Asianet Suvarna News Asianet Suvarna News

ಅಮೆರಿಕದಲ್ಲಿ 150 ವರ್ಷದಿಂದ ಮಂಗಳವಾರವೇ ಯಾಕೆ ನಡೆಯುತ್ತೆ ಚುನಾವಣೆ?

ಅಮೆರಿಕದ ಅಧ್ಯಕ್ಷೀಯ ಚುನಾವಣೆ| ಮಂಗಳವಾರವೇ ಈ ಚುನಾವಣೆ ಯಾಕೆ ನಡೆಯುತ್ತೆ?| ಉಪ ಅಧ್ಯಕ್ಷರಾಗಿ ಆಯ್ಕೆಯಾದ ಬೈಡೆನ್ ಅದೃಷ್ಟ ಪರೀಕ್ಷೆ

The US presidential election is always held on Tuesday here is why pod
Author
Bangalore, First Published Nov 3, 2020, 4:10 PM IST

ವಾಷಿಂಗ್ಟನ್(ನ.03): ಅಮೆರಿಕದ ಅಧ್ಯಕ್ಷೀಯ ಚುನಾವಣೆ ವಿಚಾರದಲ್ಲಿ ಬಹಳ ವಿಶೇಷ ದಿನವಾಗಿದೆ. ಇದೇ ದಿನ ಅಧ್ಯಕ್ಷರ ಆಯ್ಕೆಗೆ ಮತದಾನ ನಡೆಯುತ್ತದೆ. ರಿಪಬ್ಲಿಕನ್ ಪಕ್ಷದ ಪರವಾಗಿ ಡೊನಾಲ್ಡ್ ಟ್ರಂಪ್ ಹಾಗೂ ಡೆಮಾಕ್ರಟಿಕ್ ಪಾರ್ಟಿ ಪರವಾಗಿ ಎರಡು ಬಾರಿ ಅಮೆರಿಕದ ಉಪ ಅಧ್ಯಕ್ಷರಾಗಿ ಆಯ್ಕೆಯಾದ ಬೈಡೆನ್ ಅದೃಷ್ಟ ಪರೀಕ್ಷೆಗಿಳಿದಿದ್ದಾರೆ.

ಭಾರತೀಯ ಸಮಯಾನುಸಾರ ಸಂಜೆ 4.30 ಗಂಟೆಗೆ ಮತದಾನ ಆರಂಭವಾಗಿ, ಬುಧವಾರ ಬೆಳಗ್ಗೆ 7.30ಗಂಟೆವರೆಗೆ ನಡೆಯುತ್ತದೆ. ಅಷ್ಟಕ್ಕೂ ನಿಮಗೆ ಗೊತ್ತಾ ಅಮೆರಿಕದಲ್ಲಿ ಮಂಗಳವಾರದಂದೇ ಚುನಾವಣೆ ನಡೆಯುತ್ತದೆ? ಇದರ ಹಿಂದೆ ಧಾರ್ಮಿಕ ಹಾಗೂ ಸಾಮಾಜಿಕ ಕಾರಣ ಎರಡೂ ಇದೆ. ಅದರಲ್ಲೂ ವಿಶೇಷವೆಂದರೆ 19ನೇ ಶತಮಾನದಲ್ಲಿ ಅಮೆರಿಕದಲ್ಲಿ ನವೆಂಬರ್‌ಗೂ ಮೊದಲು ಸೋಮವಾರದ ಬಳಿಕ ಬರುವ ಮಂಗಳವಾರದಂದು ಚುನಾವಣೆ ನಡೆಯುತ್ತದೆ.

ನವೆಂಬರ್‌ನಲ್ಲೇ ಚುನಾವಣೆ ಯಾಕೆ?

1845ನಿಂದ ಅಮೆರಿಕದಲ್ಲಿ ಅಧ್ಯಕ್ಷೀಯ ಚುನಾವಣೆ ನವೆಂಬರ್‌ನ ಮೊದಲ ಮಂಗಳವಾರ ನಡೆಯುತ್ತದೆ. ಅಮೆರಿಕ ಕಾಂಗ್ರೆಸ್‌ನಲ್ಲಿ ಇದಕ್ಕೆ ಸಂಬಂಧಿಸಿದಂತೆ ನಿಯಮವೊಂದನ್ನು ರೂಪಿಸಿತ್ತು. ನವೆಂಬರ್‌ನಲ್ಲಿ ಇದಕ್ಕೆ ಚುನಾವಣೆ ನಡೆಸಲು ನಿರ್ಧಾರ ತೆಗೆದುಕೊಳ್ಳಲಾಯ್ತು, ಇದರಿಂದ ರೈತರ ಬೆಳೆ ಹಾಳಾಗಬಾರದೆಂಬ ನಿಟ್ಟಿನಲ್ಲಿ ಇಂತಹ ನಿರ್ಧಾರ ತೆಗೆದುಕೊಳ್ಳಲಾಯ್ತು. ಯಾಕೆಂದರೆ ನವೆಂಬರ್‌ವರೆಗೆ ಬೆಳೆ ಬೆಳೆಯುವ ಕೆಲಸ ನವೆಂಬರ್‌ ಒಳಗೆ ಪೂರ್ಣಗೊಳ್ಳುತ್ತದೆ. ಜೊತೆಗೆ ಹೆಚ್ಚು ಚಳಿಯೂ ಇರುವುದಿಲ್ಲ. ಅಲ್ಲದೇ ಬೇಸಿಗೆ ಆರಂಭ, ವಸಂತ ಋತುವಿನಲ್ಲಿ ಚುನಾವಣೆ ನಡೆಯುವುದರಿಂದ ರೈತರ ಮೇಲೂ ಪ್ರಭಾವ ಬೀರುತ್ತದೆ.

ಮಂಗಳವಾರವೇ ಯಾಕೆ?

1800ರ ದಶಕದಲ್ಲಿ ಅಮೆರಿಕದ ಹೆಚ್ಚಿನ ಜನಸಂಖ್ಯೆ ಕೃಷಿಯಲ್ಲಿ ತೊಡಗಿತ್ತು. ರೈತರು ಸಾಮಾನ್ಯವಾಗಿ ಸೋಮವಾರದಿಂದ ಶನಿವಾರದವರೆಗೆ ತಮ್ಮ ಹೊಲದಲ್ಲಿ ದುಡಿಯುತ್ತಿದ್ದರು. ರೈತರು ದೀರ್ಘ ಪ್ರಯಾಣ ಕೈಗೊಂಡು ಮತದಾನ ಕೇಂದ್ರಗಳಿಗೆ ತಲುಪಬೇಕಾಗಿತ್ತು. ಹೀಗಿರುವಾಗ ಶನಿವಾರ ಕೆಲಸ ಮಾಡಿ ಭಾನುವಾರ ಮತದಾನ ಕೇಂದ್ರಗಳಿಗೆ ತಲುಪುವುದು ಸಾಆಧ್ಯವಾಗಿತ್ತು. ಇದಾದ ಬಳಿಕ ಬುಧವಾತರ ಮಂಡಿಗಳಲ್ಲಿ ಬೆಳೆ ಮಾರಾಟವಾಗುತ್ತಿತ್ತು. ಇದಾದ ಬಳಿಕವೇ ಅವರು ಮರಳಬೇಕಾಗಿತ್ತು. ವೀಕೆಂಡ್‌ನಲ್ಲಿ ಚುನಾವಣೆ ಇಟ್ಟರೆ ಮತ ಚಲಾಯಿಸುವವರ ಸಂಖ್ಯೆ ಕಡಿಮೆಯಾಗುತ್ತಿತ್ತು. ಹೀಗಿರುವಾಗ ಚುನಾವಣೆ ನಡೆಸಲು ಮಂಗಳವಾರವೇ ಸೂಕ್ತವಾಗಿತ್ತು.

ಧಾರ್ಮಿಕ ಕಾರಣವೇನು?

ಮಂಗಳವಾರ ಚುನಾವಣೆ ನಡೆಸುವ ಹಿಂದೆ ಧಾರ್ಮಿಕ ಕಾರಣವೂ ಇದೆ. ಅಮೆರಿಕದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನರು ಕ್ರಿಶ್ಚಿಯನ್ ಧರ್ಮದವರಾಗಿದ್ದಾರೆ. ಇಲ್ಲಿ ಹೆಚ್ಚಿನ ಜನರು ಭಾನುವಾರ ಚರ್ಚ್‌ಗೆ ತೆರಳುತ್ತಾರೆ. ಹೀಗಿರುವಾಗ ವಾರಾಂತ್ಯದಲ್ಲಿ ಚುನಾವಣೆ ಇಡುವುದರಿಂದ ವೋಟ್‌ ಮಾಡುವವರ ಮೇಲೂ ಪರಿಣಾಮ ಬೀರುತ್ತದೆ. 

Follow Us:
Download App:
  • android
  • ios