Asianet Suvarna News Asianet Suvarna News

'ನಿನ್ನ ಗಂಡ ಸಲಿಂಗಕಾಮಿ' ಎಂದು ಬಂತು ಮೆಸೇಜ್; ಮುಂದಾಗಿರೋದು ಕೇಳಿದ್ರೆ ಶಾಕ್ ಆಗ್ತೀರಾ!

ನಿನ್ನ ಪತಿ ಸಲಿಂಗಕಾಮಿ ಎಂಬ ವಾಟ್ಸಾಪ್ ಸಂದೇಶವೊಂದು ಈಕೆಗೆ ಹರಿದುಬಂತು. ಮುಂದಿನ ಸಂದೇಶಗಳೇನು, ಏನೇನಾಯ್ತು ಎಂಬುದನ್ನು ಮಹಿಳೆ ಸ್ಕ್ರೀನ್‌ಶಾಟ್ ಸಮೇತ ಹಂಚಿಕೊಂಡಿದ್ದಾರೆ. 
 

Telling Her Husband Is Gay This Happens Next skr
Author
First Published Apr 13, 2024, 12:54 PM IST

'ನಿನ್ನ ಗಂಡ ಸಲಿಂಗಕಾಮಿ, ಆತ ನನ್ನ ಪ್ರಿಯಕರ' ಎಂದು ವಾಟ್ಸಾಪ್‌ನಲ್ಲಿ ಒಬ್ಬ ಮಹಿಳೆಯೊಬ್ಬರಿಗೆ ಸಂದೇಶ ಕಳುಹಿಸಿದ್ದಾನೆ. ತಾನು ಆತನೊಂದಿಗಿರುವ ಸಂಬಂಧದ ಕುರಿತಾಗಿ ಕೊಂಚ ವಿವರವಾಗಿ ಮಹಿಳೆಗೆ ತಿಳಿಸಿದ್ದಾನೆ. ಇದಕ್ಕೆ ಮಹಿಳೆ ತನ್ನ ಪ್ರತಿಕ್ರಿಯೆ, ಆತನ ಸಂದೇಶಗಳೆಲ್ಲವನ್ನೂ ಸಾಮಾಜಿಕ ತಾಣ ಎಕ್ಸ್‌ನಲ್ಲಿ ಹಂಚಿಕೊಂಡಿದ್ದಾರೆ. 

ಇಂಥ ಸಂದೇಶ ಬಂದರೆ ಯಾವುದೇ ಮಹಿಳೆಗಾದರೂ ಆಘಾತವಾಗದೆ ಇರದು. ಆದರೆ, ಈ ಮಹಿಳೆಗೆ ಮಾತ್ರ ಹಾಗಾಗಲಿಲ್ಲ. ಏಕೆಂದರೆ, ಆಕೆಗೆ ತಕ್ಷಣ ಇದು ಆನ್‌ಲೈನ್ ಸ್ಕ್ಯಾಮ್ ಎಂದು ತಿಳಿದುಹೋಗಿದೆ. ಇದಕ್ಕೆ ಕಾರಣ, ಸಂದೇಶ ಕಳುಹಿಸುತ್ತಿದ್ದ ವ್ಯಕ್ತಿ ಮಹಿಳೆಯ ಹೆಸರಿನ ಕೊನೆಯ ಹೆಸರನ್ನು ಅವಳ ಗಂಡನ ಹೆಸರು ಎಂದು ಭಾವಿಸಿ ಸಂದೇಶ ಕಳುಹಿಸಿದ್ದು! 

ತನ್ನನ್ನು ಅಹ್ಮದ್ ಎಂದು ಹೇಳಿಕೊಂಡ ವ್ಯಕ್ತಿ ಫೆಬ್ರವರಿಯಲ್ಲಿ ಹಬೀಬಿಯ ಮದುವೆಯ ಬಗ್ಗೆ ತಿಳಿದುಕೊಂಡಿದ್ದಾಗಿ ಹೇಳಿ ವಾಟ್ಸಾಪ್ ಸಂದೇಶ ಕಳುಹಿಸಿದ್ದಾನೆ. ಆದರೆ ಹಬೀಬಿ ಮಹಿಳೆಯ ತಂದೆಯ ಹೆಸರಾಗಿತ್ತು. ಇದೊಂದು ಹಗರಣ ಎಂದು ತಿಳಿಯುತ್ತಿದ್ದಂತೆ ಮಹಿಳೆ ಆತನನ್ನು ಕೊಂಚ ಆಟವಾಡಿಸಲು ಯೋಜಿಸಿದ್ದಾರೆ. ಆಕೆಯ ತಂದೆಗೆ 70 ವಯಸ್ಸಾಗಿದ್ದು, ಮಿಲಿಟರಿಯಲ್ಲಿ ಸೇವೆ ಸಲ್ಲಿಸಿದವರು ಅವರು ಎಂದು ಮಹಿಳೆ ಹೇಳಿದ್ದಾಳೆ. 

ಈಕೆಯ ಮೊದಲೆರಡು ಚಿತ್ರ ಗಳಿಸಿದ್ದು ಬರೋಬ್ಬರಿ 2900 ಕೋಟಿ ರೂ! ಆದ್ರೆ ನಟನೆಗಿಂತ ಧರ್ಮನೇ ಹೆಚ್ಚು ಅಂತ ಬಾಲಿವುಡ್ ಬಿಟ್ಟ ನಟಿ
 

ಈ ಬಗ್ಗೆ WhatsApp ಚಾಟ್‌ನ ಸ್ಕ್ರೀನ್‌ಶಾಟ್‌ಗಳನ್ನು ಹಂಚಿಕೊಂಡಿರುವ ಮಹಿಳೆ, ಆತನಿಗೆ ತನ್ನ ನಂಬರ್ ಹೇಗೆ ಸಿಕ್ಕಿತು ಎಂದು ಕೇಳಿದಾಗ ಆಕೆಯ ಪತಿಯ ಕಾರಿನಲ್ಲಿದ್ದ ಬಿಲ್‌ನಲ್ಲಿತ್ತು ಎಂದಿದ್ದಾನೆ. 

ಬಳಿಕ ವಿಷಯ ತಿಳಿಸಿದ್ದಕ್ಕೆ ಥ್ಯಾಂಕ್ಸ್ ಹೇಳಿದ ಮಹಿಳೆ, ಈಗ ನನಗೆ ಅವನಿಗೆ ವಿಚ್ಚೇದನ ನೀಡಿ ನನ್ನ ಬಾಯ್‌ಫ್ರೆಂಡ್ ಜೊತೆ ಇರಲು ಸರಿಯಾದ ಕಾರಣ ಸಿಕ್ಕಿತು ಎಂದು ಪ್ರತಿಕ್ರಿಯಿಸಿದ್ದಾರೆ. ಮುಂದುವರಿದು, ಅವನಿಗೆ ಎಚ್ಐವಿ ಇರುವುದು ತಿಳಿದಿದ್ದರೂ ಅವನೊಂದಿಗೆ ಇರುವುದಕ್ಕೆ ಥ್ಯಾಂಕ್ಸ್, ವಿಷಯ ತಿಳಿದಾಗಿನಿಂದ ನಮ್ಮ ಮಧ್ಯೆ ಎಲ್ಲವೂ ಸರಿ ಇರಲಿಲ್ಲ ಮತ್ತು ನಾನು ಬೇರೆ ಬಾಯ್‌ಫ್ರೆಂಡ್ ಕಂಡುಕೊಂಡಿದ್ದೆ ಎಂದಿದ್ದಾರೆ.

ಈ ಮಾತಿನ ಬಳಿಕ ಆಚೆ ಕಡೆಯ ವ್ಯಕ್ತಿ ಮೌನಕ್ಕೆ ಜಾರಿದ್ದಾನೆ!

 

X ಬಳಕೆದಾರರು ಕೆಲವು ದಿನಗಳ ಹಿಂದೆ ಪೋಸ್ಟ್ ಅನ್ನು ಹಂಚಿಕೊಂಡಂದಿನಿಂದ, ಇದು 232,000 ಕ್ಕೂ ಹೆಚ್ಚು ವೀಕ್ಷಣೆಗಳನ್ನು ಮತ್ತು 2,000 ಕ್ಕೂ ಹೆಚ್ಚು ಲೈಕ್ಗಳನ್ನು ಸಂಗ್ರಹಿಸಿದೆ. ಈ ಪೋಸ್ಟ್ ಸಾಮಾಜಿಕ ಮಾಧ್ಯಮ ಬಳಕೆದಾರರಿಂದ ಬಹಳ ತಮಾಷೆಯ ಪ್ರತಿಕ್ರಿಯೆಗಳನ್ನು ಪಡೆಯಿತು. 

ಟ್ಯಾನ್ ಆದ ಬೆನ್ನು ತೋರಿಸಿದ ದೀಪಿಕಾ ಪಡುಕೋಣೆ; 'ಆರ್‌ಕೆ' ಟ್ಯಾಟೂ ಮರೆಯಾದ ಬಗ್ಗೆ ನೆಟ್ಟಿಗರ ಕಣ್ಣು

' ನೀವು ಅವನಿಗಿಂತ ದೊಡ್ಡ ಆಟಗಾರ' ಎಂದು ಬಳಕೆದಾರರೊಬ್ಬರು ಮಹಿಳೆಯ ಬುದ್ಧಿವಂತಿಕೆ ಮೆಚ್ಚಿದ್ದಾರೆ. ಮತ್ತೊಬ್ಬರು ಪ್ರತಿಕ್ರಿಯಿಸಿ, 'ದು ನಾನು ವಾರವಿಡೀ ನೋಡಿದ ಅತಿ ತಮಾಷೆಯ ವಿಷಯ' ಎಂದಿದ್ದಾರೆ. 

Follow Us:
Download App:
  • android
  • ios