ಉದ್ಯಮಸ್ನೇಹಿ ದೇಶ ರಾರಯಂಕ್‌ಗಾಗಿ ವಿಶ್ವಸಂಸ್ಥೆಗೆ ಚೀನಾದಿಂದ ಧೋಖಾ?| ಪರಿಷ್ಕೃತ ಪಟ್ಟಿ ಪ್ರಕಟ| 7 ಸ್ಥಾನ ಕುಸಿದ ಚೀನಾ
ನವದೆಹಲಿ(ಡಿ.19): ಕುತಂತ್ರ ಬುದ್ಧಿಗಳಿಗೆ ಹೆಸರುವಾಗಿಯಾಗಿರುವ ಚೀನಾ, ವಿಶ್ವ ಬ್ಯಾಂಕ್ ಪ್ರತಿ ವರ್ಷ ಬಿಡುಗಡೆ ಮಾಡುವ ಉದ್ಯಮಸ್ನೇಹಿ ರಾಷ್ಟ್ರಗಳ ಪಟ್ಟಿಯಲ್ಲಿ ಉತ್ತಮ ರಾರಯಂಕ್ ಪಡೆಯಲು ಅಡ್ಡ ದಾರಿ ಹಿಡಿದಿತ್ತಾ ಎಂಬ ಅನುಮಾನ ಇದೀಗ ವ್ಯಕ್ತವಾಗತೊಡಗಿದೆ. ಇದಕ್ಕೆ ಪುಷ್ಟಿನೀಡುವಂತೆ, 2018ನೇ ಸಾಲಿನ ಉದ್ಯಮಸ್ನೇಹಿ ದೇಶಗಳ ಪಟ್ಟಿಯನ್ನು ವಿಶ್ವ ಬ್ಯಾಂಕ್ ಪರಿಷ್ಕರಣೆ ಮಾಡಿದ್ದು ಚೀನಾ 7 ಸ್ಥಾನ ಕೆಳಕ್ಕೆ ಕುಸಿದಿದೆ.
ಹಿಂದಿನ ವರದಿಗಳಲ್ಲಿ ಹಲವು ಅಕ್ರಮ ಬೆಳಕಿಗೆ ಬಂದ ಹಿನ್ನೆಲೆಯಲ್ಲಿ ಕಳೆದ ಆಗಸ್ಟ್‌ನಲ್ಲಿ ಉದ್ಯಮಸ್ನೇಹಿ ರಾಷ್ಟ್ರಗಳ ರಾರಯಂಕಿಂಗ್ ಬಿಡುಗಡೆಯನ್ನು ವಿಶ್ವ ಬ್ಯಾಂಕ್ ತಡೆಹಿಡಿದಿತ್ತು. ಇದೀಗ ಹಿಂದಿನ ವರದಿಗಳನ್ನು ಪರಿಷ್ಕರಿಸಿರುವ ವಿಶ್ವ ಬ್ಯಾಂಕ್, 2018ನೇ ಸಾಲಿಗೆ ಸಂಬಂಧಿಸಿದಂತೆ ಹೊಸ ಪಟ್ಟಿಬಿಡುಗಡೆ ಮಾಡಿದೆ. 2018ರ ವರದಿಯಲ್ಲಿ ಈ ಮೊದಲು 78ನೇ ಸ್ಥಾನದಲ್ಲಿದ್ದ ಚೀನಾ ಈಗ 85ಕ್ಕೆ ಕುಸಿದಿದೆ. ಚೀನಾ, ಯುಎಇ, ಸೌದಿ ಅರೇಬಿಯಾ ಹಾಗೂ ಅಜರ್‌ಬೈಜಾನ್ ರಾರಯಂಕಿಂಗ್‌ಗೆ ಸಂಬಂಧಿಸಿದಂತೆ ವ್ಯತ್ಯಾಸವಾಗಿದೆ.
ರಾರಯಂಕಿಂಗ್‌ನಲ್ಲಿ ಬದಲಾವಣೆ ಮಾಡುವಂತೆ ಅತಿಯಾದ ಒತ್ತಡ ಬಂದಿತ್ತು ಎಂಬ ಆರೋಪವನ್ನು ಸಿಬ್ಬಂದಿಯೇ ಮಾಡಿದ್ದರಿಂದ ವಿಶ್ವ ಬ್ಯಾಂಕ್ ತನ್ನ ರಾರಯಂಕ್ ಪಟ್ಟಿಯನ್ನು ಪರಿಷ್ಕರಣೆಗೆ ಒಳಪಡಿಸಿತ್ತು.
Read Exclusive COVID-19 Coronavirus News updates, from Karnataka, India and World at Asianet News Kannada.
ವರ್ಚುಯಲ್ ಬೋಟ್ ರೇಸಿಂಗ್ ಗೇಮ್ ಆಡಿ ಮತ್ತು ನಿಮಗೆ ನೀವೇ ಸವಾಲು ಹಾಕಿಕೊಳ್ಳಿ ಈಗಲೇ ಆಡಲು ಕ್ಲಿಕ್ಕಿಸಿ
Last Updated Dec 19, 2020, 1:18 PM IST