ಪೆನ್ಸಿಲ್ವೇನಿಯಾ(ಏ.18): ಶ್ವಾನಗಳು ಅಪಾರ ಗ್ರಹಣ ಶಕ್ತಿ ಸಾಮರ್ಥ್ಯ ಹೊಂದಿವೆ ಎಂಬ ವಿಷಯ ಹೊಸತೇನಲ್ಲ. ಆದರೆ ವಿಶೇಷವೆಂದರೆ ಇದೀಗ ಇಡೀ ಜಗತ್ತನ್ನೇ ಕಾಡುತ್ತಿರುವ ಕೊರೋನಾ ಸೋಂಕನ್ನೂ ಶ್ವಾನಗಳು ಅತ್ಯಂತ ನಿಖರವಾಗಿ ಪತ್ತೆ ಮಾಡಬಲ್ಲವು. ಈ ಪ್ರಮಾಣ ಶೇ.96ರಷ್ಟುನಿಖರವಾಗಿ ಇರಬಲ್ಲದು ಎಂದು ಅಧ್ಯಯನ ವರದಿಯೊಂದು ಹೇಳಿದೆ.

ಅಮೆರಿಕದ ಪೆನ್ಸಿಲ್ವೇನಿಯಾ ವಿವಿಯ ಪಶು ಔಷಧ ಶಾಲೆಯ ತಜ್ಞರ ತಂಡವೊಂದು ಈ ಕುರಿತು ಸುದೀರ್ಘ ಅಧ್ಯಯನ ನಡೆಸಿ ವರದಿಯೊಂದನ್ನು ‘ಪ್ಲೋಸ್‌ ಒನ್‌’ ಎಂಬ ಮ್ಯಾಗಜೈನ್‌ನಲ್ಲಿ ಪ್ರಕಟಿಸಿದೆ. ಈ ವರದಿ ಅನ್ವಯ ಶ್ವಾನಗಳನ್ನು ಅತ್ಯಂತ ವಿಶೇಷವಾಗಿ ತರಬೇತುಗೊಳಿಸಿದರೆ ಅವು ಕೋವಿಡ್‌ ಸೋಂಕಿತರನ್ನು ಪತ್ತೆಮಾಡುವ ಪ್ರಮಾಣ ಶೇ.96ರಷ್ಟುನಿಖರವಾಗಿರುತ್ತದೆಯಂತೆ.

ಸೋಂಕು ಪತ್ತೆ ಹೇಗೆ?

- ಲ್ಯಾಬ್ರಡಾರ್‌ ಮತ್ತು ಬೆಲ್ಜಿಯನ್‌ ಮಲಿನೋಯ್ಸ್ ತಳಿಯ ಶ್ವಾನಗಳಿಂದ ಸೋಂಕು ಪತ್ತೆ

- ಕೋವಿಡ್‌ ಸೋಂಕಿತರ ಟೀಶರ್ಟ್‌ ಮೂಸಿ ಸೋಂಕು ಪತ್ತೆಹಚ್ಚಿದ ನಾಯಿಗಳು

- ಕೋವಿಡ್‌ ಇಲ್ಲದವರ ಟೀಶರ್ಟ್‌ ನೀಡಿದಾಗ ನೆಗೆಟಿವ್‌ ಚಿಹ್ನೆ ತೋರಿದವು

- 8 ನಾಯಿಗಳಿಗೆ ಸತತ 3 ವಾರ ತರಬೇತಿ ನೀಡಿ ಕೋವಿಡ್‌ ಪತ್ತೆಗೆ ನಿಯೋಜನೆ

Close