ದುಬೈ(ನ.01): ಮುಸ್ಲಿಮರ ಪವಿತ್ರ ಸ್ಥಳವಾದ ಸೌದಿ ಅರೇಬಿಯಾದ ಮಕ್ಕಾದಲ್ಲಿರುವ ಮಸ್ಜಿದುಲ್‌ ಹರಂ ಮಸೀದಿಯ ಬಾಗಿಲಿಗೆ ಅರಬ್‌ ವ್ಯಕ್ತಿಯೊಬ್ಬ ಕಾರಿನಿಂದ ಗುದ್ದಿದ ಘಟನೆ ಶುಕ್ರವಾರ ರಾತ್ರಿ ನಡೆದಿದೆ.

ರಾತ್ರಿ 10.30ರ ಸುಮಾರಿಗೆ ಘಟನೆ ನಡೆದಿದ್ದು, ಬ್ಯಾರಿಕೇಡ್‌ಗಳನ್ನು ಮುರಿದು ದಕ್ಷಿಣ ಭಾಗದಲ್ಲಿರುವ ಬಾಗಿಲಿಗೆ ಢಿಕ್ಕಿ ಹೊಡೆದಿದ್ದಾನೆ. ತಕ್ಷಣವೇ ಧಾವಿಸಿ ಬಂದ ಸ್ಥಳದಲ್ಲಿದ್ದ ಪೊಲೀಸರು ಆತನನ್ನು ಬಂಧಿಸಿದ್ದು, ಮಾನಸಿಕವಾಗಿ ಅಸ್ವಸ್ಥನಾಗಿದ್ದ ಎಂದು ಅಲ್ಲಿನ ಮಾಧ್ಯಮವೊಂದು ವರದಿ ಮಾಡಿದೆ. ನಜ್ಜುಗುಜ್ಜಾದ ಕಾರನ್ನು ಅಲ್ಲಿಂದ ತೆರವುಗೊಳಿಸಲಾಗಿದೆ.

ಕೊರೋನಾ ವೈರಸ್‌ ಕಾಟದಿಂದ ಮುಚ್ಚಲಾಗಿದ್ದ ಮಸೀದಿಯನ್ನು ಇತ್ತೀಚೆಗಷ್ಟೇ ಹಜ್‌ ಪ್ರಯುಕ್ತ ಮತ್ತೆ ತೆರೆಯಲಾಗಿತ್ತು,