ಲಂಡನ್(ಅ.11)‌: ಅವಿವಾಹಿತರು, ಕಡಿಮೆ ಆದಾಯ ಇರುವವರು, ಕಡಿಮೆ ವಿದ್ಯಾರ್ಹತೆ ಹೊಂದಿರುವವರು ಮತ್ತು ಬಡ ಹಾಗೂ ಮಧ್ಯಮ ಆದಾಯದ ದೇಶಗಳಲ್ಲಿ ಜನಿಸಿದವರು ಕೊರೋನಾ ಸೋಂಕಿದಿಂದ ಮೃತಪಡುವ ಸಾಧ್ಯತೆ ಹೆಚ್ಚು ಎಂದು ಅಧ್ಯಯನ ವರದಿಯೊಂದು ಎಚ್ಚರಿಸಿದೆ.

ಸ್ವೀಡನ್‌ನ ರಾಷ್ಟ್ರೀಯ ಆರೋಗ್ಯ ಮಂಡಳಿಯು ಸ್ವೀಡನ್‌ನಲ್ಲಿ ದಾಖಲಾದ 20 ವರ್ಷ ಅಥವಾ ಅದಕ್ಕಿಂತ ಹೆಚ್ಚು ವರ್ಷದ ಯುವಕರ ಸಾವಿನ ಪ್ರಮಾಣವನ್ನು ಆಧರಿಸಿ ಈ ಸಮೀಕ್ಷೆ ನಡೆಸಿದೆ. ನೇಚರ್‌ ಕಮ್ಯುನಿಕೇಷನ್‌ ನಿಯತಕಾಲಿಕೆಯಲ್ಲಿ ಇದು ಪ್ರಕಟವಾಗಿದೆ.

ಕಡಿಮೆ ಶಿಕ್ಷಣ ಅಥವಾ ಕಡಿಮೆ ಆದಾಯ ಹೊಂದಿರುವ ಜನರು ಹೆಚ್ಚಿನ ಅಪಾಯ ಎದುರಿಸುತ್ತಿರುವುದಕ್ಕೆ ಹಣಕಾಸು ಸೇರಿದಂತೆ ಜೀವನಶೈಲಿಯ ಅಂಶಗಳು ಕಾರಣಗಳಿರಬಹುದು ಎಂದು ಅಧ್ಯಯನ ವರದಿಯ ಲೇಖಕ ಗುನ್ನಾರ್‌ ಆಂಡರ್ಸನ್‌ ಅಭಿಪ್ರಾಯಪಟ್ಟಿದ್ದಾರೆ.

ಅದರಲ್ಲಿ ಕಡಿಮೆ ಆದಾಯ ಮತ್ತು ವಿದ್ಯಾರ್ಹತೆ ಹೊಂದಿದವರು ಕೊರೋನಾದಿಂದ ಸಾವನ್ನಪ್ಪುವ ಅಪಾಯ ಹೆಚ್ಚಿದೆ ಎಂದು ತಿಳಿಸಿದೆ. ಹಾಗೆಯೇ ಇಂಥ ಸಂದರ್ಭದಲ್ಲಿ ಮಹಿಳೆಯರಿಗಿಂತ ಪುರುಷರಿಗೇ ಅಪಾಯ ಜಾಸ್ತಿ ಎಂದಿದೆ.

ಅಲ್ಲದೆ ಅವಿವಾಹಿತ ಪುರುಷ ಮತ್ತು ಮಹಿಳೆಯರು (ವಿಧವೆ, ವಿಚ್ಛೇದಿತರು) ಕೋವಿಡ್‌-19ನಿಂದ ವಿವಾಹಿತರಿಗಿಂತ 1.5-2 ಪಟ್ಟು ಹೆಚ್ಚು ಅಪಾಯವನ್ನು ಹೊಂದಿದ್ದಾರೆ ಎಂದು ತಿಳಿಸಿದೆ.