Asianet Suvarna News Asianet Suvarna News

ಒಂದೆಡೆ ಹಿಂಸೆ, ಇನ್ನೊಂದೆಡೆ ತನಿಖೆ: ತಾಲಿಬಾನ್‌ ನಾಟಕ!

* ಅಫ್ಘಾನಿಸ್ತಾನವನ್ನು ವಶಕ್ಕೆ ಪಡೆದುಕೊಳ್ಳುತ್ತಲೇ ಎಲ್ಲೆಡೆ ಹಿಂಸಾಕೃತ್ಯ

* ಒಂದೆಡೆ ಹಿಂಸೆ, ಇನ್ನೊಂದೆಡೆ ತನಿಖೆ: ತಾಲಿಬಾನ್‌ ನಾಟಕ

* ಜಗತ್ತಿನ ದಾರಿ ತಪ್ಪಿಸಲು ಯತ್ನ

Taliban pledge of peaceful leadership is quickly coming undone amid reports of beatings deaths pod
Author
Bangalore, First Published Aug 22, 2021, 8:10 AM IST

ಕಾಬೂಲ್‌(ಆ.22): ಅಷ್ಘಾನಿಸ್ತಾನವನ್ನು ವಶಕ್ಕೆ ಪಡೆದುಕೊಳ್ಳುತ್ತಲೇ ಎಲ್ಲೆಡೆ ಹಿಂಸಾಕೃತ್ಯಗಳನ್ನು ನಡೆಸುತ್ತಿರುವ ತಾಲಿಬಾನಿ ಉಗ್ರರು, ಇದೇ ವೇಳೆ ಯಾವುದೇ ಹಿಂಸಾ ಕೃತ್ಯಗಳು ಬೆಳಕಿಗೆ ಬಂದರೆ ಅದರ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಘೋಷಿಸಿವೆ. ಈ ಮೂಲಕ ಜಗತ್ತಿನ ಕಣ್ಣಿಗೆ ಮಣ್ಣೆರೆಚುವ ಯತ್ನವನ್ನು ಮುಂದುವರೆಸಿವೆ.

ಈ ಕುರಿತು ಸುದ್ದಿಸಂಸ್ಥೆಯೊಂದಕ್ಕೆ ಹೇಳಿಕೆ ನೀಡಿರುವ, ಹೆಸರು ಹೇಳಬಯಸದ ತಾಲಿಬಾನಿ ವಕ್ತಾರನೊಬ್ಬ, ‘ನಾಗರಿಕರ ವಿರುದ್ಧ ದೌರ್ಜನ್ಯ ಮತ್ತು ದಾಳಿಯ ಘಟನೆಗಳು ನಡೆದಿರುವ ಬಗ್ಗೆ ನಾವು ಕೇಳಿದ್ದೇವೆ. ಒಂದು ವೇಳೆ ನಮ್ಮ ಸದಸ್ಯರು ಇಂಥ ಕಾನೂನುಬಾಹಿರ ಚಟುವಟಿಕೆಯಲ್ಲಿ ತೊಡಗಿದ್ದೇ ಆದಲ್ಲಿ ನಾವು ಆ ಕುರಿತು ತನಿಖೆ ನಡೆಸಲಿದ್ದೇವೆ. ಜನರ ಆತಂಕ, ತಲ್ಲಣಗಳನ್ನು ನಾವು ಅರ್ಥ ಮಾಡಿಕೊಳ್ಳಬಲ್ಲೆವು. ನಾವು ಯಾವುದೇ ಘಟನೆಗೂ ಹೊಣೆಗಾರರಲ್ಲ ಎಂದು ಜನರು ಭಾವಿಸಿರಬಹುದು. ಆದರೆ ಅದು ಅಪನಂಬಿಕೆ’ ಎಂದು ಹೇಳಿದ್ದಾನೆ. ಈ ಮೂಲಕ ನಾವು ಬದಲಾಗಿದ್ದೇವೆ. ಹಿಂದಿನಂತೆ ಯಾರನ್ನೂ ಹಿಂಸಿಸುವುದಿಲ್ಲ, ಮಹಿಳೆಯರನ್ನು ಗೌರವದಿಂದ ಕಾಣುತ್ತೇವೆ ಎಂದು ಜನರಲ್ಲಿ ನಂಬಿಸುವ ಯತ್ನವನ್ನು ಉಗ್ರರು ಮಾಡಿದ್ದಾರೆ.

ಆದರೆ ವಾಸ್ತವವಾಗಿ ದೇಶವನ್ನು ವಶಕ್ಕೆ ಪಡೆಯುತ್ತಲೇ, ಪ್ರಜಾಪ್ರಭುತ್ವ ಪರ ಹೋರಾಟಗಾರರು ಹಾಗೂ ಈ ಹಿಂದೆ ಅಮೆರಿಕ, ನ್ಯಾಟೋ ಪಡೆಗಳಿಗೆ ನೆರವು ನೀಡಿದ ಆಫ್ಘನ್‌ ವ್ಯಕ್ತಿಗಳನ್ನು ಹುಡುಕಿ ಹುಡುಕಿ ಹತ್ಯೆ ಮಾಡಲಾಗುತ್ತಿದೆ. ಮಹಿಳೆಯರ ಹಕ್ಕುಗಳನ್ನು ಮೊಟಕುಗೊಳಿಸಲು ಈಗಾಗಲೇ ಉಗ್ರರು ಆರಂಭಿಸಿದ್ದಾರೆ.

Follow Us:
Download App:
  • android
  • ios