* ಅಫ್ಘಾನಿಸ್ತಾನದಲ್ಲಿರುವ ನಾರ್ವೆಯ ರಾಯಭಾರಿ ಕಚೇರಿಯ ಮೇಲೆ ದಾಳಿ * ವೈನ್‌ ಬಾಟಲ್‌, ಪುಸ್ತಕ ನಾಶ* ವಿದೇಶಿ ರಾಯಭಾರಿಗಳಿಗೆ ದೂತವಾಸ ಕಚೇರಿಗಳಿಗೆ ರಕ್ಷಣೆ ನೀಡುತ್ತೇವೆ ಎಂದು ತಾಲಿ​ಬಾ​ನ್‌ ಹೇಳಿದ ಬೆನ್ನಲ್ಲೇ ಈ ದಾಳಿ

ಕಾಬೂಲ್‌(ದಸೆ.10): ಅಫ್ಘಾನಿಸ್ತಾನದಲ್ಲಿರುವ ನಾರ್ವೆಯ ರಾಯಭಾರಿ ಕಚೇರಿಯ ಮೇಲೆ ದಾಳಿ ನಡೆಸಿದ ತಾಲಿಬಾನ್‌ ಉಗ್ರಗಾಮಿಗಳು ಅಲ್ಲಿರುವ ವೈನ್‌ ಬಾಟಲ್‌ಗಳನ್ನು ಒಡೆದು ಹಾಕಿ, ಪುಸ್ತಕಗಳನ್ನು ನಾಶ ಮಾಡಿದ್ದಾರೆ. ವಿದೇಶಿ ರಾಯಭಾರಿಗಳಿಗೆ ದೂತವಾಸ ಕಚೇರಿಗಳಿಗೆ ರಕ್ಷಣೆ ನೀಡುತ್ತೇವೆ ಎಂದು ತಾಲಿ​ಬಾ​ನ್‌ ಹೇಳಿದ ಬೆನ್ನಲ್ಲೇ ಈ ದಾಳಿ ನಡೆಸಿದೆ.

ಇದಕ್ಕೆ ಪ್ರತಿಕ್ರಿಯಿಸಿರುವ ಇರಾನ್‌ನ ನಾರ್ವೆ ರಾಯಭಾರಿ ಸಿಗ್ವಾಲ್ಡ್‌ ಹೌಗ್‌ ‘ತಾಲಿಬಾನ್‌ ಉಗ್ರಗಾಮಿಗಳು ಈಗ ನಾರ್ವೆಯ ದೂತವಾಸ ಕಚೇರಿ ಮೇಲೆ ದಾಳಿ ಮಾಡಿದ್ದಾರೆ. ಮೊದಲಿಗೆ ಅಲ್ಲಿದ್ದ ವೈನ್‌ ಬಾಟಲ್‌ಗಳನ್ನು ಒಡೆದುಹಾಕಿದ್ದಾರೆ, ನಂತರ ಮಕ್ಕಳ ಪುಸ್ತಕಗಳನ್ನು ಹರಿದುಹಾಕಿದ್ದಾರೆ’ ಎಂದು ಟ್ವೀಟ್‌ ಮಾಡಿದ್ದಾರೆ.

ಆಗಸ್ಟ್‌ನಲ್ಲಿ ಅಫ್ಘಾನಿಸ್ತಾನದ ಪರಿಸ್ಥಿತಿ ಹದಗೆಟ್ಟಿರುವುದರಿಂದ ತಮ್ಮ ದೂತವಾಸ ಕಚೇರಿಗಳನ್ನು ಮುಚ್ಚುವುದಾಗಿ ಡೆನ್ಮಾರ್ಕ್ ಮತ್ತು ನಾರ್ವೆ ಆಗಸ್ಟ್‌ನಲ್ಲಿ ಹೇಳಿದ್ದವು.