ತಂತ್ರಜ್ಞಾನವನ್ನು ಪುಟ್ಟ ಮಗು ಹೇಗೆ ಬಳಸುತ್ತಿದೆ ನೋಡಿ ತನ್ನ ಇಷ್ಟದ ಹಾಡು ಪ್ಲೇ ಮಾಡಿಸಿಕೊಂಡ ಕಂದ ವಾಯ್ಸ್‌ ಅಸಿಸ್ಟೆಂಟ್ ಬಳಸಿದ ಸ್ಮಾರ್ಟ್‌ ಕಿಡ್  

ಇಂದು ತಂತ್ರಜ್ಞಾನ ಸಾಕಷ್ಟು ಮುಂದುವರೆದಿದ್ದು, ಪುಟ್ಟ ಮಕ್ಕಳು ಕೂಡ ತಂತ್ರಜ್ಞಾನವನ್ನು ಅಷ್ಟೇ ಸ್ಮಾರ್ಟ್‌ ಆಗಿ ಬಳಸಿಕೊಳ್ಳುತ್ತಿದ್ದಾರೆ. ವಾಯ್ಸ್ ಆಸಿಸ್ಟೆಂಟ್ ಆಗಿರುವ ಅಲೆಕ್ಸಾಗೆ ಈಗಷ್ಟೇ ಹೆಜ್ಜೆ ಇಡಲು ಕಲಿತ ಮಗುವೊಂದು ತನ್ನ ಇಷ್ಟದ ಹಾಡು ಹಾಕುವಂತೆ ಕೇಳುತ್ತಿದ್ದು ಇದಕ್ಕೆ ಸ್ಪಂದಿಸಿದ ಅಲೆಕ್ಸ್‌ ಹಾಡು ಪ್ಲೇ ಮಾಡುತ್ತದೆ. ಕೂಡಲೇ ಖುಷಿಯಾದ ಮಗು ನಿಂತಲೇ ಕುಣಿಯಲು ಶುರು ಮಾಡುತ್ತದೆ. ಈ ದೃಶ್ಯ ಈಗ ಸಾಮಾಜಿಕ ಜಾಲತಾಣವಾದ ಇನ್ಸ್ಟಾಗ್ರಾಮ್‌ನಲ್ಲಿ ವೈರಲ್ ಆಗಿದೆ. ಮಗುವಿನ ಮುದ್ದಾದ ಡಾನ್ಸ್ ಹಾಗೂ ಸ್ಮಾರ್ಟ್‌ನೆಸ್‌ ಎಲ್ಲರ ಗಮನ ಸೆಳೆಯುತ್ತಿದೆ.

Add Asianetnews Kannada as a Preferred SourcegooglePreferred

ವೀಡಿಯೊದಲ್ಲಿ, ಪುಟ್ಟ ಹುಡುಗಿ, ವಾಯ್ಸ್‌ ಅಸಿಸ್ಟೆಂಟ್‌ ಆಗಿರುವ ಅಲೆಕ್ಸಾಗೆ ತಾನು ಇಷ್ಟಪಡುವ ಹಾಡನ್ನು ಪ್ಲೇ ಮಾಡಲು ವಿನಂತಿಸುತ್ತಾಳೆ. ಈ ವಿಡಿಯೋದಲ್ಲಿರುವ ಇನ್ನು ಕ್ಯೂಟ್‌ ಎನಿಸುವ ವಿಷಯವೆಂದರೆ ಪುಟ್ಟ ಕಂದನಿಗೆ ಹಾಡಿನ ಹೆಸರೇನು ಎಂಬುದು ಗೊತ್ತಿಲ್ಲ. ಆದರೂ ಅದರ ಟ್ಯೂನ್‌ ಅನ್ನು ಅಕೆ ಹಾಡುವುದನ್ನು ಕೇಳಿ ಅಲೆಕ್ಸ್‌ ಮೂಲ ಹಾಡನ್ನು ಪ್ಲೇ ಮಾಡುತ್ತದೆ. 

View post on Instagram

ಇದು ಅಂತಿಂಥ ವ್ಯಾಕ್ಯೂಂ ಕ್ಲೀನರ್ ಅಲ್ಲ, ಮಾತಿನಲ್ಲೇ ಕೆಲ್ಸ ಮಾಡುತ್ತೆ ಎಲ್ಲಾ!

ಹೇ ಅಲೆಕ್ಸಾ, A-a-aye ಅನ್ನು ಪ್ಲೇ ಮಾಡಿ, ಎಂದು ಬರೆದು ಈ ವೀಡಿಯೋವನ್ನು ಪೋಸ್ಟ್‌ ಮಾಡಲಾಗಿದ್ದು, ಇದನ್ನು ಅಮೆರಿಕದ ರೆಗ್ಗೀ ರಾಕ್ ಬ್ಯಾಂಡ್ ( American reggae rock band) ಆಗಿರುವ ಡರ್ಟಿ ಹೆಡ್ಸ್ (Dirty Heads) ಅವರು ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ. ಹಾಡು ಪ್ಲೇ ಆಗಲು ಆರಂಭಿವಾದ ಕೂಡಲೇ ಅಂಬೆಗಾಲಿಡುವ ಮಗು ತನ್ನ ಉತ್ಸಾಹವನ್ನು ತಡೆಯಲು ಸಾಧ್ಯವಾಗದೆ ಡಾನ್ಸ್‌ ಮಾಡಲು ಶುರು ಮಾಡುತ್ತದೆ. ಎರಡು ವಾರಗಳ ಹಿಂದೆ ಶೇರ್ ಮಾಡಲಾದ ಈ ವಿಡಿಯೋಗೆ ಇದುವರೆಗೆ 1.7 ಲಕ್ಷಕ್ಕೂ ಹೆಚ್ಚು ಲೈಕ್‌ಗಳು ಬಂದಿವೆ. ಹಲವಾರು ಮಂದಿ ಕಾಮೆಂಟ್ಸ್ ಕೂಡ ಮಾಡಿದ್ದಾರೆ.

Alexaಗೆ ಧ್ವನಿ ನೀಡಲಿದ್ದಾರೆ ಬಿಗ್‌ ಬಿ; ಅಲೆಕ್ಸಾ, ಸೆ ಹಲೋ ಟು ಅಮಿತಾಬ್!

ಇದು ಉತ್ತಮ ಮಕ್ಕಳ ಹಾಡು" ಎಂದು ಇನ್ಸ್ಟಾಗ್ರಾಮ್‌ ಬಳಕೆದಾರರು ಕಾಮೆಂಟ್ ಮಾಡಿದ್ದಾರೆ. ಓ ಮೈ ಗಾಡ್‌ ಆಕೆಯ ಪುಟ್ಟ ಡಾನ್ಸ್ ನೋಡಿ ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ಮಗು ಫ್ಲೇ ಮಾಡಲು ಹೇಳಿ ಡಾನ್ಸ್‌ ಮಾಡಿದ ವೆಕೇಶನ್ ಹಾಡು 2017 ರಲ್ಲಿ ಬಿಡುಗಡೆಯಾಗಿತ್ತು, ಹಾಗೆಯೇ ಇದು ಇನ್ಸ್ಟಾಗ್ರಾಮ್‌ ರೀಲ್‌ನಲ್ಲಿ ಸಾಕಷ್ಟು ಜನಪ್ರಿಯತೆ ಗಳಿಸಿದೆ.