ಲಂಡನ್(ಮೇ.05): ಬ್ರಿಟನ್‌ನಲ್ಲಿ G7 ದೇಶಗಳ ಶೃಂಗಸಭೆ ನಡೆಯುತ್ತಿದೆ. ಭಾರತಕ್ಕೂ ಇದರಲ್ಲಿ ಮುಖ್ಯ ಅತಿಥಿಯಾಗಿ ಆಹ್ವಾನಿಸಲಾಗಿದೆ. ಹೀಗಿರುವಾಗ ಇದರಲ್ಲಿ ಭಾಗಿಯಾಗಲು ತೆರಳಿದ್ದ ಪ್ರತಿನಿಧಿಗಳ ಮಂಡಳಿಯ ಇಬ್ಬರು ಸದಸ್ಯರಿಗೆ ಕೊರೋನಾ ಸೋಂಕು ತಗುಲಿದೆ ಎನ್ನಲಾಗಿದೆ. ಬ್ರಿಟಿಷ್ ಮಾಧ್ಯಮಗಳು ಇಂತಹುದ್ದೊಂದು ವರದಿ ಬಿತ್ತರಿಸಿವೆ.

ವಿದೇಶಾಂಗ ಸಚಿವ ಜಯಶಂಕರ್ ಈ ತಂಡದ ಸದಸ್ಯರಾಗಿದ್ದು, ಈ ಮಾಹಿತಿಯನ್ನು ಖಚಿತಪಡಿಸಿದ್ದಾರೆ.

ವಿಡಿಯೋ ಕಾನ್ಫರೆನ್ಸ್ ಮೂಲಕ ಭಾಗಿಯಾಗುತ್ತಾರೆ ವಿದೇಶಾಂಗ ಸಚಿವ

ಈ ಸಂಬಂಧ ಬುಧವಾರ ಟ್ವೀಟ್ ಮಾಡಿರುವ ವಿದೇಶಾಂಗ ಸಚಿವ ಎಸ್‌. ಜಯಶಂಕರ್ ನಿನ್ನೆ ಸಂಜೆ ಕೊರೋನಾ ಸೋಂಕಿನ ಮಾಹಿತಿ ಲಭಿಸಿತು. ಮುಂಜಾಗೃತೆ ದೃಷ್ಟಿಯಿಂದ ಹಾಗೂ ಇತರರೊಂದಿಗೆ ಈ ಬಗ್ಗೆ ಚರ್ಚೆ ನಡೆಸಿ ನಾನು ಎಲ್ಲಾ ಸಭೆಗಳನ್ನು ವಿಡಿಯೋ ಕಾನ್ಫರೆನಸ್‌ ಮೂಲಕ ನಡೆಡಸಲು ನಿರ್ಧರಿಸಿದ್ದೇನೆ. ಜಿ7ರ ಇಂದಿನ ಸಭೆಯಲ್ಲೂ ವಿಡಿಯೋ ಕಾನ್ಫರೆನ್ಸ್ ಮೂಲಕ ನಾನು ಭಾಗಿಯಾಗುತ್ತೇನೆ ಎಂದಿದ್ದಾರೆ.

G7ನ ಭಾಗವಲ್ಲ ಭಾರತ

G7 ವಿಶ್ವದ ಅತೀ ಶ್ರೀಮಂತ ರಾಷ್ಟ್ರಗಳ ಸಮೂಹವಾಗಿದೆ. ಇದರಲ್ಲಿ ಕೆನಡಾ, ಫ್ರಾನ್ಸ್, ಜರ್ಮನಿ, ಜಪಾನ್, ಇಟಲಿ, ಯುಕೆ ಹಾಗೂ ಅಮೆರಿಕ ರಾಷ್ಟ್ರಗಳಿವೆ. ಭಾರರತ ಇದರ ಭಾಗವಲ್ಲ. ಹೀಗಿದ್ದರೂ G7 ಚೇರ್ಮನ್ ಆಗಿರುವ ಬ್ರಿಟನ್ ಭಾರತಕ್ಕೆ ಇದರಲ್ಲಿ ಭಾಗವಹಿಸಲು ಆಹ್ವಾನ ನೀಡಿದೆ. ಆರತ ಹೊರತುಪಡಿಸಿ ಆಸ್ಟ್ರೇಲಿಯಾ, ದಕ್ಷಿಣ ಕೊರಿಯಾವನ್ನೂ ಆಮಂತ್ರಿಸಿದೆ.