Asianet Suvarna News Asianet Suvarna News

ಪಂಜ್‌ಶೀರ್‌ ಸಂಪೂರ್ಣ ತಾಲಿಬಾನ್‌ ವಶಕ್ಕೆ!

* ಯುದ್ಧ ಮುಗಿ​ದಿದೆ, ಇಡೀ ಆಫ್ಘನ್‌ ಈಗ ನಮ್ಮ ವಶ​ದ​ಲ್ಲಿ-ತಾಲಿಬಾನ್‌

* ಹೋರಾಟ ನಿಲ್ಲಲ್ಲ, ದಂಗೆ ಏಳಿ: ಬೆಂಬ​ಲಿ​ಗ​ರಿಗೆ ಪಂಜ್‌ಶೀರ್‌ ನಾಯಕ ಮಸೌದ್‌ ಕರೆ

* ‘ನನ್ನ ರಕ್ತದ ಕೊನೆಯ ಹನಿ ಇರು​ವ​ವ​ರೆಗೂ ಹೋರಾ​ಟ: ಮಸೌ​ದ್‌

* ಕಜ​ಕ​ಸ್ತಾ​ನಕ್ಕೆ ಅಮ್ರುಲ್ಲಾ ಸಲೇಹ್‌ ಪರಾ​ರಿ: ಉಗ್ರರ ಹೇಳಿ​ಕೆ

Taliban Claim Control Of Panjshir Promise Government Soon pod
Author
Bangalore, First Published Sep 7, 2021, 7:27 AM IST

ಕಾಬೂಲ್‌(ಸೆ.07): ‘ಪಂಜ್‌ಶೀರ್‌ನ ಎಲ್ಲಾ 8 ಜಿಲ್ಲೆಗಳನ್ನು ವಶಪಡಿಸಿಕೊಳ್ಳುವುದರೊಂದಿಗೆ ಇಡೀ ಪ್ರಾಂತ್ಯ ನಮ್ಮ ವಶಕ್ಕೆ ಬಂದಿದೆ. ಇದ​ರೊಂದಿಗೆ ಅಷ್ಘಾ​ನಿ​ಸ್ತಾ​ನ​ದ​ಲ್ಲಿನ ಯುದ್ಧ ಮುಗಿ​ದಿ​ದೆ​’ ಎಂದು ತಾಲಿಬಾನ್‌ ಸಂಘಟನೆ ಸೋಮವಾರ ಹೇಳಿಕೆ ಘೋಷಿ​ಸಿ​ಕೊಂಡಿದೆ. ಅಲ್ಲದೆ ತನ್ನ ವಿರುದ್ಧ ತೊಡೆ ತಟ್ಟಿದ್ದ ಅಫ್ಘಾನಿಸ್ತಾನದ ಮಾಜಿ ಉಪಾಧ್ಯಕ್ಷ ಅಮ್ರುಲ್ಲಾ ಸಲೇಹ್‌ ನೆರೆಯ ಕಜಕಸ್ತಾನಕ್ಕೆ ಪರಾರಿಯಾಗಿದ್ದಾರೆ ಎಂದು ಹೇಳಿದೆ.

ಈವ​ರೆಗೆ ಬಹು​ತೇಕ ಅಷ್ಘಾ​ನಿ​ಸ್ತಾನ ತಾಲಿ​ಬಾನ್‌ ವಶಕ್ಕೆ ಬಂದಿ​ದ್ದರೂ ಪಂಜ​ಶೀರ್‌ ಮಾತ್ರ ವಿರೋಧಿ ಪಡೆ​ಗಳ ವಶ​ದ​ಲ್ಲಿತ್ತು. ಈ ಹಿನ್ನೆ​ಲೆ​ಯಲ್ಲಿ ತಾಲಿ​ಬಾ​ನ್‌ನ ಈ ಹೇಳಿ​ಕೆಗೆ ಮಹತ್ವ ಬಂದಿ​ದೆ.

ಆದರೆ ಈ ಹೇಳಿಕೆಗಳನ್ನು ಪಂಜ​ಶೀ​ರ್‌ನ ತಾಲಿ​ಬಾನ್‌ ವಿರೋಧಿ ಪಡೆ​ಗಳ ನಾಯಕ ಅಹ​ಮ​ದ್‌ ಮಸೌದ್‌ ಸ್ಪಷ್ಟವಾಗಿ ತಳ್ಳಿಹಾಕಿದ್ದಾರೆ. ‘ನನ್ನ ರಕ್ತದ ಕೊನೆಯ ಹನಿ ಇರು​ವ​ವ​ರೆಗೂ ಹೋರಾ​ಡು​ವೆ. ಈಗಲೂ ಹೋರಾಟ ಮುಂದುವರೆದಿದೆ​’ ಎಂದಿರುವ ಮಸೌದ್‌, ಇಡೀ ದೇಶಾದ್ಯಂತ ತಾಲಿಬಾನಿಗಳ ವಿರುದ್ಧ ದಂಗೆ ಏಳುವಂತೆ ಜನರಿಗೆ ಕರೆ ನೀಡಿದ್ದಾರೆ.

ಮತ್ತೊಂದೆಡೆ ಫೇಸ್‌ಬುಕ್‌ನಲ್ಲಿ ಪೋಸ್ಟ್‌ ಹಾಕಿರುವ ಅಮ್ರುಲ್ಲಾ ಸಲೇಹ್‌, ‘ನಾವು ಈಗಲೂ ಪಂಜ್‌ಶೀರ್‌ ಜನರಿಗಾಗಿ ಹೋರಾಡುತ್ತಿದ್ದೇವೆ ಮತ್ತು ಹೋರಾಟ ಮುಂದುವರೆಯಲಿದೆ’ ಎಂದು ಹೇಳಿದ್ದಾರೆ.

ವಶಕ್ಕೆ?:

ಇಡೀ ಅಫ್ಘಾನಿಸ್ತಾನ ವಶವಾಗಿ 20 ದಿನ ಕಳೆದರೂ ಉತ್ತರ ಕಾಬೂಲ್‌ನ ಪಂಜ್‌ಶೀರ್‌ ಕಣಿವೆ ಮಾತ್ರ ಇದುವರೆಗೆ ತಾಲಿಬಾನ್‌ ವಶವಾಗಿರಲಿಲ್ಲ. ಹೀಗಾಗಿ ಕಳೆದೊಂದು ವಾರದಿಂದ, ಪಂಜ್‌ಶೀರ್‌ಗೆ ತೆರಳುವ ಏಕೈಕ ರಸ್ತೆಮಾರ್ಗ ಮತ್ತು ಅಲ್ಲಿನ ಇಂಟರ್ನೆಟ್‌ ಸಂಪರ್ಕವನ್ನು ತಾಲಿಬಾನಿಗಳು ಕಟ್‌ ಮಾಡಿದ್ದರು. ಈ ಮೂಲಕ ಅಲ್ಲಿಯ ಜನರು ಆಹಾರ ಮತ್ತ ಮಾಹಿತಿ ಸಮಸ್ಯೆ ಎದುರಿಸುವಂತೆ ಮಾಡಿದ್ದರು. ಜೊತೆಗೆ ಪಾಕಿಸ್ತಾನದ ಸೇನೆ ನೆರವಿನಿಂದ ತಮ್ಮ ‘ಉ​ಗ್ರ​ರ​ನ್ನು​’ ಪಾಕ್‌ ವಿಮಾನಗಳ ಮೂಲಕ ಏರ್‌ಡ್ರಾಪ್‌ ಮಾಡಿ, ಹೋರಾಟ ನಡೆಸುತ್ತಿದ್ದರು.

ಈ ನಡುವೆ ಭಾನುವಾರ ಹೇಳಿಕೆಯೊಂದನ್ನು ಬಿಡುಗಡೆ ಮಾಡಿದ್ದ ಪಂಜ್‌ಶೀರ್‌ ನಾಯಕ ಮಸೌದ್‌, ನಮ್ಮ ಮೇಲಿನ ದಾಳಿಯನ್ನು ನಿಲ್ಲಿಸಿದರೆ ನಾವು ನಮ್ಮ ಶಸ್ತಾ್ರಸ್ತ್ರಗಳನ್ನು ಕೆಳಗಿಳಿಸಿ ಶಾಂತಿ ಮಾತುಕತೆಗೆ ಸಿದ್ಧ ಎಂದು ಹೇಳಿದ್ದರು.

ಈ ಎಲ್ಲಾ ಬೆಳವಣಿಗೆಗಳ ನಡುವೆಯೇ ಸೋಮವಾರ ಹೇಳಿಕೆ ಬಿಡುಗಡೆ ಮಾಡಿರುವ ತಾಲಿಬಾನ್‌ ವಕ್ತಾರ ಝಬೀಹುಲ್ಲಾ ಮುಜಾಹಿದ್‌, ‘ಪಂಜ್‌ಶೀರ್‌ನ 8 ಜಿಲ್ಲೆಗಳ ಪೈಕಿ ಕಡೆಯದಾಗಿ ರೋಖಾ ಜಿಲ್ಲೆಯನ್ನು ವಶಪಡಿಸಿಕೊಳ್ಳುವುದರೊಂದಿಗೆ ಇಡೀ ಪ್ರಾಂತ್ಯ ನಮ್ಮ ವಶಕ್ಕೆ ಬಂದಿದೆ. ಅಷ್ಘಾ​ನಿ​ಸ್ತಾ​ನ​ದ​ಲ್ಲಿನ ಯುದ್ಧ ಮುಗಿ​ದಿ​ದೆ’ ಎಂದು ಹೇಳಿದ್ದಾನೆ.

ಪಂಜ​ಶೀರ್‌ ಗವ​ರ್ನರ್‌ ಬಂಗಲೆ ಆವ​ರ​ಣ​ದಲ್ಲಿ ತಾಲಿ​ಬಾನ್‌ ಧ್ವಜ ಹಾರಿ​ಸ​ಲಾ​ದ ದೃಶ್ಯ​ಗಳೂ ವೈರಲ್‌ ಆಗಿ​ವೆ.

ದಂಗೆ ಏಳಿ:

ಈ ನಡುವೆ ತಾಲಿಬಾನಿಗಳ ವಿರುದ್ಧ ದೇಶಾದ್ಯಂತ ಜನರು ದಂಗೆ ಏಳಬೇಕು ಎಂದು ಪಂಜ್‌ಶೀರ್‌ನ ನಾಯಕ ಅಹಮದ್‌ ಮಸೌದ್‌ ಕರೆ ಕೊಟ್ಟಿದ್ದಾರೆ. ಜೊತೆಗೆ ಈಗಲೂ ಪಂಜ್‌ಶೀರ್‌ನಲ್ಲಿ ತಾಲಿಬಾನಿಗಳ ವಿರುದ್ಧ ನಮ್ಮ ಹೋರಾಟ ಮುಂದುವರೆದಿದೆ ಎಂದು ಹೇಳಿದ್ದಾರೆ. ಅಲ್ಲದೆ, ತಮ್ಮ ಸೈನಿಕರು ಹೊಡೆದುರುಳಿಸಿದ್ದು ಎಂದು ಹೇಳಲಾದ ಪಾಕಿಸ್ತಾನ ಸೇನೆಯ ವಿಮಾನದ ಫೋಟೋ ಒಂದನ್ನು ಟ್ವೀಟರ್‌ನಲ್ಲಿ ಪ್ರಕಟಿಸಿದ್ದಾರೆ.

Follow Us:
Download App:
  • android
  • ios