು ಅಮೆರಿಕದಲ್ಲಿ ಜನಾಂಗೀಯ ಸಾಮರಸ್ಯದ ಕಡೆಗೆ “ಐತಿಹಾಸಿಕ” ಹೆಜ್ಜೆ ಎಂದು ಬಣ್ಣಿಸಿದ್ದಾರೆ.

ಈ ಪ್ರಕರಣದಲ್ಲಿ ಪರಿಗಣಿಸಲ್ಪಟ್ಟ ಎಲ್ಲಾ ಸಂದರ್ಭಗಳು ನನಗೆ ತಿಳಿದಿಲ್ಲ ಆದರೆ ಮಾರ್ಗಸೂಚಿಗಳ ಪ್ರಕಾರ ಈ ಶಿಕ್ಷೆ ಸೂಕ್ತವೆಂದು ತೋರುತ್ತದೆ ಎಂದು ಅಮೆರಿಕ ಅಧ್ಯಕ್ಷ ಜೋ ಬೈಡೆನ್ ಹೇಳಿದ್ದಾರೆ. 

Follow Us:
Download App:
  • android
  • ios