* ಪಂಜಶೀರ್‌ ವಶಪಡಿಸಿಕೊಂಡ ತಾಲಿಬಾಣಿಯರು* ಪಂಜಶೀರ್‌ ಅನ್ನ ವಶಪಡಿಸಿಕೊಂಡ ಬೆನ್ನಲ್ಲೇ ಮುಂದಿನ 24 ತಾಸಿನಲ್ಲಿ ಸರ್ಕಾರ ರಚನೆ

ಕಾಬೂ​ಲ್‌(ಸೆ.07): ತಾಲಿಬಾನ್‌ ಉಗ್ರಗಾಮಿಗಳು ಪಂಜಶೀರ್‌ ಅನ್ನ ವಶಪಡಿಸಿಕೊಂಡ ಬೆನ್ನಲ್ಲೇ ಮುಂದಿನ 24 ತಾಸಿನಲ್ಲಿ ಸರ್ಕಾರ ರಚನೆ ಮಾಡುವುದಾಗಿ ತಾಲಿಬಾನ್‌ ಸೋಮ​ವಾರ ಸಂಜೆ ಘೋಷಿಸಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಪಂಜಶೀರ್‌ ಪ್ರಾಂತ್ಯವನ್ನು ವಶಪಡಿಸಿಕೊಂಡ ನಂತರ ಹೊಸ ಸರ್ಕಾರ ರಚಿಸಲು ಮತ್ತು ನಾಯಕರನ್ನು ನೇಮಿಸಲು ತಾಲಿಬಾನ್‌ ಸಿದ್ಧವಾಗಿದೆ. ನಾಯಕರ ಕುರಿತು ಶೀಘ್ರದಲ್ಲೇ ತಿಳಿಸಲಾಗುವುದು ಎಂದು ತಾಲಿಬಾನ್‌ ಮೂಲ​ಗಳು ಹೇಳಿವೆ ಎಂದು ಮಾಧ್ಯ​ಮ​ವೊಂದು ವರದಿ ಮಾಡಿ​ದೆ.

ಪಂಜಶೀರ್‌ ಗೆದ್ದ ನಂತರ ಆಫ್ಘನ್‌ನ ಪ್ರಮುಖ ಯುದ್ಧದಲ್ಲಿ ಗೆದ್ದಿರುವುದಾಗಿ ತಾಲಿಬಾನ್‌ ಸೋಮ​ವಾರ ಬೆಳಗ್ಗೆ ಹೇಳಿ​ತ್ತು.