* ಲಡಾಖ್‌ನಲ್ಲಿ ಚೀನಾ ಬೆಳವಣಿಗೆ ಆತಂಕಕಾರಿ* ಇದನ್ನು ಗಂಭೀರವಾಗಿ ಪರಿಗಣಿಸಲು ಭಾರತಕ್ಕೆ ಸಲಹೆ* ಲಡಾಖ್‌ನಲ್ಲಿ ಚೀನಾ ನಿರ್ಮಾಣ ಬಗ್ಗೆ ಭಾರತಕ್ಕೆ ಅಮೆರಿಕ ಎಚ್ಚರಿಕೆ

ನವದೆಹಲಿ(ಜೂ,09): ಲಡಾಖ್‌ ಭಾಗದಲ್ಲಿ ಚೀನಾ ಮೂಲಸೌಕರ್ಯಗಳನ್ನು ನಿರ್ಮಾಣ ಮಾಡುತ್ತಿರುವ ವಿಷಯವನ್ನು ಭಾರತವು ಗಂಭೀರವಾಗಿ ಪರಿಗಣಿಸಬೇಕು ಎಂದು ಅಮೆರಿಕದ ಹಿರಿಯ ಸೇನಾಧಿಕಾರಿಯೊಬ್ಬರು ಎಚ್ಚರಿಕೆ ನೀಡಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

‘ಹಿಮಾಲಯದ ಗಡಿಭಾಗದಲ್ಲಿ ಮೂಲಸೌಕರ್ಯಗಳ ನಿರ್ಮಾಣ ಮಾಡುವ ಮೂಲಕ ಚೀನಾ, ಗಡಿಭಾಗದಲ್ಲಿ ಅಸ್ಥಿರತೆ ತರುವ ವಿನಾಶಕಾರಿ ಚಟುವಟಿಕೆ ನಡೆಸುತ್ತಿದೆ. ಇದು ಆತಂಕಕಾರಿ ಬೆಳವಣಿಗೆಯಾಗಿದ್ದು, ಭಾರತವು ಇದನ್ನು ಗಂಭೀರವಾಗಿ ಪರಿಗಣಿಸಬೇಕು’ ಎಂದು ಅಮೆರಿಕ ಸೇನೆಯ ಜನರಲ್‌ ಚಾರ್ಲ್ಸ್ ಫ್ಲೈನ್‌ ಹೇಳಿದ್ದಾರೆ.

‘ಲಡಾಖ್‌ ವಲಯದಲ್ಲಿ ಚೀನಾ ಸೇನಾ ಶಸ್ತ್ರಾಗಾರವನ್ನೇ ನಿರ್ಮಿಸುವಂತೆ ಕಂಡುಬರುತ್ತಿದೆ.ಚೀನಾ ಆಕ್ರಮಣಕಾರಿ ಪ್ರವೃತ್ತಿ ನಿಗ್ರಹಕ್ಕಾಗಿ ದೇಶಗಳು ಒಗ್ಗೂಡಿ ಮಾತುಕತೆ ನಡೆಸಬೇಕು’ ಎಂದಿದ್ದಾರೆ.

‘ಈ ಹಿನ್ನೆಲೆಯಲ್ಲಿ ಭಾರತ ಹಾಗೂ ಅಮೆರಿಕ ಎತ್ತರದ ಪ್ರದೇಶಗಳಲ್ಲಿ ಯುದ್ಧ ಮಾಡಲು ಸೇನಾ ತರಬೇತಿ ಯೋಜನೆ ಹಮ್ಮಿಕೊಳ್ಳಲಿದೆ. ಯೋಜನೆಯ ಭಾಗವಾಗಿ ಅಕ್ಟೋಬರ್‌ ತಿಂಗಳಲ್ಲಿ ಹಿಮಾಲಯದ 9,000-10,000 ಅಡಿ ಎತ್ತರದ ಪ್ರದೇಶದಲ್ಲಿ ಯೋಧರು ಯುದ್ಧಾಭ್ಯಾಸ ನಡೆಸಲಿದ್ದಾರೆ. ಈ ತರಬೇತಿ ವೈಮಾನಿಕ ದಾಳಿ, ಲಾಜಿಸ್ಟಿಕ್‌ ಹಾಗೂ ನೈಜ ಸಮಯದ ಆಧಾರದ ಮೇಲೆ ಮಾಹಿತಿ ರವಾನೆ ಮೊದಲಾದ ಅಂಶಗಳನ್ನೊಳಗೊಳ್ಳಲಿದೆ’ ಎಂದು ಫ್ಲೈನ್‌ ತಿಳಿಸಿದ್ದಾರೆ.