Asianet Suvarna News Asianet Suvarna News

Covid-19 Alert : ದಿನಕ್ಕೆ 6 ಲಕ್ಷಕ್ಕೂ ಅಧಿಕ ಕೇಸ್ ಕಾಣುತ್ತಿರುವ ದಕ್ಷಿಣ ಕೊರಿಯಾ!

ದಕ್ಷಿಣ ಕೊರಿಯಾದಲ್ಲಿ ಕರೋನಾ ಅಟ್ಟಹಾಸ

ದಿನಕ್ಕೆ 6 ಲಕ್ಷಕ್ಕಿಂತ ಅಧಿಕ ಕೇಸ್ ಗಳು

ವಿಶ್ವಕ್ಕೆ ಮತ್ತೊಮ್ಮೆ ಎಚ್ಚರಿಕೆ ನೀಡಿದ ವಿಶ್ವ ಆರೋಗ್ಯ ಸಂಸ್ಥೆ

South Korea sees over 6 lakh COVID 19 cases in a day WHO warns nations san
Author
Bengaluru, First Published Mar 18, 2022, 4:10 PM IST

ಸಿಯೋಲ್, ದಕ್ಷಿಣ ಕೊರಿಯಾ (ಮಾ. 18):  ಒಂದೆಡೆ ಭಾರತದಲ್ಲಿ ಕೊರೊನಾವೈರಸ್ (Coronavirus) ಸಾಂಕ್ರಾಮಿಕ (pandemic ) ರೋಗವು ಕಡಿಮೆಯಾಗುತ್ತಿರುವಂತೆ ತೋರುತ್ತಿರುವುದರಿಂದ, ಮೇ 2020 ರಿಂದ ದೈನಂದಿನ ಸೋಂಕುಗಳು ಕಡಿಮೆ ಮಟ್ಟಕ್ಕೆ ಇಳಿಯುತ್ತಿವೆ. ಆದರೆ, ಏಷ್ಯಾದ (Asia) ಇತರ ಕೆಲವು ದೇಶಗಳಲ್ಲಿ ಇದೇ ರೀತಿಯ ಸ್ಥಿತಿಯಿಲ್ಲ. ಒಂದೆಡೆ ಜಗತ್ತಿನಲ್ಲಿ ಕೋವಿಡ್-19 (Covid-19) ಮೇಲಿನ  ನಿರ್ಬಂಧಗಳನ್ನು ನಿಧಾನವಾಗಿ ತೆಗೆದು ಹಾಕುತ್ತಿರುವ ನಡುವೆಯೇ, ವಿಶ್ವ ಆರೋಗ್ಯ ಸಂಸ್ಥೆಯು (world health organization) ಒಮಿಕ್ರಾನ್ ರೂಪಾಂತರವಾಗಿರುವ ಅದರ ಉಪ ವೇರಿಯಂಟ್ ಬಿಎ.2 (BA.2) ಅಥವಾ ಸ್ಟೀಲ್ತ್ ಓಮಿಕ್ರಾನ್ ಕುರಿತಾಗಿ ದೊಡ್ಡ ಮಟ್ಟ ಎಚ್ಚರಿಕೆಯನ್ನು ನೀಡಿದೆ.

ಮಂಗಳವಾರ ಈ ಕುರಿತಾಗಿ ಮಾಹಿತಿ ನೀಡಿದ್ದ ವಿಶ್ವ ಆರೋಗ್ಯ ಸಂಸ್ಥೆ, ಕಳೆದ ವಾರಕ್ಕೆ ಹೋಲಿಸಿದರೆ, ಈ ವಾರದಲ್ಲಿ ಕೋವಿಡ್-19 ಕೇಸ್ ಗಳಲ್ಲಿ ಶೇ. 8ರಷ್ಟು ಏರಿಕೆ ಕಂಡಿದೆ ಎಂದು ಹೇಳಿದೆ. ಇದರಲ್ಲಿ ಅತಿದೊಡ್ಡ ಪ್ರಮಾಣದ ಏರಿಕೆ ಪಶ್ಚಿಮ ಪೆಸಿಪಿಕ್ ಭಾಗ ಅಥವಾ ದಕ್ಷಿಣ ಕೊರಿಯಾ (South Korea) ಹಾಗೂ ಚೀನಾ (China) ಭಾಗದಲ್ಲಾಗಿದೆ ಎಂದು ತಿಳಿಸಿದೆ. ಈ ಪ್ರದೇಶದಲ್ಲಿ ಕೇಸ್ ಗಳ ಸಂಖ್ಯೆ ಶೇ. 25ರಷ್ಟು ಏರಿಕೆಯಾಗಿದ್ದರೆ, ಸಾವುಗಳ ಪ್ರಮಾಣದಲ್ಲಿ ಶೇ.27ರಷ್ಟು ಏರಿಕೆ ಕಂಡಿದೆ ಎನ್ನಲಾಗಿದೆ.

ಇದರ ಬೆನಲ್ಲಿಯೇ ಗುರುವಾರ ದಕ್ಷಿಣ ಕೊರಿಯಾ ದೇಶದಲ್ಲಿ ದಾಖಲೆ ಪ್ರಮಾಣದ ಕೋವಿಡ್-19 ಸೋಂಕುಗಳು ಹಾಗೂ ಸಾವುಗಳನ್ನು ವರದಿ ಮಾಡಿದೆ.  ಮುಂದಿನ ಕೆಲ ದಿನಗಳಲ್ಲಿಯೇ ದಕ್ಷಿಣ ಕೊರಿಯಾ ಬಹುತೇಕವಾಗಿ ಎಲ್ಲಾ ರೀತಿಯ ಸಾಮಾಜಿಕ ನಿರ್ಬಂಧಗಳು ಹಾಗೂ ಕೋವಿಡ್-19 ನಿಯಮಾವಳಿಗಳನ್ನು ತೆಗೆದುಹಾಕುವ ಗುರಿಯಲ್ಲಿದ್ದ ನಡುವೆಯೇ ಈ ಪ್ರಕರಣಗಳು ಸದ್ದು ಮಾಡಿವೆ. ಗುರುವಾರ ಒಂದೇ ದಿನ ದಕ್ಷಿಣ ಕೊರಿಯಾದಲ್ಲಿ 6,21,328 ಕೇಸ್ ಗಳು ವರದಿಯಾಗಿದ್ದರೆ, 429 ಮಂದಿ ಸಾವಿಗೀಡಾಗಿದ್ದಾರೆ.

ಆಕ್ರಮಣಕಾರಿ ಟ್ರ್ಯಾಕಿಂಗ್ ಮತ್ತು ಟ್ರೇಸಿಂಗ್, ಸಾಮೂಹಿಕ ಪರೀಕ್ಷೆ ಮತ್ತು ಹೆಚ್ಚಿನ ವ್ಯಾಕ್ಸಿನೇಷನ್ ಮತ್ತು ಬೂಸ್ಟರ್ ಡೋಸ್ ಗಳನ್ನು ಒಳಗೊಂಡ ದೇಶದ ಕಟ್ಟುನಿಟ್ಟಾದ ಕೋವಿಡ್ ವಿರೋಧಿ ವಿಧಾನದ ಹೊರತಾಗಿಯೂ ಇಷ್ಟು ದೊಡ್ಡ ಪ್ರಮಾಣದಲ್ಲಿ ಕೋವಿಡ್ ಪ್ರಕರಣಗಳಲ್ಲಿ ಏರಿಕೆಯಾಗಿದೆ. ಕೊರಿಯಾ ರೋಗ ನಿಯಂತ್ರಣ ಮತ್ತು ತಡೆಗಟ್ಟುವಿಕೆ ಏಜೆನ್ಸಿ (ಕೆಡಿಸಿಎ) ದಾಖಲೆಯ ಉಲ್ಬಣದ ಹಿಂದೆ ಹೆಚ್ಚು ಸಾಂಕ್ರಾಮಿಕವಾಗಿರುವ ಓಮಿಕ್ರಾನ್ ರೂಪಾಂತರ ವೈರಸ್ ಇದೆ ಎಂದು ಹೇಳಿದೆ. ಪ್ರಸ್ತುತ ಅಂಕಿಅಂಶಗಳು ದಕ್ಷಿಣ ಕೊರಿಯಾದ ಆರೋಗ್ಯ ಅಧಿಕಾರಿಗಳು ಊಹಿಸಿದ್ದಕ್ಕಿಂತ ಹೆಚ್ಚಾಗಿದೆ. ಮಾರ್ಚ್ 16 ರಂದು ಸರ್ಕಾರ ನೀಡಿದ ಹೇಳಿಕೆ ಪ್ರಕಾರ, ಹೊಸ ಅಲೆಯಲ್ಲಿ ದೈನಂದಿನ ಸೋಂಕಿನ ಪ್ರಮಾಣದ ಸಂಖ್ಯೆಗಳಲ್ಲಿ ಗರಿಷ್ಠ 4 ಲಕ್ಷದವರೆಗೆ ಏರಬಹುದು ಎಂದು ಅಂದಾಜು ಮಾಡಲಾಗಿತ್ತು.

ಪ್ರಕರಣಗಳು ದಾಖಲೆಯ ಮಟ್ಟಕ್ಕೆ ಏರುತ್ತಿದ್ದರೂ ಸಹ, ದಕ್ಷಿಣ ಕೊರಿಯಾದ ಸರ್ಕಾರವು ಮುಂಬರುವ ದಿನಗಳು ಮತ್ತು ವಾರಗಳಲ್ಲಿ ಬಹುತೇಕ ಎಲ್ಲಾ ಸಾಮಾಜಿಕ ದೂರ ನಿರ್ಬಂಧಗಳನ್ನು ತೆಗೆದುಹಾಕಲು ನಿರ್ಧರಿಸಿದೆ, ಸಾರ್ವಜನಿಕ ಅಭಿಪ್ರಾಯ ಕೂಡ ಸರ್ಕಾರದ ನಿರ್ಧಾರವನ್ನು ಬೆಂಬಲಿಸಿದೆ.

ಬರುತ್ತಿದೆ ಹೊಸ Corona ಅಲೆ! Stealth Omicron ಲಕ್ಷಣಗಳೇನು ಗೊತ್ತಾ?
ದಕ್ಷಿಣ ಕೊರಿಯಾ ಮಾತ್ರವಲ್ಲದೆ, ವಿಯೆಟ್ನಾಂ (Vietnam) ಕೂಡ ದೈನಂದಿನ ಸೋಂಕುಗಳಲ್ಲಿ ದಾಖಲೆಯ ಏರಿಕೆಯನ್ನು ನೋಡುತ್ತಿದೆ. ಕಳೆದ ಕೆಲವು ದಿನಗಳಿಂದ ಪ್ರತಿದಿನ ಸುಮಾರು 2 ಲಕ್ಷಕ್ಕೂ ಅಧಿಕ ಪ್ರಕರಣಗಳನ್ನು ವರದಿ ಮಾಡಿದೆ. ಮಾರ್ಚ್ 17 ರಂದು, ಅಲ್ಲಿನ ಆರೋಗ್ಯ ಸಚಿವಾಲಯದ ಪ್ರಕಾರ, ವಿಯೆಟ್ನಾಂನಲ್ಲಿ 1,78,112 ಹೊಸ ಸೋಂಕುಗಳು ದಾಖಲಾಗಿವೆ. ದೇಶದ ಎರಡು ಪ್ರಾಂತ್ಯಗಳು ಕೋವಿಡ್ ಕುರಿತಾದ ಎಣಿಕೆ ನೀಡದ ಕಾರಣ ಗುರುವಾರ ಈ ಸಂಖ್ಯೆಗೆ ಇದನ್ನು ಸೇರಿಸಲಾಗಿದ್ದು, ಗುರುವಾರ 1.80 ಲಕ್ಷ ಪ್ರಕರಣಗಳು ವರದಿಯಾಗಿವೆ. ಒಟ್ಟಾರೆ 76 ಸಾವುಗಳನ್ನು ದೇಶ ಕಂಡಿದೆ.

ಮತ್ತೆ ಕೊರೋನಾ ಆತಂಕ, ಹೊಸ ತಳಿಯ ಎರಡು ಪ್ರಕರಣಗಳು ಪತ್ತೆ!
ವಿಶ್ವ ಆರೋಗ್ಯ ಸಂಸ್ಥೆಯ ಮಾಹಿತಿಯ ಪ್ರಕಾರ, ದಕ್ಷಿಣ ಕೊರಿಯಾವು ಕಳೆದ ಏಳು ದಿನಗಳಲ್ಲಿ 17,76,045 ಪ್ರಕರಣಗಳೊಂದಿಗೆ ಜಾಗತಿಕ ಮಟ್ಟದಲ್ಲಿ ಎರಡನೇ ಅತಿ ಹೆಚ್ಚು ಕೋವಿಡ್ ಪ್ರಕರಣಗಳನ್ನು ಸೇರಿಸಿದ ದೇಶವೆನಿಸಿದೆ. ಪ್ರಕರಣಗಳು ಹೆಚ್ಚಾಗುತ್ತಿದ್ದರೂ ಸಹ, ವಿದೇಶಿ ಪ್ರಯಾಣಿಕರಿಗೆ ಅಂತರಾಷ್ಟ್ರೀಯ ಸಂಪರ್ಕತಡೆಯನ್ನು ಮತ್ತು ಇತರ ಪ್ರಯಾಣ ನಿರ್ಬಂಧಗಳನ್ನು ತೆಗೆದುಹಾಕುವುದಾಗಿ ಸರ್ಕಾರ ಬುಧವಾರ ಘೋಷಿಸಿದೆ. ಇದರರ್ಥ ದೇಶವು ಎರಡು ವರ್ಷಗಳ ನಂತರ ತನ್ನ ಗಡಿಗಳನ್ನು ಸಂಪೂರ್ಣವಾಗಿ ತೆರೆಯಲಿದೆ. ಆದರೆ,  ಪ್ರವಾಸಿಗರು ಆಗಮನದ ನಂತರ ನೆಗೆಟಿವ್ ಪರೀಕ್ಷಾ ವರದಿಯನ್ನು ನೀಡಬೇಕಿರುತ್ತದೆ. ಸಾಂಕ್ರಾಮಿಕ ರೋಗವು ಪ್ರಾರಂಭವಾದಾಗಿನಿಂದ ಇಲ್ಲಿಯವರೆಗೆ ಅದರ ಅತಿದೊಡ್ಡ ಪರಿಣಾಮ ಎದುರಿಸುತ್ತಿರುವ ಚೀನಾ (China) ಮಾರ್ಚ್ 14 ರಂದು 3,507 ಹೊಸ ಪ್ರಕರಣಗಳನ್ನು ವರದಿ ಮಾಡಿದೆ . ಇದು ಬುಧವಾರ ವರದಿ ಮಾಡಿದ್ದಕ್ಕಿಂತ ದ್ವಿಗುಣವಾಗಿದೆ.

Follow Us:
Download App:
  • android
  • ios