ಬೀಜಿಂಗ್‌[ಫೆ.22]: ಮಾರಣಾಂತಿಕ ಕೊರೋನಾ ವೈರಸ್‌ ಪೀಡಿತರ ಚಿಕಿತ್ಸೆಗಾಗಿ ತನ್ನ ಮದುವೆಯನ್ನೇ ಮುಂದೂಡಿದ್ದ ಚೀನಾದ 29 ವರ್ಷದ ವೈದ್ಯನೊಬ್ಬ ಕೊರೋನಾ ವೈರಸ್‌ ಸೋಂಕು ತಗುಲಿ ಮೃತಪಟ್ಟಿರುವ ಹೃದಯ ವಿದ್ರಾವಕ ಘಟನೆ ಚೀನಾದ ವುಹಾನ್‌ನಲ್ಲಿ ನಡೆದಿದೆ. ಈ ಮೂಲಕ ಚೀನಾದಲ್ಲಿ ಕೊರೋನಾ ವೈರಸ್‌ಗೆ ಬಲಿ ಆದ ವೈದ್ಯರ ಸಂಖ್ಯೆ 9ಕ್ಕೆ ಏರಿಕೆ ಆಗಿದೆ.

ಡಾ| ಪೆಂಗ್‌ ವಿನ್ಹುವಾ ಎಂಬ ವೈದ್ಯ ವುಹಾನ್‌ನ ಆಸ್ಪತ್ರೆಯೊಂದರಲ್ಲಿ ಕೊರೋನಾ ಸೋಂಕಿತರಿಗೆ ಚಿಕಿತ್ಸೆ ನೀಡುತ್ತಿದ್ದರು. ಜ.25ರಂದು ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಪಲಿಸದೇ ಗುರುವಾರ ರಾತ್ರಿ ನಿಧನರಾಗಿದ್ದಾರೆ.

ವುಹಾನ್‌ನ ಜಿಯಾಂಗ್‌ಕ್ಸಿಯಾ ಫಸ್ಟ್‌ ಹಾಸ್ಪಿಟಲ್‌ನ ಪ್ರಮುಖ ವೈದ್ಯರಾಗಿದ್ದರು. ಆಸ್ಪತ್ರೆಯಲ್ಲಿ ವೈದ್ಯರ ಕೊರತೆ ಇದ್ದ ಕಾರಣ ತಮ್ಮ ಮದುವೆಯನ್ನು ಮುಂದೂಡಿದ್ದರು.