Asianet Suvarna News Asianet Suvarna News

ಸ್ವಿಟ್ಜರ್‌ಲೆಂಡ್ ಪರ್ವತದ ಮೇಲೆ ಭಾರತದ ತಿರಂಗ ಪ್ರದರ್ಶನ, ಕೊರೋನಾ ಹೋರಾಟಕ್ಕೆ ಒಗ್ಗಟ್ಟಿನ ಮಂತ್ರ!

ಕೊರೋನಾ ವೈರಸ್ ಬಹುತೇಕ ಎಲ್ಲಾ ರಾಷ್ಟ್ರಗಳಿಗೆ ಹರಡಿದೆ. ಈ ಮಹಾಮಾರಿ ತೊಲಗಿಸಲು ಎಲ್ಲರೂ ಜೊತೆಯಾಗಿ ಹೋರಾಬೇಕಿದೆ. ವಿಶ್ವದ ಯಾವುದೇ ಮೂಲೆಯಲ್ಲಿ ಕೊರೋನಾ ಸೋಂಕು ಕಂಡು ಬಂದರೆ ಕ್ಷಣಾರ್ಧದಲ್ಲೇ ಎಲ್ಲೆಡೆ ಹರಡಲಿದೆ. ಹೀಗಾಗಿ ಜೊತೆಯಾಗಿ ಹೋರಾಟ ಅವಶ್ಯಕ. ಇದೀಗ ಸ್ವಿಟ್ಜರ್‌ಲೆಂಡ್ ಕೊರೋನಾ ಹೋರಾಟದಲ್ಲಿ ಒಗ್ಗಟ್ಟನ್ನು ಪ್ರದರ್ಶಿಸಲು ಖ್ಯಾತ ಮಾಥೆರಾನ್ ಪರ್ವತ ಸಂಪೂರ್ಣ ಭಾರತದ ತ್ರಿವರ್ಣ ಧ್ವಜ ಪ್ರದರ್ಶಿಸಿದೆ.
 

Switzerland Matterhorn lit in tricolour  expresses solidarity with India
Author
Bengaluru, First Published Apr 18, 2020, 5:53 PM IST

ಸ್ವಿಟ್ಜರ್‌ಲೆಂಡ್(ಏ.18): ಕೊರೋನಾ ವೈರಸ್ ವಿರುದ್ಧದ ಹೋರಾಟದಲ್ಲಿ ಭಾರತ ಹಲವು ದೇಶಗಳಿಗೆ ನೆರವಾಗಿದೆ. ಪ್ರಧಾನಿ ನರೇಂದ್ರ ಮೋದಿ ಎಲ್ಲರೂ ಜೊತೆಯಾಗಿ ಹೋರಾಡೋಣ ಎಂಬ ಸಂದೇಶವನ್ನು ಸಾರಿದ್ದರು. ಇದೀಗ ಭಾರತಕ್ಕೆ ಸ್ವಿಟ್ಜರ್‌ಲೆಂಡ್ ಕೂಡ ಸಾಥ್ ನೀಡಿದೆ. ಕೊರೋನಾ ಹೋರಾಟದಲ್ಲಿ ಸ್ವಿಟ್ಜರ್‌ಲೆಂಡ್ ಕೂಡ ಭಾರತದ ಜೊತೆಗಿರಲಿದೆ ಎಂಬ ಸಂದೇಶ ಸಾರಿದೆ. ಇದಕ್ಕಾಗಿ ಸ್ವಿಟ್ಜರ್‌ಲೆಂಡ್ ಮಾಥೆರಾನ್ ಪರ್ವತದ ಮೇಲೆ ಬೆಳಕಿನ ಮೂಲ ಭಾರತದ ತ್ರಿವರ್ಣ ಧ್ವಜ ಪ್ರದರ್ಶಿಸಿದೆ.

14,690 ಅಡಿ ಎತ್ತರದ ಮಾಥೆರಾನ್ ಪರ್ವತಕ್ಕೆ ಖ್ಯಾತ ಬೆಳಕು ಕಲಾವಿದ ಗ್ರೆ ಹೊಫ್ಸಟಟರ್ ಮಾರ್ಗದರ್ಶನದಲ್ಲಿ ಬೆಳಕಿನ ಸಂಯೋಜನೆ ಮಾಡಲಾಗಿದೆ.  ಕೊರೋನಾ ವೈರಸ್ ವಿರುದ್ಧದ ಹೋರಾಟದಲ್ಲಿ ಸ್ವಿಟ್ಜರ್‌ಲೆಂಡ್ ಸರ್ಕಾರ ಅವಿರತವಾಗಿ ಹೋರಾಡುತ್ತಿದೆ. ಹೀಗಾಗಿ ದೇಶದ ಜನರಲ್ಲಿ ಆತ್ಮಸ್ಥೈರ್ಯ ತುಂಬಲು ಈ ಬೆಳಕಿನ ಪ್ರದರ್ಶನ ಏರ್ಪಡಿಸಲಾಗಿತ್ತು. ಸ್ವಿಟ್ಜರ್‌ಲೆಂಡ್ ಧ್ವಜ ಬಳಿಕ ಭಾರತದ ಧ್ವಜವನ್ನೂ ಬೆಳಕಿನ ಮೂಲಕ ಪ್ರದರ್ಶಿಸಲಾಯಿತು.

ಸ್ವಿಟ್ಜರ್‌ಲೆಂಡ್ ಹಾಗೂ ಇಟಲಿ ಗಡಿ ಭಾಗದಲ್ಲಿರುವ ಈ ಪರ್ವತದಲ್ಲಿ ಭಾರತದ ಧ್ವಜ ಪ್ರದರ್ಶನದ ಕುರಿತು ಸ್ವಿಟ್ಜರ್‌ಲೆಂಡ್‌ನಲ್ಲಿರುವ ಭಾರತದ ವಿದೇಶಾಂಗ ಸೇವಾ ಅಧಿಕಾರಿ ಗುರ್ಲೀನ್ ಕೌರ್ ಟ್ವೀಟ್ ಮೂಲಕ ಸಂತಸ ವ್ಯಕ್ತಪಡಿಸಿದ್ದಾರೆ. ಕೊರೋನಾ ವಿರುದ್ಧದ ಹೋರಾಟದಲ್ಲಿ ಸ್ವಿಟ್ಜರ್‌ಲೆಂಡ್, ಭಾರತದ ಜೊತೆಗೆ ಒಗ್ಗಟ್ಟಿಮ ಮಂತ್ರ ಹೇಳಿದೆ. ಸ್ವಿಸ್‌ನ ಮಾಥೆರಾನ್ ಮೇಲಿನ ತಿರಂಗ ಪ್ರದರ್ಶನದಿಂದ ಹಿಮಾಲಯ ಹಾಗೂ ಮಾಥೆರಾನ್ ಪರ್ವತದ ಸ್ನೇಹ ಗಟ್ಟಿಯಾಗಿದೆ ಎಂದು ಟ್ವೀಟ್ ಮಾಡಿದ್ದಾರೆ.


ಸ್ವಿಟ್ಜರ್‌ಲೆಂಡ್ ಹಾಗೂ ಭಾರತದ ಧ್ವಜ ಪ್ರದರ್ಶನದ ಬಳಿಕ, ಅಮೆರಿಕ, ಇಂಗ್ಲೆಂಡ್ ಹಾಗೂ ಇಟಲಿ ಧ್ವಜಗಳನ್ನು ಪ್ರದರ್ಶಿಸಲಾಯಿತು. ಕತ್ತಲನ್ನು ನಿವಾರಿಸುವ ಬೆಳಕು ಇಡೀ ಜಗತ್ತಿಗೆ ಆವರಿಸಿದ ಮಾಹಾಮಾರಿಯನ್ನು ತೊಲಗಿಸಲಿ ಅನ್ನೋ ಕಾರಣದಿಂದ ಬೆಳಕಿನ ಪ್ರದರ್ಶನ ಏರ್ಪಡಿಸಲಾಗಿದೆ. ಈ ಮೂಲಕ ಕೊರೋನಾ ವಿರುದ್ಧದ ಹೋರಾಟದಲ್ಲಿ ಭಾಗಿಯಾಗಿವ ಸ್ವಿಟ್ಜರ್‌ಲೆಂಡ್‌ನ ಪ್ರತಿಯೊಬ್ಬ ನಾಗರೀಕನಲ್ಲಿ ಆತ್ಮವಿಶ್ವಾಸ ತುಂಬುವ ಪ್ರಯತ್ನ ಮಾಡುತ್ತಿದ್ದೇವೆ ಎಂದು ಸ್ವಿಸ್ ಅಧಿಕಾರಿಗಳು ಹೇಳಿದ್ದಾರೆ.

ಇತ್ತ ಭಾರತದಲ್ಲಿ ಪ್ರಧಾನಿ ಮೋದಿ ಕೊರೋನಾ ವಿರುದ್ಧದ ಹೋರಾಟದಲ್ಲಿ ದೀಪ, ಕ್ಯಾಡಂಲ್, ಮೊಬೈಲ್ ಲೈಟ್ ಉರಿಸಲು ಹೇಳಿದ್ದರು. ಈ ಮೂಲಕ ಜರನಲ್ಲಿ ಆತ್ಮವಿಶ್ವಾಸ ತುಂಬಿದ್ದರು. ಇದಕ್ಕೂ ಮೊದಲು ಕೊರೋನಾ ವಾರಿಯರ್ಸ್‌‌ಗೆ ಚಪ್ಪಾಳೆ ಮೂಲಕ ಹೋರಾಟಕ್ಕೆ ಸಲಾಂ ಹೇಳಲು ಕರೆ ನೀಡಿದ್ದರು. ಈ ಎರಡೂ ಕರೆಗೆ ದೇಶದ ಜನ ಅಭೂತಪೂರ್ವವಾಗಿ ಸ್ಪಂದಿಸಿದ್ದರು.
 

Follow Us:
Download App:
  • android
  • ios