ತಪ್ಪಿದ ಭಾರೀ ದುರಂತ, ಚೀನಾದ ರನ್‌ವೇಯಲ್ಲಿ ಹೊತ್ತಿ ಉರಿದ Tibet Airlines
ಟಿಬೆಟ್ ಏರ್ ಲೈನ್ಸ್ ನ ವಿಮಾನವೊಂದು ಟೇಕ್ ಆಫ್ ಆಗುವ ವೇಳೆ ರನ್ ವೇನಲ್ಲಿ ಹೊತ್ತಿ ಉರಿದ ಘಟನೆ ಚೀನಾದಲ್ಲಿ ನಡೆದಿದೆ. 40 ಮಂದಿ ಗಾಯಗೊಂಡಿರುವ ಬಗ್ಗೆ ವರದಿಯಾಗಿದೆ.
ಬೀಜಿಂಗ್(ಮೇ.12): ಚೀನಾದ ಚಾಂಗ್ ಕಿಂಗ್ ನಲ್ಲಿ ಇಂದು ಬೆಳಗ್ಗೆ ಭಾರೀ ಅವಘಡವೊಂದು ತಪ್ಪಿದೆ. ಟಿಬೆಟ್ ಏರ್ ಲೈನ್ಸ್ ನ ವಿಮಾನವೊಂದು ಟೇಕ್ ಆಫ್ ಆಗುವ ವೇಳೆ ರನ್ ವೇನಲ್ಲಿ ಹೊತ್ತಿ ಉರಿದಿದೆ. ಚೀನಾಕ್ಕೆ ಸೇರಿದ ಜೋಂಗ್ ಕಿಂಗ್ ಜಿಂಗ್ ಬಿ ವಿಮಾನ ನಿಲ್ದಾಣದಲ್ಲಿ ಈ ಅವಘಡ ನಡೆದಿದೆ.
ಚೀನಾದ ಅಧಿಕೃತ ಪತ್ರಿಕೆ ಪೀಪಲ್ಸ್ ಡೈಲಿ ಪ್ರಕಾರ, ಈ ವಿಮಾನದಲ್ಲಿ 113 ಪ್ರಯಾಣಿಕರು ಮತ್ತು ಒಂಬತ್ತು ಸಿಬ್ಬಂದಿ ಇದ್ದರು ಎನ್ನಲಾಗಿದ್ದು, 40 ಮಂದಿ ಗಾಯಗೊಂಡಿರುವ ಬಗ್ಗೆ ವರದಿಯಾಗಿದೆ. ಗಾಯಾಳುಗಳನ್ನು ಹತ್ತಿರದ ಆಸ್ಪತ್ರೆಗೆ ದಾಖಲಿಸಲಾಗಿದೆ.
ಏರ್ ಬಸ್ ಎ319 ವಿಮಾನ ಚೋಂಗ್ ಕಿಂಗ್ ನಿಂದ ಟಿಬೆಟ್ ನ ರಾಜಧಾನಿ ಲ್ಹಾಸಾಗೆ ತೆರಳುತ್ತಿದ್ದಾಗ ಈ ದುರ್ಘಟನೆ ಸಂಭವಿಸಿದೆ. ಘಟನೆ ವಿಡಿಯೋ ಕೂಡಾ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ವಿಮಾನ ಬೆಂಕಿಯನ್ನು ಉರಿಯುತ್ತಿರುವುದನ್ನು ಕಾಣಬಹುದು.
ಬೆಂಕಿ ಹೊತ್ತಿಕೊಂಡಾಗ ವಿಮಾನವು ಟಿಬೆಟ್‌ನ ನೈಂಗ್‌ಚಿಗೆ ಹೊರಡುವ ಸಿದ್ಧತೆಯಲ್ಲಿತ್ತು. ಅಪಘಾತವಾಗಲು ಕಾರಣ ಏನು ಎಂಬ ಬಗ್ಗೆ ತನಿಖೆ ನಡೆಯುತ್ತಿದೆ ಎಂದು ವಿಮಾನಯಾನ ಸಂಸ್ಥೆ ತಿಳಿಸಿದೆ. ಸದ್ಯ ರನ್‌ವೇಯನ್ನು ಮುಚ್ಚಲಾಗಿದ್ದು, ಮಿಕ್ಕ ಎರಡು ರನ್‌ವೇ ಕಾರ್ಯ ನಿರ್ವಹಿಸುತ್ತಿದೆ. ಕಳೆದ ಮಾರ್ಚ್ ತಿಂಗಳಿನಲ್ಲಿ ಚೀನಾದ ವಿಮಾನವು ಗುವಾಂಗ್‌ಕ್ಸಿ ಜುವಾಂಗ್ ಸ್ವಾಯತ್ತ ಪ್ರದೇಶದ ಟೆಂಗ್‌ಕ್ಸಿಯಾನ್ ಕೌಂಟಿಯ ಗ್ರಾಮಾಂತರ ಪ್ರದೇಶದಲ್ಲಿ ಬೋಯಿಂಗ್ 737 ವಿಮಾನ (Boeing 737)ವು ಪತನಗೊಂಡಿತ್ತು. ಒಂಬತ್ತು ಸಿಬ್ಬಂದಿ ಸೇರಿದಂತೆ ವಿಮಾನದಲ್ಲಿದ್ದ ಎಲ್ಲಾ 132 ಜನರು ಸಾವನ್ನಪ್ಪಿದರು.
KSU ACT 2000 ತಿದ್ದುಪಡಿಗೆ ನಿವೃತ್ತ ವಿಸಿ ಫೋರಂ ಸಲಹೆ!
ಪಿಒಕೆಯಲ್ಲಿ ಪ್ರವಾಹಕ್ಕೆ ಕೊಚ್ಚಿ ಹೋದ ಚೀನಾ ನಿರ್ಮಿತ ಹಾಸನಾಬಾದ್ ಸೇತುವೆ!: ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿ (Pak occupied Kashmir) ಚೀನಾ (China)ಹಾಗೂ ಪಾಕಿಸ್ತಾನಕ್ಕೆ (Pakistan) ಸಂಪರ್ಕ ಕಲ್ಪಿಸುವ ಪ್ರಧಾನ ಸೇತುವೆಯಾಗಿದ್ದ ಚೀನಾ ನಿರ್ಮಾಣ ಮಾಡಿದ್ದ ಹಾಸನಾಬಾದ್ ಬ್ರಿಜ್ (Hassanabad bridge) ಪ್ರವಾಹಕ್ಕೆ (Flood) ಸಂಪೂರ್ಣವಾಗಿ ಕೊಚ್ಚಿಹೋಗಿದೆ. ಸೇತುವೆ ಕೊಚ್ಚಿ ಹೋಗುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಪಾಕಿಸ್ತಾನದ ಗಿಲ್ಗಿಟ್-ಬಾಲ್ಟಿಸ್ತಾನ್ (Gilghit-Baltisthan) ಪ್ರದೇಶದ ಐತಿಹಾಸಿಕ ಹಾಸನಾಬಾದ್ ಸೇತುವೆಯು ಹಿಮನದಿಯ (Glaciar)ಸರೋವರದ ಪ್ರವಾಹದ ನೀರಿನಿಂದ ಶನಿವಾರ ಸಂಪೂರ್ಣವಾಗಿ ನಾಶವಾಗಿದೆ. ಕಾರಕೋರಂ ಹೆದ್ದಾರಿಯಲ್ಲಿ ನಿರ್ಮಾಣವಾಗಿದ್ದ ಸೇತುವೆಯು ಪಾಕಿಸ್ತಾನದ ಉತ್ತರ ಭಾಗದಲ್ಲಿರುವ ಶಿಶ್ಪರ್ ಪರ್ವತದ ಬಳಿ ಇರುವ ಶಿಶ್ಪರ್ ಹಿಮನದಿಯ ಪ್ರವಾಹದಿಂದ ಕೊಚ್ಚಿಹೋಗಿದೆ. ಈ ಭಾಗದಲ್ಲಿ ಉಷ್ಣ ಮಾರುತದಿಂದಾಗಿ (Heat Wave) ಹಿಮನದಿ ಕರಗುತ್ತಿದೆ. ಇದರಿಂದ ನೀರಿನ ಮಟ್ಟ ಏರಿಕೆಯಾಗುತ್ತಿದ್ದು, ಪ್ರವಾಹ ಉಂಟಾಗುತ್ತಿದೆ ಎಂದು ವರದಿಯಾಗಿದೆ.
Eastern Railway Recruitment 2022: ಬರೋಬ್ಬರಿ 1201 ಹುದ್ದೆಗಳಿಗೆ ಅರ್ಜಿ ಆಹ್ವಾನ
ಹವಮಾನ ಬದಲಾವಣೆಯ ಕುರಿತಾದ ಫೆಡರಲ್ ಸಚಿವ ಹಾಗೂ ಸೆನೆಟರ್ ಶೆರಿ ರೆಹಮಾನ್ ( Pakistan's Federal Minister Climate Change and Senator Sherry Rehman ) ಅವರು ವಿಡಿಯೋವೊಂದನ್ನು ಹಂಚಿಕೊಂಡಿದ್ದು, ನೀರಿನ ಮಟ್ಟ ಹೆಚ್ಚಾದಂತೆ ಸೇತುವೆ ಕುಸಿಯುವ ಮತ್ತು ಬೀಳುವ ನಾಟಕೀಯ ದೃಶ್ಯಗಳನ್ನು ತೋರಿಸುತ್ತದೆ. ಸೇತುವೆ ಕೊಚ್ಚಿ ಹೋಗಿರುವುದರಿಂದ ಸೇತುವೆಯ ಸಮೀಪ ನಿಂತಿರುವ ಜನರನ್ನು ದೂರ ಸರಿಯುವಂತೆ ಹೇಳುತ್ತಿರುವ ದೃಶ್ಯವೂ ದಾಖಲಾಗಿದೆ.