Asianet Suvarna News Asianet Suvarna News

snake in sofa: ಹೊಸ ಸೋಫಾ ಮನೆಗೆ ತಂದವನಿಗೆ ಶಾಕ್‌...

ಮನೆಗೆ ಹೊಸ ಸೋಪಾ ತಂದವನಿಗೆ ಶಾಕ್‌
ಸೋಫಾದಲ್ಲಿತ್ತು 5 ಅಡಿ ಉದ್ದದ ಹಾವು
ಅಮೆರಿಕಾದ ಫ್ಲೋರಿಡಾದಲ್ಲಿ ಘಟನೆ
 

snake in the sofa 5 feet long reptile shocks sofa buyer akb
Author
Banglore, First Published Dec 8, 2021, 3:46 PM IST

ಫ್ಲೋರಿಡಾ(ಡಿ.8): ಮನೆಯನ್ನು ಚೆನ್ನಾಗಿರಿಸಲು ಸೋಫಾ ಚೇರ್‌ ಮುಂತಾದ ಸಾಧನಗಳನ್ನು ಮನೆಗೆ ತರುವುದು ಸಾಮಾನ್ಯ. ಆದರೆ ಹೀಗೆ ಅಂಗಡಿಯಿಂದ ತಂದ ವಸ್ತುಗಳಲ್ಲಿ ಬಿಚ್ಚಿ ನೋಡಿದಾಗ ಹಾವಿದ್ದರೆ ನಿಮ್ಮ ಸ್ಥಿತಿ ಹೇಗಾಗಬೇಡ. ಇಲ್ಲೂ ಆಗಿದೂ ಅದೆ. ಅಮೆರಿಕಾದ ಫ್ಲೋರಿಡಾದ ಕ್ಲಿಯರ್‌ವಾಟರ್‌ನಲ್ಲಿ ವ್ಯಕ್ತಿಯೊಬ್ಬ ಮನೆಗೆ ಹೊಸದೊಂದು ಸೋಫಾ ತಂದಿದ್ದ. ಅದನ್ನು ಮನೆಯ ಲಾನ್‌ನಲ್ಲಿಡಲು ಸಿದ್ಧತೆ ನಡೆಸಿದ್ದ ಅಷ್ಟರಲ್ಲಿ ಅವನಿಗೆ ಅದರಲ್ಲಿ ಬುಸುಗುಡುವ ಹಾವು ಕಂಡಿದ್ದು, ಕೂಡಲೇ ಸೋಫಾವನ್ನು ಮನೆಯ ಒಳಗಿಡುವ ಬದಲು ಹೊರಗಿಟ್ಟಿದ್ದಾನೆ. ನಂತರ ತಕ್ಷಣವೇ ಆತ ಕ್ಲಿಯರ್‌ವಾಟರ್‌ ಪೊಲೀಸ್‌ ಇಲಾಖೆಗೆ ಕರೆ ಮಾಡಿದ್ದು, ಅವರು ಬಂದು ಸುರಕ್ಷಿತವಾಗಿ ಅದನ್ನು ಹಿಡಿದು ಬೇರೆಡೆ ಸಾಗಿಸಿದ್ದಾರೆ.

ಸೋಫಾದೊಳಗೆ ಅಡಗಿದ್ದ5 ಅಡಿ ಉದ್ದದ, ಕೆಂಪು ಬಾಲದ ಬೋವಾ ಎಂದು ಕರೆಯಲ್ಪಡುವ ಬೋವಾ ಕನ್‌ಸ್ಟ್ರಿಕ್ಟರ್ ಅನ್ನು ಸುರಕ್ಷಿತವಾಗಿ  ಹೊರ ತೆಗೆದ  ಕ್ಲಿಯರ್‌ವಾಟರ್‌ ಪೊಲೀಸ್‌ ಇಲಾಖೆಯ ಸಿಬ್ಬಂದಿ ನಂತರ ಆ ಹಾವನ್ನು ಕೈಯಲ್ಲಿ ಹಿಡಿದು ಫೋಟೋ ತೆಗೆದುಕೊಂಡಿದ್ದು, ಅದನ್ನು  ಸಾಮಾಜಿಕ  ಜಾಲತಾಣ ಇನ್ಸ್ಟಾಗ್ರಾಮ್‌ನಲ್ಲಿ ಫೋಸ್ಟ್‌ ಮಾಡಿದ್ದಾರೆ. ಹಾವು ಜೀವಂತವಾಗಿದೆ. ಕ್ಲಿಯರ್‌ವಾಟರ್‌(Clearwater)ನ ನಿವಾಸಿಯೊಬ್ಬರು ಇಂದು ಮಧ್ಯಾಹ್ನ ಕರೆ ಮಾಡಿ ತಮ್ಮ ಮನೆಯಲ್ಲಿ ಹೆಬ್ಬಾವು ಕಾಣಿಸಿಕೊಂಡಿದೆ ಎಂದು ತಿಳಿಸಿದ್ದರು. ನಂತರ ಮನೆಯ ಸೋಫಾದಲ್ಲಿ ಅಡಗಿದ ಹೆಬ್ಬಾವನ್ನು ರಕ್ಷಣೆ ಮಾಡಲಾಗಿದೆ ಎಂಬ ಶೀರ್ಷಿಕೆಯೊಂದಿಗೆ ಈ ಫೋಟೊವನ್ನು ಹಂಚಿಕೊಂಡಿದ್ದಾರೆ. ಹಾವುಗಳು ಹೀಗೆ ಸೋಫಾ ಮಂಚ ಮನೆಯಲ್ಲಿರುವ ಕಾರು, ಬೈಕ್‌ಗಳ ಸೆರೆಗಳಲ್ಲಿ ಹೋಗಿ ಅವಿತುಕೊಳ್ಳುವುದು ಸಾಮಾನ್ಯ. ಮಳೆಗಾಲದಲ್ಲಿ ಹಾವುಗಳು ಹೀಗೆ ಸಂಧಿಗೊಂದಿಗಳಲ್ಲಿ ಹೆಚ್ಚಾಗಿ ಸೇರಿಕೊಳ್ಳುತ್ತವೆ. 

ತಿ ವರ್ಷ ವಿಶ್ವಾದ್ಯಂತ ಲಕ್ಷಾಂತರ ಜನರು ಹಾವುಗಳ  (Snakes) ಕಡಿತದಿಂದ ಸಾವನ್ನಪ್ಪುತ್ತಾರೆ. ಭಾರತದಲ್ಲಿಯೂ ಹಾವು ಕಚ್ಚಿ  (Snake Bite) ಜನರು ಸಾಯುವುದು ಸಾಮಾನ್ಯ. ಕೇರಳ(kerala) ರಾಜ್ಯವೊಂದರಲ್ಲೇ  ಕಾಡು ಮೃಗಗಳ ಆಕ್ರಮಣದಿಂದಾಗಿ ಮೃತಪಟ್ಟವರಲ್ಲಿ ಮೂರು ಪಟ್ಟು ಮಂದಿ ಹಾವು ಕಡಿತದಿಂದಲೇ ಸಾಯುತ್ತಿರುವುದಾಗಿ ಅಂಕಿ ಅಂಶಗಳು ತಿಳಿಸುತ್ತಿವೆ. ಕಳೆದ ಐದು ವರ್ಷಗಳಲ್ಲಿ ಕೇರಳ ರಾಜ್ಯದಲ್ಲಿ 435 ಮಂದಿ ಹಾವು ಕಡಿತಕ್ಕೊಳಗಾಗಿ ಪ್ರಾಣ ಕಳೆದುಕೊಂಡಿದ್ದಾರೆ.

Maryland : ಹಾವುಗಳಿಗೆ ಬೆಂಕಿ ಇಟ್ಟ, 13 ಕೋಟಿ ಬೆಲೆಬಾಳುವ ತನ್ನದೇ ಮನೆ ಸುಟ್ಟು ಕೆಟ್ಟ!

ಆದರೆ ಈ ಐದು ವರ್ಷಗಳಲ್ಲಿ ಕಾಡು ಮೃಗಗಳ ಹಾವಳಿಗೆ 160 ಮಂದಿ ಬಲಿಯಾಗಿದ್ದಾರೆ. ಈ ಲೆಕ್ಕಾಚಾರ ಪ್ರಕಾರ 93 ಮಂದಿ ಹಾವು ಕಡಿತಕ್ಕೊಳಗಾಗಿದ್ದು, 43 ಮಂದಿ ಕಾಡು ಮೃಗಗಳ ಹಾವಳಿಗೆ ಬಲಿಯಾಗಿದ್ದಾರೆ. ತ್ರಿಶ್ಯೂರು(Thrissur) ಜಿಲ್ಲೆಯಲ್ಲಿ ಐದು ವರ್ಷಗಳಲ್ಲಿ 86 ಮಂದಿ ಹಾವು ಕಡಿತದಿಂದ ಮೃತಪಟ್ಟಿದ್ದಾರೆ. ಕಾಡು ಮೃಗಗಳ ಹಾವಳಿಯಿಂದ 11 ಮಂದಿ ಮೃತಪಟ್ಟಿದ್ದಾರೆ. ಉಳಿದ ಜಿಲ್ಲೆಗಳಲ್ಲಿ ಹಾವು ಕಡಿತದಿಂದ ಮೃತಪಟ್ಟವರ ಸಂಖ್ಯೆ ಹೀಗಿದೆ. ತಿರುವನಂತಪುರ(Trivandrum)ದಲ್ಲಿ 23 ಮಂದಿ ಹಾವು ಕಡಿತದಿಂದ ಮೃತಪಟ್ಟಿದ್ದು, 8 ಮಂದಿ ಕಾಡು ಮೃಗಗಳ ಹಾವಳಿಗೊಳಗಾಗಿದ್ದಾರೆ. ಕೊಲ್ಲಂ(Kollam)ನಲ್ಲಿ 22 ಮಂದಿ ಹಾವು ಕಡಿತಕ್ಕೊಳಗಾಗಿ ಮೃತಪಟ್ಟಿದ್ದು, 4 ಮಂದಿ ಕಾಡು ಮೃಗಗಳಿಗೆ ಬಲಿಯಾಗಿದ್ದಾರೆ.

Snake bite murder case: ಪತ್ನಿಗೆ ಹಾವು ಕಚ್ಚಿಸಿ ಕೊಂದವನಿಗೆ ಡಬಲ್ ಜೀವಾವಧಿ ಶಿಕ್ಷೆ

ಕೇರಳದಲ್ಲಿ ಅರಣ್ಯದಲ್ಲಿ ಕಾಡು ಮೃಗಗಳ ಆಕ್ರಮಣದಿಂದ ಕೊಲೆಯಾದವರ ಸಂಬಂಧಿಕರಿಗೆ ಹತ್ತು ಲಕ್ಷ ರೂ. ಹಾಗೂ ಹಾವು ಕಡಿತಕ್ಕೊಳಗಾಗಿ ಮೃತಪಟ್ಟವರ ಆಪ್ತರಿಗೆ ಎರಡು ಲಕ್ಷ ರೂ. ನಷ್ಟಪರಿಹಾರ ನೀಡಲಾಗುತ್ತದೆ. ಅರಣ್ಯದ ಹೊರಗೆ ಹಾವು ಕಡಿತಕ್ಕೊಳಗಾಗಿ ಮೃತಪಟ್ಟರೆ ಒಂದು ಲಕ್ಷ ರೂ. ಲಭಿಸುತ್ತದೆ. ಹಾವು ಕಡಿತಕ್ಕೊಳಗಾಗಿ ಗಾಯಗೊಳ್ಳುವವರಿಗೆ ವೈದ್ಯಾಧಿಕಾರಿಯ ಪ್ರಮಾಣ ಪತ್ರದ ಆಧಾರದಲ್ಲಿ ಹಣ ನೀಡಲಾಗುತ್ತದೆ.

Follow Us:
Download App:
  • android
  • ios