Asianet Suvarna News Asianet Suvarna News

ಏಡ್ಸ್‌ ಗೆದ್ದಿದ್ದ ವಿಶ್ವದ ಮೊದಲ ವ್ಯಕ್ತಿ ಕ್ಯಾನ್ಸರ್‌ಗೆ ಬಲಿ!

ವಿಶ್ವದಲ್ಲೇ ಮೊದಲ ಬಾರಿಗೆ ಮಾರಕ ಎಚ್‌ವಿ ಏಡ್ಸ್‌ ವಿರುದ್ದ ಹೋರಾಡಿ ಗೆದ್ದಿದ್ದ ವ್ಯಕ್ತಿ| ಏಡ್ಸ್‌ ಗೆದ್ದಾತನನ್ನು ಸೋಲಿಸಿದ ಕ್ಯಾನ್ಸರ್| ಜರ್ಮನಿ ರಾಜಧಾನಿ ಬರ್ಲಿನ್‌ಬಲ್ಲಿ ವಾಸಿಸುತ್ತಿದ್ದ  ವ್ಯಕ್ತಿ

The first known person to be cured of HIV has died of cancer pod
Author
Bangalore, First Published Oct 1, 2020, 9:56 AM IST

ಲಂಡನ್‌(ಅ.01): ವಿಶ್ವದಲ್ಲೇ ಮೊದಲ ಬಾರಿಗೆ ಮಾರಕ ಎಚ್‌ವಿ ಏಡ್ಸ್‌ ವಿರುದ್ದ ಹೋರಾಡಿ ಗೆದ್ದಿದ್ದ ವ್ಯಕ್ತಿ ಕ್ಯಾನ್ಸರ್‌ಗೆ ಶರಣಾಗಿದ್ದಾರೆ. ತಿಮೊತಿ ರಾಯ್‌ ಬ್ರೌನ್‌ (54) ಎಂಬವರೇ ಮರುಜೀವ ಪಡೆದು ಮರಳಿ ಮರೆಯಾದವರು.

1995ರಲ್ಲಿ ಜರ್ಮನಿ ರಾಜಧಾನಿ ಬರ್ಲಿನ್‌ಬಲ್ಲಿ ವಾಸಿಸುತ್ತಿದ್ದ ವೇಳೆ ಇವರಿಗೆ ಮಹಾಮಾರಿ ಏಡ್ಸ್‌ ತಗುಲಿತ್ತು. ಸತತ ಚಿಕಿತ್ಸೆಯ ಫಲದಿಂದಾಗಿ 2007ರಲ್ಲಿ ಏಡ್ಸ್‌ ವಿರುದ್ಧ ಹೋರಾಡಿ ಗೆಲ್ಲುವ ಮೂಲಕ ಈ ಮಾರಿಯನ್ನು ಮಣಿಸಿದ ಮೊದಲ ವ್ಯಕ್ತಿ ಎಂಬ ಖ್ಯಾತಿಗೆ ಪಾತ್ರವಾಗಿದ್ದರು.

ಡ್ಸ್‌ ಚಿಕಿತ್ಸೆ ನಡುವೆಯೇ 2006ರಲ್ಲಿ ರಕ್ತ ಕ್ಯಾನ್ಸರ್‌ಗೆ ತುತ್ತಾಗಿದ್ದ ಬ್ರೌನ್‌ ಈಗ ಸಾವನ್ನಪ್ಪಿದ್ದಾರೆ. ಸತತ ಐದು ತಿಂಗಳು ಕ್ಯಾನ್ಸರ್‌ ವಿರುದ್ಧ ಹೋರಾಡಿ ನನ್ನ ಪತಿ ಮೃತರಾಗಿದ್ದಾರೆ ಎಂದು ಅವರ ಪತ್ನಿ ಹೊಫೆಗನ್‌ ತಮ್ಮ ಫೇಸ್ಬುಕ್‌ನಲ್ಲಿ ಬರೆದುಕೊಂಡಿದ್ದಾರೆ.

Follow Us:
Download App:
  • android
  • ios