Asianet Suvarna News Asianet Suvarna News

ಟರ್ಸಿ ನಿರಾಶ್ರಿತರಿಗೆ ಫಿಫಾ ವಿಶ್ವಕಪ್‌ನ ಮೊಬೈಲ್‌ ಮನೆಗಳನ್ನು ದಾನ ಮಾಡಿದ ಕತಾರ್‌!

ಟರ್ಕಿ ಹಾಗೂ ಸಿರಿಯಾದಲ್ಲಿ ಸಂಭವಿಸಿದ ಭೀಕರ ಭೂಕಂಪಕ್ಕೆ ಲಕ್ಷಾಂತರ ಮಂದಿ ನಿರಾಶ್ರಿತರಾಗಿದ್ದಾರೆ. ಸಾವಿನ ಸಂಖ್ಯೆ 50 ಸಾವಿರದ ಗಡಿ ದಾಟುವ ಆತಂಕವಿದೆ. ಈ ನಡುವೆ ನಿರಾಶ್ರಿತರ ಪುನರ್ವಸತಿಗಾಗಿ ಟರ್ಕಿ ಹಾಗೂ ಸಿರಿಯಾ ಹೋರಾಟ ನಡೆಸುತ್ತಿದೆ. ಸಂಕಷ್ಟದಲ್ಲಿರುವ ದೇಶದ ಸಹಾಯಕ್ಕೆ ಬಂದಿರುವ ಕತಾರ್‌, ಫಿಫಾ ವಿಶ್ವಕಪ್‌ನಲ್ಲಿ ನಿರ್ಮಾಣ ಮಾಡಲಾದ 10 ಸಾವಿರಕ್ಕೂ ಅಧಿಕ ಮೊಬೈಲ್‌ ಮನೆಗಳನ್ನು ದಾನ ಮಾಡುವುದಾಗಿ ತಿಳಿಸಿದೆ.
 

Turkey Syria earthquakes Qatar Donates fifa World Cup Mobile Homes san
Author
First Published Feb 17, 2023, 4:26 PM IST

ದೋಹಾ (ಫೆ.17): ಭೂಕಂಪದಿಂದಾಗಿ ಟರ್ಕಿ ಹಾಗೂ ಸಿರಿಯಾ ದೇಶಗಳು ಅಕ್ಷರಶಃ ನರಕದಂತಾಗಿದೆ. ಎಲ್ಲಿ ನೋಡಿದರೂ, ಕಟ್ಟಡದ ಅವಶೇಷಗಳು ಹಾಗೂ ಅದರ ಅಡಿಗೆ ಬಿದ್ದಿರುವ ಶವಗಳು. ಈ ನಡುವೆ ಎರಡೂ ದೇಶಗಳಿಗೆ ವಿಶ್ವದಿಂದ ದೊಡ್ಡ ಮಟ್ಟದ ಸಹಾಯ ಸಿಕ್ಕಿದೆ. ವಿಶ್ವದ 70ಕ್ಕೂ ಅಧಿಕ ದೇಶಗಳು ಟರ್ಸಿ (ಟರ್ಕಿ ಮತ್ತು ಸಿರಿಯಾ) ದೇಶಗಳಿಗೆ ನೆರವಿನ ಹಸ್ತ ಚಾಚಿದೆ. ಭಾರತ ಆಪರೇಷನ್‌ ದೋಸ್ತ್‌ ಹೆಸರಿನಲ್ಲಿ ಟರ್ಕಿಯಲ್ಲಿ ಪಕ್ಷಣಾ ಕಾರ್ಯಾಚರಣೆ ಹಾಗೂ ನಿರಾಶ್ರಿತರ ಶಿಬಿರ, ಆಸ್ಪತ್ರೆಗಳನ್ನು ತೆರೆದಿದೆ. ಈ ನಡುವೆ ಕಳೆದ ವರ್ಷ ಭರ್ಜರಿಯಾಗಿ ಫಿಫಾ ವಿಶ್ವಕಪ್‌ ಆಯೋಜನೆ ಮಾಡಿದ್ದ ಕೊಲ್ಲಿ ರಾಷ್ಟ್ರ ಕತಾರ್‌, ವಿಶ್ವಕಪ್‌ ವೇಳೆ ಪ್ರವಾಸಿಗರಿಗೆ ನೆರವಾಗುವ ನಿಟ್ಟಿನಲ್ಲಿ 10 ಸಾವಿರಕ್ಕೂ ಅಧಿಕ ಮೊಬೈಲ್‌ ಮನೆಗಳನ್ನು ನಿರ್ಮಾಣ ಮಾಡಿತ್ತು. ಈಗ ಈ ಎಲ್ಲಾ ಮನೆಗಳನ್ನು ಭೂಕಂಪ ಪೀಡಿತ ಟರ್ಸಿ ದೇಶಕ್ಕೆ ದಾನ ಮಾಡುವುದಾಗಿ ಘೋಷಣೆ ಮಾಡಿದೆ. ಅದರಂತೆ ದೊಡ್ಡ ದೊಡ್ಡ ಟ್ರಕ್‌ಗಳಲ್ಲಿ ಈ ಮನೆಗಳು ಟರ್ಕಿ ಹಾಗೂ ಸಿರಿಯಾ ದೇಶಗಳಿಗೆ ತಲುಪುತ್ತಿವೆ. ಒಂದು ವಾರದ ಹಿಂದೆ ಸಂಭವಿಸಿದ ಭೂಕಂಪದಲ್ಲಿ ಈವರೆಗೂ ಸಾವಿಗೀಡಾದವರ ಸಂಖ್ಯ 40 ಸಾವಿರ ದಾಟಿದ್ದು, ಈ ಸಂಖ್ಯೆ 50 ಸಾವಿರಕ್ಕೆ ಏರುವ ಆತಂಕವಿದೆ. ಅದಲ್ಲದೆ, ಲಕ್ಷಾಂತರ ಮಂದಿ ಮನೆಗಳನ್ನು ಕಳೆದುಕೊಂಡು ಬೀದಿಗೆ ಬಂದಿದ್ದಾರೆ.

ಟರ್ಕಿಯಲ್ಲಿ ಈಗಾಗಲೇ 10 ಲಕ್ಷ ಮಂದಿ ನಿರಾಶ್ರಿತರಾಗಿದ್ದಾರೆ ಎಂದು ಅಂದಾಜಿಸಲಾಗಿದ್ದರೆ, ಸಿರಿಯಾದಲ್ಲಿ ಈ ಸಂಖ್ಯೆ ಇನ್ನಷ್ಟು ಏರಬಹುದು ಎಂದು ಈ ದೇಶಗಳಲ್ಲಿ ಪರಿಹಾರ ಕಾರ್ಯದಲ್ಲಿ ನಿರತರಾಗಿರುವ ತಂಡಗಳು ಹೇಳಿದೆ. ಉಭಯ ದೇಶಗಳಲ್ಲಿ ರಕ್ಷಣಾ ಕಾರ್ಯಾಚರಣೆ ಈಗಾಗಲೇ ಭರದಿಂದ ಸಾಗಿದೆ.  

ಟರ್ಕಿ - ಸಿರಿಯಾ ಭೂಕಂಪ: ಪರಿಹಾರ ಕಾರ್ಯ ಸುಗಮಕ್ಕೆ ಭಾರತೀಯ ಸೇನೆಯಿಂದ ಟ್ರ್ಯಾಕಿಂಗ್ ವ್ಯವಸ್ಥೆ ಜಾರಿ

ಅಂತರಾಷ್ಟ್ರೀಯ ಅಭಿವೃದ್ಧಿ ಮತ್ತು ವಿದೇಶಿ ನೆರವಿನ ಜವಾಬ್ದಾರಿ ಹೊಂದಿರುವ ಸರ್ಕಾರಿ ಸಂಸ್ಥೆಯಾಗಿರುವ ಕತಾರಿ ಫಂಡ್ ಫಾರ್ ಡೆವಲಪ್‌ಮೆಂಟ್ ಪೀಡಿತ ಪ್ರದೇಶಗಳಿಗೆ ಮೊದಲ ಬ್ಯಾಚ್ ವಸತಿ ಸೌಕರ್ಯಗಳನ್ನು ಕಳುಹಿಸುವ ವೀಡಿಯೊವನ್ನು ಟ್ವೀಟ್ ಮಾಡಿದೆ.

1939ರ ಮರಣ ದಾಖಲೆ ಮುರಿದ ಟರ್ಕಿ ಭೂಕಂಪ: 35 ಸಾವಿರ ಗಡಿ ದಾಟಿದ ಮೃತರ ಸಂಖ್ಯೆ

ಟರ್ಕಿ ಮತ್ತು ಸಿರಿಯಾದಲ್ಲಿನ ತುರ್ತು ಅಗತ್ಯಗಳ ದೃಷ್ಟಿಯಿಂದ, ನಮ್ಮ ಕ್ಯಾಬಿನ್‌ಗಳು ಮತ್ತು ಕಾರವಾನ್‌ಗಳನ್ನು ಈ ಪ್ರದೇಶಕ್ಕೆ ಸಾಗಿಸಲು ನಾವು ನಿರ್ಧಾರವನ್ನು ತೆಗೆದುಕೊಂಡಿದ್ದೇವೆ, ಟರ್ಕಿ ಮತ್ತು ಸಿರಿಯಾದ ಜನರಿಗೆ ಹೆಚ್ಚು ಅಗತ್ಯವಿರುವ ಮತ್ತು ತಕ್ಷಣದ ಬೆಂಬಲವನ್ನು ಒದಗಿಸುತ್ತೇವೆ ಎಂದು ಕತಾರ್‌ನ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

Follow Us:
Download App:
  • android
  • ios