Asianet Suvarna News Asianet Suvarna News

ಭಾರತಕ್ಕೆ ಬ್ರಿಟನ್‌ನಿಂದ ವೆಂಟಿಲೇಟರ್‌, ಆಮ್ಲಜನಕ ಸಾಧನಗಳ ಪೂರೈಕೆ ನೆರವು!

ಸುನಾಮಿಯಂತೆ ಅಬ್ಬರಿಸುತ್ತಿರುವ ಕೊರೋನಾ ವೈರಸ್‌| ಭಾರತಕ್ಕೆ ಬ್ರಿಟನ್‌ನಿಂದ ವೆಂಟಿಲೇಟರ್‌, ಆಮ್ಲಜನಕ ಸಾಧನಗಳ ಪೂರೈಕೆ ನೆರವು!

UK to send ventilators and other devices to help India manage Covid 19 crisis pod
Author
Bangalore, First Published Apr 27, 2021, 1:21 PM IST

ಲಂಡನ್‌(ಏ.27): ಸುನಾಮಿಯಂತೆ ಅಬ್ಬರಿಸುತ್ತಿರುವ ಕೊರೋನಾ ವೈರಸ್‌ನ 2ನೇ ಅಲೆ ವಿರುದ್ಧ ಹೋರಾಡುತ್ತಿರುವ ಭಾರತಕ್ಕೆ ಬ್ರಿಟನ್‌ ವೆಂಟಿಲೇಟರ್‌, ಆಮ್ಲಜನಕ ಪೂರೈಸುವ ಸಾಧನಗಳ ನೆರವು ನೀಡಿದೆ. ಒಟ್ಟಾರೆ 600 ವೈದ್ಯಕೀಯ ಸಾಧನಗಳು ಶೀಘ್ರವೇ ಭಾರತ ತಲುಪಲಿವೆ ಎಂದು ಬ್ರಿಟನ್‌ ಸರ್ಕಾರ ಹೇಳಿದೆ.

ಸ್ನೇಹಿತ ಮತ್ತು ಪಾಲುದಾರ ರಾಷ್ಟ್ರವಾದ ಭಾರತಕ್ಕೆ ನೆರವು ನೀಡುವ ಬ್ರಿಟನ್‌ ಪ್ರಧಾನಿ ಬೋರಿಸ್‌ ಜಾನ್ಸನ್‌ ಅವರ ನಿರ್ಣಯದಂತೆ ಹಾಗೂ ವಿದೇಶಿ, ಕಾಮನ್‌ವೆಲ್ತ್‌ ಮತ್ತು ಅಭಿವೃದ್ಧಿ ಕಚೇರಿಯ ನಿಧಿಯಿಂದ ಭಾರತಕ್ಕೆ ಬ್ರಿಟನ್‌ನಿಂದ ಜೀವ ರಕ್ಷಕವಾದ ವೈದ್ಯಕೀಯ ಸಾಧನಗಳ ನೆರವು ಸಿಕ್ಕಿದೆ. ಮೊದಲ ಹಂತದಲ್ಲಿ ಮಂಗಳವಾರ ಈ ಸಾಧನಗಳು ದಿಲ್ಲಿಗೆ ಬಂದು ಸೇರಲಿವೆ.

ತಲಾ 1 ಕೋಟಿ ತೆತ್ತು ಬ್ರಿಟನ್‌ಗೆ ತೆರಳಿದ ಭಾರತದ ಧನಿಕರು!

ಕೊರೋನಾ ಕೇಸುಗಳು ಅಧಿಕವಾಗಿರುವ ಭಾರತವನ್ನು ‘ಕೆಂಪು ಪಟ್ಟಿ’ಗೆ ಸೇರಿಸಿದ್ದ ಬ್ರಿಟನ್‌ ಸರ್ಕಾರ, ಏಪ್ರಿಲ್‌ 23ರ ನಸುಕಿನ 4 ಗಂಟೆಯಿಂದ ಭಾರತದ ವಿಮಾನಗಳ ಆಗಮನ ನಿರ್ಬಂಧಿಸಿತ್ತು. ಏ.19ರಂದೇ ಈ ಘೋಷಣೆ ಮಾಡಿತ್ತು. ಹೀಗಾಗಿ ಏ.19ರಿಂದ 23ರವರೆಗಿನ 4 ದಿನದ ಅವಧಿಯಲ್ಲಿ ಭಾರತದ ಶ್ರೀಮಂತರು ತಲಾ 1 ಕೋಟಿ ರು. ವೆಚ್ಚ ಮಾಡಿ 8 ಬಾಡಿಗೆ ವಿಮಾನ ಪಡೆದು ಬ್ರಿಟನ್‌ ಸೇರಿಕೊಂಡಿದ್ದಾರೆ ಎಂಬ ಕುತೂಹಲದ ವಿಷಯ ಬೆಳಕಿಗೆ ಬಂದಿದೆ.

ಭಾರತದಿಂದ ಬ್ರಿಟನ್‌ಗೆ 9 ತಾಸಿನ ಪ್ರಯಾಣಾವಧಿ ಇದೆ. ಏ.19ರಂದು ಬ್ರಿಟನ್‌ ಸರ್ಕಾರ ಭಾರತದಿಂದ ವಿಮಾನ ಆಗಮನ ನಿರ್ಬಂಧ ಘೋಷಣೆ ಮಾಡುತ್ತಿದ್ದಂತೆಯೇ ಕೆಲವು ಶ್ರೀಮಂತರು ಎಚ್ಚೆತ್ತಿದ್ದಾರೆ. ಮುಂಬೈ ಸೇರಿ ಕೆಲವು ಮಹಾನಗರಗಳಿಂದ ‘ಬೊಂಬಾರ್ಡಿಯರ್‌ ಗ್ಲೋಬಲ್‌ 6000’ ಬಾಡಿಗೆ ವಿಮಾನ ಸೇರಿ 8 ವಿಮಾನಗಳನ್ನು ತಲಾ 1 ಕೋಟಿ ರು.ಗೆ ಬುಕ್‌ ಮಾಡಿಕೊಂಡಿದ್ದಾರೆ. ಏ.23ರ ನಸುಕಿನ 4ರ ಗಡುವು ಮುಗಿವ ಮುನ್ನ ಲಂಡನ್‌ ಸೇರಿಕೊಂಡಿದ್ದಾರೆ. ಅದರಲ್ಲಿ ಬೊಂಬಾರ್ಡಿಯರ್‌ ವಿಮಾನವಂತೂ ಗಡುವು ಮುಗಿವ ಕೇವಲ 45 ನಿಮಿಷ ಮುನ್ನ ಲಂಡನ್‌ ತಲುಪಿತು ಎಂದು ವರದಿಯಾಗಿದೆ.

Follow Us:
Download App:
  • android
  • ios