Asianet Suvarna News Asianet Suvarna News

ಶ್ರೀಲಂಕಾದಲ್ಲಿ ಜನತಾ ದಂಗೆ, ರಾತ್ರೋರಾತ್ರಿ ಅಧ್ಯಕ್ಷ ಎಸ್ಕೇಪ್‌!

  • ಅಧ್ಯಕ್ಷರ ಬಂಗಲೆಗೆ ಸಹಸ್ರಾರು ಪ್ರತಿಭಟನಾಕಾರರ ಲಗ್ಗೆ , ಪ್ರಧಾನಿ ನಿವಾಸಕ್ಕೆ ಬೆಂಕಿ
  • ದ್ವೀಪರಾಷ್ಟ್ರದಲ್ಲಿ ಭುಗಿಲೆದ್ದ ಹಿಂಸೆ
  • ಪ್ರತಿಭಟನಾಕಾರರ ವಶಕ್ಕೆ ಅಧ್ಯಕ್ಷರ ನಿವಾಸ, ಕಚೇರಿ
  • ಪೊಲೀಸ್‌ ಜತೆ ಸಂಘರ್ಷ: ಕನಿಷ್ಠ 30 ಪ್ರತಿಭಟನಾಕಾರರಿಗೆ ಗಾಯ
  • ಪ್ರಧಾನಿ ರನಿಲ್‌ ತುರ್ತು ಸಭೆ, ರಾಜೀನಾಮೆ ಪ್ರಕಟ
  • 1 ವಾರದಲ್ಲಿ ಸರ್ವಸಮ್ಮತ ಅಧ್ಯಕ್ಷ, ಪ್ರಧಾನಿ ಆಯ್ಕೆಗೆ ಸರ್ವಪಕ್ಷ ತೀರ್ಮಾನ
Sri Lanka President Gotabaya Rajapaksa flees as protesters storm his home gow
Author
Bengaluru, First Published Jul 10, 2022, 6:02 AM IST

ಕೊಲಂಬೋ (ಜು.10): ಇತಿಹಾಸದಲ್ಲೇ ಕಂಡುಕೇಳರಿಯದ ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ದ್ವೀಪರಾಷ್ಟ್ರ ಶ್ರೀಲಂಕಾದಲ್ಲಿ ಕಂಡು ಕೇಳರಿಯದ ನಾಟಕೀಯ ಬೆಳವಣಿಗೆಗಳು ನಡೆದಿದ್ದು, ಅರಾಜಕತೆ ಸೃಷ್ಟಿಯಾಗಿದೆ. ಆರ್ಥಿಕ ಸಂಕಷ್ಟದಿಂದ ದೇಶವನ್ನು ಮೇಲೆತ್ತಲು ವಿಫಲರಾಗಿದ್ದಾರೆ ಎಂದು ದೇಶದ ಅಧ್ಯಕ್ಷ ಗೊಟಬಾಯ ರಾಜಪಕ್ಸೆ ಹಾಗೂ ಪ್ರಧಾನಿ ರನಿಲ್‌ ವಿಕ್ರಮಸಿಂಘೆ ವಿರುದ್ಧ ಜನರು ದಂಗೆ ಎದ್ದಿದ್ದಾರೆ.

ರಾಜಪಕ್ಸೆ ಅವರ ಅಧ್ಯಕ್ಷೀಯ ನಿವಾಸ ಹಾಗೂ ಕಚೇರಿಗೆ ನುಗ್ಗಿದ ಜನರು ಈ ಎರಡನ್ನೂ ತಮ್ಮ ‘ವಶಕ್ಕೆ’ ತೆಗೆದುಕೊಂಡಿದ್ದಾರೆ. ಇದಕ್ಕೆ ಬೆಚ್ಚಿದ ರಾಜಪಕ್ಷೆ ನಿವಾಸದಿಂದ ಪರಾರಿಯಾಗಿ ಕೊಲಂಬೋ ಕಡಲತೀರದ ಹಡಗಿನಲ್ಲಿ ‘ಅವಿತುಕೊಂಡಿದ್ದಾರೆ’. ಇನ್ನೊಂದೆಡೆ, ಶನಿವಾರ ರಾತ್ರಿ ಪ್ರಧಾನಿ ರನಿಲ್‌ ವಿಕ್ರಮಸಿಂಘೆ ಅವರ ಕೊಲಂಬೋದಲ್ಲಿನ ಖಾಸಗಿ ಮನೆಗೆ ಬೆಂಕಿ ಹಚ್ಚಿದ್ದಾರೆ. ಈ ವೇಳೆ ಪೊಲೀಸರು ನಡೆಸಿದ ಬಲಪ್ರಯೋಗದಲ್ಲಿ 30 ಮಂದಿಗೆ ಗಾಯಗಳಾಗಿವೆ.

ಇದರ ನಡುವೆಯೇ, ಪ್ರತಿಭಟನೆಗೆ ಬೆಚ್ಚಿದ ವಿಕ್ರಮಸಿಂಘೆ ರಾಜೀನಾಮೆ ಘೋಷಿಸಿದ್ದಾರೆ ಹಾಗೂ ಇನ್ನೊಂದು ವಾರದಲ್ಲಿ ಸರ್ವಪಕ್ಷಗಳ ಸರ್ಕಾರ ರಚನೆ ಆಗಲಿದ್ದು, ಹೊಸ ಪ್ರಧಾನಿ ಆಯ್ಕೆಯಾಗಲಿದ್ದಾರೆ ಎಂದು ಪ್ರಕಟಿಸಿದ್ದಾರೆ. ಅಲ್ಲಿಯವರೆಗೆ ಉಸ್ತುವಾರಿ ಪ್ರಧಾನಿಯಾಗಿ ಮುಂದುವರಿಯಲಿದ್ದಾರೆ. ಮತ್ತೊಂದೆಡೆ, ಸಭೆ ನಡೆಸಿದ ಸರ್ವಪಕ್ಷಗಳು ರಾಜಪಕ್ಸೆ ಅವರ ರಾಜೀನಾಮೆಗೆ ತಾಕೀತು ಮಾಡಿದ್ದು, ಲಂಕಾ ಸಂಸತ್ತಿನ ಸ್ಪೀಕರ್‌ ಯಪಾ ಅಭಯವರ್ಧನ ಅವರನ್ನು ‘ಉಸ್ತುವಾರಿ ಅಧ್ಯಕ್ಷ’ ಎಂದು ಘೋಷಿಸಿವೆ. ಅಲ್ಲದೆ, ಇನ್ನೊಂದು ವಾರದೊಳಗೆ ಹೊಸ ಅಧ್ಯಕ್ಷರ ಆಯ್ಕೆಗೆ ನಿರ್ಧರಿಸಿವೆ.

NEWS HOUR: ಅಧ್ಯಕ್ಷ ರಾಜಪಕ್ಸ ಪರಾರಿ, ಪ್ರಧಾನಿ ವಿಕ್ರಮ್ ಸಿಂಘೆ ರಾಜೀನಾಮೆ: ಶ್ರೀಲಂಕಾ ಸ್ಥಿತಿ ಅಧ್ವಾನ!

ಆಗಿದ್ದೇನು?: ಈ ಮೊದಲೇ ಶನಿವಾರ ಕೊಲಂಬೋಗೆ ಆಗಮಿಸಿ ಅಧ್ಯಕ್ಷ, ಪ್ರಧಾನಿ ರಾಜೀನಾಮೆಗೆ ಆಗ್ರಹಿಸಿ ಪ್ರತಿಭಟನೆ ನಡೆಸಲು ದೇಶದ ಜನತೆ, ವಿವಿಧ ಸಂಘಟನೆಗಳು ನಿರ್ಧರಿಸಿದ್ದವು. ಆದರೆ ಪ್ರತಿಭಟನೆ ಹತ್ತಿಕ್ಕಲು ದೇಶದ ವಿವಿಧ ಕಡೆ ಹೇರಲಾಗಿತ್ತು.

ಈ ನಡುವೆ, ವನ್ನು ಜನಾಕ್ರೋಶಕ್ಕೆ ಮಣಿದು ಶುಕ್ರವಾರ ಪೊಲೀಸರು ಹಿಂಪಡೆದುಕೊಳ್ಳುತ್ತಿದ್ದಂತೆ, ಲಂಕಾ ಅಧ್ಯಕ್ಷ ಗೊಟಬಾಯ ರಾಜಪಕ್ಸೆ ಅವರು ತಮ್ಮ ಅಧಿಕೃತ ನಿವಾಸದಿಂದ ಪರಾರಿಯಾಗಿದ್ದಾರೆ. ಇದರ ಬೆನ್ನಲ್ಲೇ, ಶನಿವಾರ ಬೆಳಗ್ಗೆಯಿಂದ ಲಂಕಾದ ಮೂಲೆಮೂಲೆಯಿಂದ ಸಹಸ್ರಾರು ಜನರು ಬಸ್‌, ಟೆಂಪೋ, ರೈಲು, ಸ್ವಂತ ವಾಹನಗಳಲ್ಲಿ ರಾಜಧಾನಿ ಕೊಲಂಬೋಗೆ ಲಗ್ಗೆ ಇಟ್ಟು, ಅಧ್ಯಕ್ಷರ ಬಂಗಲೆಯನ್ನು ಪ್ರವೇಶಿಸಿ, ರಾಜೀನಾಮೆ ನೀಡುವಂತೆ ಆಗ್ರಹಿಸಿದ್ದಾರೆ. ಅಧ್ಯಕ್ಷರ ಮನೆ ಈಗ ಪ್ರತಿಭಟನಾಕಾರರ ವಶವಾಗಿದ್ದು, ಅರಾಜಕತೆ ಸೃಷ್ಟಿಯಾಗಿದೆ.

ಅತ್ಯಂತ ಬಿಗಿಭದ್ರತೆಯ, ಸಮುದ್ರದಂಚಿಗೇ ಇರುವ ಫೋರ್ಚ್‌ ಪ್ರದೇಶದಲ್ಲಿರುವ ಅಧ್ಯಕ್ಷರ ಅಧಿಕೃತ ಬಂಗಲೆಗೆ ಇದ್ದ ಭದ್ರತಾ ಕೋಟೆಯನ್ನು ಭೇದಿಸಿದ ಪ್ರತಿಭಟನಾಕಾರರು, ಅಧ್ಯಕ್ಷರ ಮನೆಗೆ ನುಗ್ಗಿದ್ದಾರೆ. ಗೇಟ್‌ಗಳನ್ನು ಭೇದಿಸಿ, ಕಾಂಪೌಂಡ್‌ ಏರಿ ಮನೆಯನ್ನು ಪ್ರವೇಶಿಸುವಲ್ಲಿ ಸಫಲರಾಗಿದ್ದಾರೆ. ಈ ವೇಳೆ ಅಡುಗೆ ಮನೆಯಲ್ಲಿ ಆಹಾರ ಸಿದ್ಧಪಡಿಸಿ, ಅಲ್ಲೇ ಊಟ ಮಾಡಿದ್ದಾರೆ. ಮನೆಯ ವೈಭೋಗ ಕಣ್ತುಂಬಿಕೊಂಡಿದ್ದಾರೆ. ಅಧ್ಯಕ್ಷರ ಈಜುಕೊಳದಲ್ಲಿ ಈಜಾಡಿದ್ದಾರೆ. ಹಾಸಿಗೆ ಮೇಲೆ ಹೊರಳಾಡಿದ್ದಾರೆ. ಲಂಕಾ ರಾಷ್ಟ್ರಧ್ವಜವನ್ನು ಹಾರಾಡಿಸುತ್ತಾ, ‘ಅಧ್ಯಕ್ಷರೇ ಅಧಿಕಾರಕ್ಕೆ ಅಂಟಿಕೊಳ್ಳದೆ ರಾಜೀನಾಮೆ ನೀಡಿ’ ಎಂದು ಆಗ್ರಹ ಮಾಡಿದ್ದಾರೆ.

ಶ್ರೀಲಂಕಾ ನಾಗರಿಕರು ಉದ್ರಿಕ್ತ ಪ್ರಧಾನಿ ರನಿಲ್ ಬಿಕ್ರಮಸಿಂಘೆ ನಿವಾಸ ಧಗಧಗ!

ಈ ಪ್ರತಿಭಟನೆಯಲ್ಲಿ ಲಂಕಾ ಕ್ರಿಕೆಟ್‌ ತಂಡದ ಮಾಜಿ ನಾಯಕ ಸನತ್‌ ಜಯಸೂರ್ಯ ಕೂಡ ಭಾಗಿಯಾಗಿ, ಗೊಟಬಯ ರಾಜೀನಾಮೆಗೆ ಆಗ್ರಹಿಸಿದ್ದಾರೆ. ಈ ನಡುವೆ ಮಾಜಿ ಮಂತ್ರಿಯೊಬ್ಬರು ಪ್ರತಿಭಟನೆಗೆ ಬೆಂಬಲ ಸೂಚಿಸಲು ಬಂದಾಗ ಅವರಿಗೆ ಪ್ರತಿಭಟನಾಕಾರರು ಥಳಿಸಿದ್ದಾರೆ.

30 ಮಂದಿಗೆ ಗಾಯ: ಅಧ್ಯಕ್ಷರ ಮನೆ ಪ್ರವೇಶಿಸದಂತೆ ತಡೆಯಲು ಪೊಲೀಸರು ಮುಂದಾದಾಗ ಘರ್ಷಣೆ ಸಂಭವಿಸಿದೆ. ಈ ವೇಳೆ ಸುಮಾರು 30 ಮಂದಿ ಗಾಯಗೊಂಡಿದ್ದಾರೆ. ಕೆಲ ವರದಿಗಳ ಪ್ರಕಾರ, ಗಾಳಿಯಲ್ಲಿ ಗುಂಡು ಹಾರಿಸಿದರೂ ಪ್ರತಿಭಟನಾಕಾರರು ಜಗ್ಗಿಲ್ಲ. ಹೀಗಾಗಿ ಪೊಲೀಸರು ಮೂಕ ಪ್ರೇಕ್ಷಕರಾಗಿದ್ದಾರೆ.

ರನಿಲ್‌ ಮನೆಗೆ ಬೆಂಕಿ: ಪ್ರಧಾನಿ ರನಿಲ್‌ ವಿಕ್ರಮಸಿಂಘೆ ರಾಜೀನಾಮೆ ಘೋಷಿಸಿದ್ದರೂ ಪ್ರತಿಭಟನಾಕಾರರ ಆಕ್ರೋಶ ತಣಿದಿಲ್ಲ. ಕೊಲಂಬೋದ ಟೆಂಪಲ್‌ ಟ್ರೀ ಎಂಬಲ್ಲಿನ ಅವರ ಖಾಸಗಿ ನಿವಾಸಕ್ಕೆ ಪ್ರತಿಭಟನಾಕಾರರು ಬೆಂಕಿ ಹಚ್ಚಿದ್ದಾರೆ.

ಲಂಕಾ ದುಸ್ಥಿತಿಗೆ ಏನು ಕಾರಣ?

1. ಲಂಕಾದಲ್ಲಿ ಆರ್ಥಿಕ ಕರಾಳ ದಿನಗಳು ಆರಂಭವಾಗಿದ್ದು ಕಳೆದ ಮಾಚ್‌ರ್‍ನಲ್ಲಿ

2. ಆದರೆ ಕರಾಳ ಪರಿಸ್ಥಿತಿಗೆ ಮುನ್ನುಡಿ ಬರೆದಿದ್ದ 2019ರ ಈಸ್ಟರ್‌ ಬಾಂಬ್‌ ಸ್ಫೋಟ

3. ಸ್ಫೋಟದಿಂದ ಪ್ರವಾಸಿಗರ ಸಂಖ್ಯೆ ಇಳಿಕೆ, ನಂತರ ಕೊರೋನಾ ಲಾಕ್‌ಡೌನ್‌ ಹೊಡೆತ

4. ವಿದೇಶಿ ವಿನಿಮಯ ಸಂಗ್ರಹ ಕುಸಿತ, 4 ಲಕ್ಷ ಕೋಟಿ ರು. ಸಾಲ ಕಟ್ಟಲೂ ದುಡ್ಡಿಲ್ಲ

5. ಪೆಟ್ರೋಲಿಯಂ ಸೇರಿ ಅವಶ್ಯಕ ವಸ್ತುಗಳ ಆಮದಿಗೂ ಶ್ರೀಲಂಕಾ ಬಳಿ ಹಣ ಇಲ್ಲ

6. ಸಾಲ ಪಾವತಿಸುವುದಿಲ್ಲ ಎಂದು ಕಳೆದ ಬೇಸಿಗೆಯಲ್ಲೇ ಲಂಕಾ ಅಧ್ಯಕ್ಷರ ಘೋಷಣೆ

7. ಆಹಾರ, ಪೆಟ್ರೋಲ್‌ನಂಥ ಅಗತ್ಯವಸ್ತು ಸಿಗದೆ ಕಂಗೆಟ್ಟಜನ, ಏಪ್ರಿಲ್‌ನಿಂದ ಹೋರಾಟ

8. ಲಂಕಾ ಬಳಿ ಕಟ್ಟಲು ದುಡ್ಡಿಲ್ಲದ ಕಾರಣ ವಿದೇಶಗಳಿಂದಲೂ ಸಾಲ ನೀಡಲು ಹಿಂದೇಟು

9. ಮಹಿಂದ ರಾಜಪಕ್ಸೆ ಹುದ್ದೆ ತ್ಯಜಿಸಿ ರನಿಲ್‌ಗೆ ಪ್ರಧಾನಿ ಪಟ್ಟನೀಡಿದರೂ ಸುಧಾರಿಸದ ಸ್ಥಿತಿ

10. ಮೂರು ತಿಂಗಳಿನಿಂದ ಹೋರಾಡುತ್ತಿದ್ದ ಲಂಕಾ ಜನತೆಯ ಕೋಪ ದಿಢೀರ್‌ ಸ್ಫೋಟ

ಮೊನ್ನೆಯಿಂದ ಏನೇನಾಯ್ತು?

1. ಲಂಕಾ ಅಧ್ಯಕ್ಷ ಗೊಟಬಾಯ ರಾಜೀನಾಮೆಗೆ ಆಗ್ರಹಿಸಿ ಪ್ರತಿಭಟನೆಗೆ ಮೊನ್ನೆಯೇ ಜನತೆಯ ನಿರ್ಧಾರ

2. ಕೊಲಂಬೋಗೆ ಹೋಗಿ ಪ್ರತಿಭಟನೆಗೆ ವಿವಿಧ ಸಂಘಟನೆಗಳು ಸಜ್ಜು, ಹೀಗಾಗಿ 7 ಪ್ರಾಂತ್ಯಗಳಲ್ಲಿ

3. ಪ್ರತಿಭಟನೆ ಹತ್ತಿಕ್ಕಿದರೆ ಹಿಂಸಾಚಾರ ನಡೆಯುವ ಭೀತಿ, ಹೀಗಾಗಿ ಶುಕ್ರವಾರ ರಾತ್ರಿ 8ಕ್ಕೆ ರದ್ದು

4. ದೇಶಾದ್ಯಂತ ವಾಪಸ್‌ ಘೋಷಣೆ ಆಗುತ್ತಿದ್ದಂತೆಯೇ ಅಧ್ಯಕ್ಷ ಗೊಟಬಯ ರಾಜಪಕ್ಸೆಗೆ ನಡುಕ

5. ಉದ್ರಿಕ್ತ ಪ್ರತಿಭಟನಾಕಾರರು ಅಧ್ಯಕ್ಷರ ಮನೆಗೆ ನುಗ್ಗುತ್ತಾರೆ, ಪರಿಸ್ಥಿತಿ ಕೈಮೀರುತ್ತೆಂದು ಗುಪ್ತಚರ ಮಾಹಿತಿ

6. ಮುನ್ನೆಚ್ಚರಿಕೆ ಕ್ರಮವಾಗಿ ತಮ್ಮ ನಿವಾಸದಿಂದ ಭಾರೀ ಭದ್ರತೆಯೊಂದಿಗೆ ರಾತ್ರೋರಾತ್ರಿ ರಾಜಪಕ್ಸೆ ‘ಪರಾರಿ’

7. ಶ್ರೀಲಂಕಾ ರಾಜಧಾನಿ ಕೊಲಂಬೋ ಬಂದರಿನಲ್ಲಿನ ನೌಕಾಪಡೆ ಹಡಗು ‘ಗಹಬಾಹು’ವಿನಲ್ಲಿ ಆಶ್ರಯ

8. ಶನಿವಾರ ದೇಶದೆಲ್ಲೆಡೆಯಿಂದ ರೈಲು, ಬಸ್ಸು ಸೇರಿದಂತೆ ಸಿಕ್ಕಸಿಕ್ಕ ವಾಹನಗಳಲ್ಲಿ ಕೊಲಂಬೋಗೆ ಜನತೆ ಲಗ್ಗೆ

9. ಪೊಲೀಸ್‌ ಜತೆ ಸಂಘರ್ಷ. ಅಧ್ಯಕ್ಷರ ನಿವಾಸ, ಕಚೇರಿಗೆ ನುಗ್ಗಿ ಜನರ ದಾಂಧಲೆ. ವ್ಯಾಪಕ ಜನಾಕ್ರೋಶ

10. ಪ್ರಧಾನಿ ವಿಕ್ರಮಸಿಂಘೆ ತುರ್ತು ಸಭೆ: ರಾಜೀನಾಮೆ ಘೋಷಣೆ, ಮಧ್ಯಂತರ ಅಧ್ಯಕ್ಷರ ನೇಮಕ

ಮುಂದೇನು?

1. ದ್ವೀಪರಾಷ್ಟ್ರದಲ್ಲಿ ಸರ್ವಪಕ್ಷಗಳ ತುರ್ತು ಸಭೆ, ಶೀಘ್ರ ಸರ್ವಪಕ್ಷ ಸರ್ಕಾರಕ್ಕೆ ತೀರ್ಮಾನ

2. ರಾಜೀನಾಮೆ ನೀಡಿದ ಪ್ರಧಾನಿ ರನಿಲ್‌ ವಿಕ್ರಮಸಿಂಘೆ ಹಂಗಾಮಿಯಾಗಿ ಮುಂದುವರಿಕೆ

3. ತಲೆಮರೆಸಿಕೊಂಡಿರುವ ಲಂಕಾ ಅಧ್ಯಕ್ಷ ಗೊಟಬಯ ರಾಜಪಕ್ಸೆ ರಾಜೀನಾಮೆಗೆ ಸೂಚನೆ

4. ಸಂಸತ್ತಿನ ಸ್ಪೀಕರ್‌ ಯಪಾ ಅಭಯವರ್ಧನಗೆ ಶ್ರೀಲಂಕಾದ ಹಂಗಾಮಿ ಅಧ್ಯಕ್ಷ ಹುದ್ದೆ

5. ವಾರದಲ್ಲಿ ಸಂಸತ್‌ ಕಲಾಪ, ಅಧ್ಯಕ್ಷರ ಆಯ್ಕೆ .ಬಳಿಕ ಸರ್ಕಾರ ರಚನೆ, ಪ್ರಧಾನಿ ಆಯ್ಕೆ

Follow Us:
Download App:
  • android
  • ios