ನಡೆಯಲಿಲ್ಲ 'ಆ್ಯಕ್ಷನ್' ಡ್ರಾಮ; ಪಾಕಿಸ್ತಾನಕ್ಕೆ ಗ್ರೇ ಪಟ್ಟಿಯೇ ವಾಸಸ್ಥಾನ!

  • ಪಾಕಿಸ್ತಾನಕ್ಕೆ ಜೈ ಅನನ್ನುವವರು ಓದ್ಲೇಬೇಕಾದ ಸ್ಟೋರಿ
  • ಭಯೋತ್ಪಾದನೆಗೆ ಹಣಕಾಸಿನ ನೆರವು ನಿಯಂತ್ರಿಸಲು ಪಾಕ್ ವಿಫಲ
  • ಗ್ರೇ ಪಟ್ಟಿಯಲ್ಲೇ ಮುಂದುವರಿಸಲು ಕಾವಲುಪಡೆ ನಿರ್ಧಾರ
  • 4 ತಿಂಗಳ ಕಾಲಾವಾಕಾಶ, 8 ಕಾರ್ಯಸೂಚಿ ಕೊಟ್ಟು ಎಚ್ಚರಿಸಿದ FATF
Terror Financing Risks Pakistan To Stay in FATF Grey List

ಪ್ಯಾರಿಸ್ (ಫೆ.21): ಭಯೋತ್ಪಾದನೆಗೆ ಹಣಾಕಾಸಿನ ನೆರವನ್ನು ನಿಯಂತ್ರಿಸುವಲ್ಲಿ ವಿಫಲವಾದ ಪಾಕಿಸ್ತಾನವನ್ನು ಫೈನಾನ್ಶಿಯಲ್ ಆ್ಯಕ್ಷನ್ ಟಾಸ್ಕ್‌ ಫೋರ್ಸ್ ಗ್ರೇ ಪಟ್ಟಿಯಲ್ಲೇ ಇಟ್ಟಿದೆ.  ನಾಲ್ಕು ತಿಂಗಳ ಬಳಿಕ ನಡೆದ ಪರಿಶೀಲನಾ ಸಭೆಯ ನಂತರ ಜಾಗತಿಕ ಕಾವಲು ಪಡೆ FATF ಈ ನಿರ್ಣಯವನ್ನು ತೆಗೆದುಕೊಂಡಿದೆ.

ಮುಂದಿನ ನಾಲ್ಕು ತಿಂಗಳಲ್ಲಿ ಪಾಕಿಸ್ತಾನವು ಮಾಡಬೇಕಾದ 8 ಕೆಲಸಗಳ ಪಟ್ಟಿಯನ್ನು ಕೂಡಾ FATF ಕೈಗಿತ್ತಿದೆ. ಇಲ್ಲದಿದ್ದರೆ, ಕಪ್ಪು ಪಟ್ಟಿಗೆ ಸೇರಿಸುವ ಎಚ್ಚರಿಕೆಯನ್ನು ನೀಡಿದೆ.

ಇದನ್ನೂ ಓದಿ :  ಪಾಕ್‌ ಜಿಂದಾಬಾದ್’ ಎಂದ ಆರುದ್ರಾ..! ಅವನಲ್ಲ ಅವಳು..!

Read more at: ಉಗ್ರ ಚಟುವಟಿಕೆಗಳಿಗೆ ಹಣಕಾಸು ನೆರವು, ಅಕ್ರಮ ಹಣ ವರ್ಗಾವಣೆಯನ್ನು ತಡೆಗಟ್ಟುವ ನಿಟ್ಟಿನಲ್ಲಿ FATF ನೀತಿಗಳನ್ನು ರೂಪಿಸುತ್ತದೆ. ಇತರ ದೇಶಗಳು ಆ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಬೇಕಾಗುತ್ತೆ. ಆದರೆ ಪಾಕಿಸ್ತಾನವು ಮೊದಲಿನಿಂದಲೂ ಈ ನಿಟ್ಟಿನಲ್ಲಿ ಎಡವುತ್ತಲೇ ಬಂದಿದೆ. ಈ ಹಿಂದೊಮ್ಮೆ ಅದನ್ನು ಕಪ್ಪು ಪಟ್ಟಿಗೂ ಸೇರಿಸಲಾಗಿತ್ತು.

ಆ ಸಂದರ್ಭದಲ್ಲಿ 27 ಅಂಶಗಳ ಕಾರ್ಯಕ್ರಮಗಳನ್ನು ಜಾರಿಗೊಳಿಸುವಂತೆ ಪಾಕಿಸ್ತಾನಕ್ಕೆ ಸೂಚಿಸಲಾಗಿತ್ತು. ಆದರೆ ಅವುಗಳ ಪೈಕಿ 13 ಕಾರ್ಯಕ್ರಮಗಳನ್ನು ಜಾರಿಗೊಳಿಸುವಲ್ಲಿ ವಿಫಲವಾಗಿದೆ.

ಇದನ್ನೂ ಓದಿ : 

ಉತ್ತರ ಕೊರಿಯಾ ಮತ್ತು ಇರಾನ್ ಈಗಾಗಲೇ FATF ಕಪ್ಪುಪಟ್ಟಿಯಲ್ಲಿವೆ. 

ಭಯೋತ್ಪಾದನೆಗೆ ಆರ್ಥಿಕ ನೆರವು ನೀಡಿದ ಆರೋಪದ ಮೇಲೆ ಪಾಕಿಸ್ತಾನ ನ್ಯಾಯಾಲಯವು ಕಳೆದ ವಾರ ಜೈಷ್-ಎ-ಮೊಹ್ಮದ್ ಸಂಘಟನೆ ಮುಖ್ಯಸ್ಥ ಹಫೀಜ್‌ನಿಗೆ ಐದು ವರ್ಷ ಜೈಲು ಶಿಕ್ಷೆ ವಿಧಿಸಿದ್ದನ್ನು ಸ್ಮರಿಸಬಹುದು.

ಇದನ್ನೂ ನೋಡಿ : ಅಮೂಲ್ಯಗೆ ನಕ್ಸಲ್ ಜೊತೆ ನಂಟಿರುವುದು ಬಗ್ಗೆ ಸಾಬೀತಾಗಿದೆ: ಸಿಎಂ

"

ಫೆಬ್ರವರಿ 21ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Latest Videos
Follow Us:
Download App:
  • android
  • ios