'ಉಗ್ರರಿಗೆ ಇದೇ Swords of Iron ಗಿಫ್ಟ್' ಫೈಟರ್ ಜೆಟ್‌ಗೆ ಬಾಂಬ್ ಜೋಡಿಸುವ ವಿಡಿಯೋ ರಿಲೀಸ್ ಮಾಡಿದ ಇಸ್ರೇಲ್!
ಹಮಾಸ್ ಉಗ್ರರ ವಿರುದ್ಧ ಯುದ್ಧ ಸಾರಿರುವ ಇಸ್ರೇಲ್ ಅದಕ್ಕೆ ಸ್ವಾರ್ಡ್ಸ್ ಆಫ್ ಐರನ್ ಎಂದು ಹೆಸರನ್ನಿಟ್ಟಿದೆ. ಈ ಕಾರ್ಯಾಚರಣೆಯಲ್ಲಿ ಉಗ್ರರಿಗೆ ನೀಡಲಾಗುವ ಬಾಂಬ್ ಗಿಫ್ಟ್‌ನ ಇರಾನ್‌ನ ಭದ್ರತಾ ಪಡೆ ತನ್ನ ಟ್ವಿಟರ್ ಪೇಜ್‌ನಲ್ಲಿ ಹಂಚಿಕೊಂಡಿದೆ.
ನವದೆಹಲಿ (ಅ.7): ತನ್ನನ್ನು ಕೆಣಕುವ ದೇಶವಾಗಲಿ, ಉಗ್ರ ಸಂಘಟನೆಗಳನ್ನಾಗಲಿ ಇಸ್ರೇಲ್ ಸುಮ್ಮನೆ ಬಿಟ್ಟ ಉದಾಹರಣೆಯೇ ಇಲ್ಲ. ಅಂಥದ್ದರಲ್ಲಿ ಇಸ್ರೇಲ್ ದೇಶದ ಮೇಲೆಯೇ 7 ಸಾವಿರ ರಾಕೆಟ್ ಅನ್ನು ಒಂದೇ ದಿನ ಉಡಾಯಿಸಿ ವಿಕೃತಿ ಮೆರೆದಿರುವ ಹಮಾಸ್ ಉಗ್ರರ ವಿರುದ್ಧ ಇಸ್ರೇಲ್ ಯುದ್ಧ ಆರಂಭಿಸಿದೆ. ಇದಕ್ಕೆ ಸ್ವಾರ್ಡ್ಸ್ ಆಫ್ ಐರನ್ ಎಂದು ಹೆಸರನ್ನಿಟ್ಟಿದೆ. ಅಂದರೆ, ಕಬ್ಬಿಣದ ಕತ್ತಿ. ಯಾವ ಕಾರಣಕ್ಕೂ ನಮ್ಮ ಸಾರ್ವಭೌಮತ್ವದ ಮೇಲೆ ದಾಳಿ ಮಾಡಿರುವ ಉಗ್ರರರನ್ನು ಸದೆಬಡಿಯದೇ ಬಿಡೋದಿಲ್ಲ ಎಂದು ಪಣತೊಟ್ಟಿರುವ ಇಸ್ರೇಲ್ ತಮ್ಮ ಕಾರ್ಯಾಚರಣೆಯ ವಿಡಿಯೋಗಳನ್ನು ರಿಲೀಸ್ ಮಾಡಿದೆ. ಪ್ಯಾಲೆಸ್ತೇನ್ ಹಾಗೂ ಹಮಾಸ್ ಬಂಡುಕೋರರು ದಾಳಿಗಳಲ್ಲಿ ಮಾತ್ರವಲ್ಲ, ಸೋಶಿಯಲ್ ಮೀಡಿಯಾಗಳಲ್ಲೂ ತಮ್ಮ ಉಪಟಳದ ವಿಡಿಯೋಗಳನ್ನು ಹಂಚಿಕೊಂಡು ಧಾರ್ಷ್ಟ್ಯ ಮೆರೆಯುತ್ತಾರೆ. ಅವರಿಗೆ ಚಳಿ ಬಿಡಿಸುವ ಉದ್ದೇಶದಿಂದಲೇ ಇಸ್ರೇಲ್, ತಾನು ಅವರಿಗಾಗಿ ಆಪರೇಷನ್ ಸ್ವಾರ್ಡ್ಸ್ ಆಫ್ ಐರನ್‌ನಲ್ಲಿ ಗಿಫ್ಟ್ ಮಾಡಲಾಗುವ ಬಾಂಬ್‌ಗಳ ವಿಡಿಯೋಗಳನ್ನು ರಿಲೀಸ್ ಮಾಡಿದೆ. ಇಸ್ರೇಲ್ ಏರ್‌ಫೋರ್ಸ್ ಈ ಬಾಂಬ್‌ಗಳನ್ನು ತನ್ನ ಯುದ್ಧವಿಮಾನಗಳಿಗೆ ಜೋಡಿಸುವ ವಿಡಿಯೋ ಇದಾಗಿದೆ. ಕೇವಲ 28 ಸೆಕೆಂಡ್‌ನ ವಿಡಿಯೋದಲ್ಲಿ ಕನಿಷ್ಠ 4 ರಿಂದ 5 ಬಾಂಬ್‌ಗಳನ್ನು ಸೇನಾ ಸಿಬ್ಬಂದಿ ಜೋಡಿಸುತ್ತಿರುವುದು ಕಂಡಿದೆ.
ಬಾಂಬ್‌ಗಳನ್ನು ಜೋಡಿಸಿಕೊಂಡ ಯುದ್ಧವಿಮಾನ, ಸೇನಾ ನೆಲೆಯಿಂದ ಟೇಕಾಫ್ ಆಗುವುದು ಕೂಡ ಕಂಡಿದೆ. ಅದರೊಂದಿಗೆ ಹಮಾಸ್ ಉಗ್ರರರ ಸದೆಬಡಿಯದೇ ಸುಮ್ಮನಾಗೋದಿಲ್ಲ ಎನ್ನುವ ಎಚ್ಚರಿಕೆಯನ್ನು ಅವರಿಗೆ ಮಾತ್ರವಲ್ಲ, ತನ್ನ ಅಕ್ಕಪಕ್ಕದ ಮುಸ್ಲಿಂ ರಾಷ್ಟ್ರಗಳಿಗೆ ಹಾಗೂ ಜಗತ್ತಿಗೆ ರವಾನಿಸಿದೆ. ಈ ವಿಡಿಯೋವನ್ನು ಸ್ವತಃ ಇಸ್ರೇಲ್ ಭದ್ರತಾ ಪಡೆ ಹಾಗೂ ಇಸ್ರೇಲ್ ಏರ್‌ಫೋರ್ಸ್ ತಮ್ಮ ಎಕ್ಸ್ ಹ್ಯಾಂಡಲ್‌ನಲ್ಲಿ ಪೋಸ್ಟ್ ಮಾಡಿದೆ.
ಯುದ್ಧಕ್ಕೆ ಸೇರಿಕೊಂಡ ಇಸ್ರೇಲ್ ಮಾಜಿ ಪ್ರಧಾನಿ: ಇನ್ನೊಂದೆಡೆ ಹಮಾಸ್ ವಿರುದ್ಧ ಯುದ್ಧ ಮಾಡುವುದಾಗಿ ಇಸ್ರೇಲ್ ಘೋಷಣೆ ಮಾಡಿದ್ದು, ದೇಶದ ಜನರಿಗೆ ಮೀಸಲು ಸೇನಾಪಡೆಗೆ ಸೇರಿಕೊಳ್ಳುವಂತೆ ಸೂಚನೆ ನೀಡಿದೆ. ಇದರ ಭಾಗವಾಗಿ ಇಸ್ರೇಲ್‌ನ ಮಾಜಿ ಪ್ರಧಾನಿ ನಫ್ತಾಲಿ ಬೆನ್ನೆಟ್ ಕೂಡ ಇಸ್ರೇಲ್ ಮೀಸಲು ಸೇನೆಗೆ ಸೇರಿಕೊಂಡಿದ್ದಾರೆ. ಸೇನಾನೆಲೆಗೆ ಬಂದು ಅಲ್ಲಿನ ಸೈನಿಕರನ್ನು ಸೇರಿಕೊಳ್ಳುವ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಇಸ್ರೇಲ್ ಮೇಲೆ ದಾಳಿ ಮಾಡಲು ರೆಡಿಯಾದ ಹಿಜ್ಬುಲ್ಲಾ: ಹಮಾಸ್ ವಿರುದ್ಧ ಇಸ್ರೇಲ್ ಯುದ್ಧ ಘೋಷಣೆ ಮಾಡಿದ ಬೆನ್ನಲ್ಲಿಯೇ ಇಸ್ರೇಲ್‌ಗೆ ಹೊಂದಿಕೊಂಡೇ ಇರುವ ಇನ್ನೊಂದು ದೇಶ ಲೆಬನಾನ್‌ನ ಉಗ್ರ ಸಂಘಟನೆ ಹಿಜ್ಬುಲ್ಲಾ, ಇಸ್ರೇಲ್ ಮೇಲೆ ದಾಳಿ ಮಾಡುವುದಾಗಿ ಘೋಷಣೆ ಮಾಡಿದೆ. ಹಿಜ್ಭುಲ್ಲಾ ಉಗ್ರ ಸಂಘಟನೆ ಇಸ್ರೇಲ್ ಮೇಲೆ ದಾಳಿ ಮಾಡಲು ಸಂಪೂರ್ಣ ಸನ್ನದ್ಧವಾಗಿದೆ. ಇಸ್ರೇಲಿ ಪಡೆಗಳೊಂದಿಗೆ ಗುಂಡಿನ ದಾಳಿ ನಡೆಸಿದ ವರದಿಗಳು ಬರುತ್ತಿವೆ. ಲೆಬನಾನ್-ಇಸ್ರೇಲ್ ಗಡಿಯಲ್ಲಿ ಹಿಜ್ಬುಲ್ಲಾ ಪಡೆಗಳ ಮೇಲೆ ಇಸ್ರೇಲಿ ಪಡೆಗಳು ಗುಂಡು ಹಾರಿಸುತ್ತಿವೆ ಎಂದು ಹೇಳಲಾಗಿದೆ. ಈ ಬೆಳವಣಿಗೆ ಇನ್ನಷ್ಟು ಗಂಭೀರವಾಗಿದ್ದು, ಇಸ್ರೇಲ್ ದೇಶ ಪ್ಯಾಲೆಸ್ತೇನ್ ಮಾತ್ರವಲ್ಲದೆ ಲೆಬನಾನ್‌ನ ಉಗ್ರ ಸಂಘಟನೆ ಮೇಲೂ ಆಕ್ರಮಣ ಮಾಡಲು ಮುಂದಾಗಿದೆ.
Watch: ಗಾಜಾದ ಮೇಲೆ ಮುಗಿಬಿದ್ದ ಇಸ್ರೇಲ್ ಏರ್‌ಫೋರ್ಸ್, ಬಾಂಬ್ ದಾಳಿಗೆ 160 ಪ್ಯಾಲಿಸ್ತೇನಿಯನ್ನರ ಸಾವು!
ಇಸ್ರೇಲ್‌ನ ಮೇಲೆ ವ್ಯಾಪಕವಾದ ಹಮಾಸ್ ದಾಳಿಯ ನಂತರ ಇಸ್ರೇಲ್‌ನ ಪ್ರತೀಕಾರದಲ್ಲಿ ಕನಿಷ್ಠ 198 ಜನರು ಸಾವನ್ನಪ್ಪಿದ್ದಾರೆ ಮತ್ತು ಕನಿಷ್ಠ 1,610 ಜನರು ಗಾಯಗೊಂಡಿದ್ದಾರೆ ಎಂದು ಗಾಜಾದಲ್ಲಿನ ಪ್ಯಾಲೇಸ್ಟಿನಿಯನ್ ಆರೋಗ್ಯ ಸಚಿವಾಲಯ ಹೇಳಿದೆ. ಇಸ್ರೇಲ್ ಗಾಜಾದಲ್ಲಿ ಹಲವಾರು ವೈಮಾನಿಕ ದಾಳಿಗಳನ್ನು ನಡೆಸಿದೆ ಮತ್ತು ಕರಾವಳಿ ಪ್ರದೇಶದ ಸುತ್ತಲಿನ ಗಡಿ ಬೇಲಿಯಲ್ಲಿ ಬಂದೂಕುಧಾರಿಗಳೊಂದಿಗೆ ಘರ್ಷಣೆ ನಡೆಸಿದೆ.
ಇಸ್ರೇಲ್ ಮೇಲಿನ ದಾಳಿಯ ವಿಡಿಯೋ ಬರುತ್ತಿದ್ದಂತೆ 'ಅಲ್ಲಾಹ್' ಗೆ ಇದ್ದಲ್ಲಿಂದಲೇ ಸಜ್ದಾ ಮಾಡಿದ ಹಮಾಸ್ ಮುಖ್ಯಸ್ಥ!