ಟೆಕ್ಸಾಸ್[ನ.30]: ಹೊಟ್ಟೆಹೊರೆಯಲು ಜನರು ಏನೆಲ್ಲಾ ಕಷ್ಟಪಡುತ್ತಾರೆ. ಇದನ್ನು ಕಂಡು ಮರುಗುವ ಜನರೂ ಈ ಸಮಾಜದಲ್ಲಿದ್ದಾರೆ ಎಂಬುದಕ್ಕೆ ಈ ಘಟನೆಯೇ ಸಾಕ್ಷಿ.

ಅಮೆರಿಕದ ಟೆಕ್ಸಾಸ್‍ನ ಗ್ಯಾಲ್ವೆಸ್ಟನ್‍ನಲ್ಲಿ ಘಟನೆ ನಡೆದಿದ್ದು, ಆ್ಯಂಡ್ರಿಯಾನಾ ಎಡ್ವರ್ಡ್ಸ್ ಅವರು ಅಮೆರಿಕನ್ ರೆಸ್ಟೋರೆಂಟ್ ಚೈನ್‍ನಲ್ಲಿ ಪರಿಚಾರಿಕೆ ಅಂದರೆ ವೇಯ್ಟರ್ ಆಗಿ ಕೆಲಸ ಮಾಡುತ್ತಿದ್ದರು. ಇವರು ತನ್ನ ಮನೆಯಿಂದ 22 ಕಿ.ಮೀ ನಡೆದುಕೊಂಡೇ ಕೆಲಸಕ್ಕೆ ಬರುತ್ತಿದ್ದಳಂತೆ. ತಾನು ಕಾರು ಕೊಂಡುಕೊಳ್ಳಬೇಕು ಎಂಬ ಆಸೆ ಹೊತ್ತಿದ್ದ ಆ್ಯಂಡ್ರಿಯಾನ ಹಣ ಉಳಿಸುವ ಸಲುವಾಗಿ ನಿತ್ಯವೂ ನಡೆದುಕೊಂಡು ಬರುತ್ತಿದ್ದರು. 

ಇನ್ನು ಈ ವಿಚಾರ ಆ್ಯಂಡ್ರಿಯಾನಾ ಕೆಲಸ ಮಾಡುತ್ತಿದ್ದ ರೆಸ್ಟೋರೆಂಟ್‌ಗೆ ದಿನವೂ ಬರುತ್ತಿದ್ದ ಗ್ರಾಹಕ ದಂಪತಿಯ ಗಮನಕ್ಕೆ ಬಂದಿದೆ. ಪ್ರಶ್ನಿಸಿದಾಗ ಆ್ಯಂಡ್ರಿಯಾನಾ ತನ್ನ ಕನಸು ಏನೆಂದು ಹೇಳಿದ್ದಾರೆ. ಆಕೆಯ ಕರುಣಾಜನಕ ಕತೆ ಕೇಳಿ ಮರುಗಿದ ಅವರು ಆ್ಯಂಡ್ರಿಯಾಗೆ 2011 ನಿಸ್ಸಾನ್ ಸೆಂಟ್ರಾ ಕಾರು ಉಡುಗೊರೆಯಾಗಿ ನೀಡಿದ್ದಾರೆ.

ಇದರಿಂದ ಸಂತೋಷಗೊಂಡ ಆ್ಯಂಡ್ರಿಯಾ ಆನಂದಭಾಷ್ಪ ಸುರಿಸಿದ್ದಾಳೆ. ಈ ಉಡುಗೊರೆಯಿಂದಾಗಿ ಎಡ್ವರ್ಡ್ಸ್ ಪ್ರಯಾಣ 5 ಗಂಟೆಯಿಂದ 30 ನಿಮಿಷಕ್ಕೆ ಇಳಿದಿದೆ. ಯಾವುದೇ ಸಂಬಂಧವಿಲ್ಲದಿದ್ದರೂ, ಅವರು ಕೇಳದಿದ್ದರೂ ಅವಳ ಒಳ್ಳೆಯ ಗುಣವನ್ನು ಹಾಗೂ ಆಕೆಯ ಛಲವನ್ನು ನೋಡಿ ದಂಪತಿ ಈ ಉಡುಗೊರೆಯನ್ನು ನೀಡಿದ್ದಾರೆ.