Asianet Suvarna News Asianet Suvarna News

ಹೊಸ ವರ್ಷ ಆಚರಿಸಲು ರಷ್ಯಾಗೆ ಹೋದ 7 ಭಾರತೀಯರನ್ನು ಸೇನೆಗೆ ಸೇರಿಸಿ ಯುದ್ಧಕ್ಕೆ ಕಳಿಸಿದ ರಷ್ಯಾ

ರಷ್ಯಾ ನೋಡಲು ಭಾರತದ ಪಂಜಾಬ್‌, ಹರ್ಯಾಣದಿಂದ ತೆರಳಿದ್ದ  7 ಜನ ಭಾರತೀಯ ಯುವಕರನ್ನು ರಷ್ಯಾ ಸೇನೆಯೂ ಉಕ್ರೇನ್ ವಿರುದ್ಧ ಹೋರಾಡುವುದಕ್ಕಾಗಿ ಉಪಾಯವಾಗಿ ರಷ್ಯಾ ಸೇನೆಗೆ ಸೇರಿಸಿಕೊಂಡಿರುವ ಆರೋಪ ಕೇಳಿ ಬಂದಿದೆ. 

Russian tricklfuly joins 7 indian tourist to its army and sent them to warfield against Ukraine akb
Author
First Published Mar 6, 2024, 12:25 PM IST

ಮಾಸ್ಕೋ: ರಷ್ಯಾ ನೋಡಲು ಭಾರತದ ಪಂಜಾಬ್‌, ಹರ್ಯಾಣದಿಂದ ತೆರಳಿದ್ದ  7 ಜನ ಭಾರತೀಯ ಯುವಕರನ್ನು ರಷ್ಯಾ ಸೇನೆಯೂ ಉಕ್ರೇನ್ ವಿರುದ್ಧ ಹೋರಾಡುವುದಕ್ಕಾಗಿ ಉಪಾಯವಾಗಿ ರಷ್ಯಾ ಸೇನೆಗೆ ಸೇರಿಸಿಕೊಂಡಿರುವ ಆರೋಪ ಕೇಳಿ ಬಂದಿದೆ. ರಷ್ಯಾಕ್ಕೆ ಪ್ರವಾಸಕ್ಕೆ ತೆರಳಿ ಒತ್ತಾಯಪೂರ್ವಕವಾಗಿ ರಷ್ಯಾ ಸೇನೆ ಸೇರಲ್ಪಟ್ಟ ಭಾರತೀಯ ಯುವಕರ ಕುಟುಂಬದವರು ಈಗ ಭಾರತ ಸರ್ಕಾರಕ್ಕೆ ಸಹಾಯಕ್ಕಾಗಿ ಮೊರೆ ಇಟ್ಟಿದ್ದು, ತಮ್ಮವರನ್ನು ರಷ್ಯಾ ಸೇನೆಯ ಕಪಿಮುಷ್ಠಿಯಿಂದ ಬಿಡಿಸಿಕೊಡುವಂತೆ ಮನವಿ ಮಾಡಿದ್ದಾರೆ.

ಮೋಸದಿಂದ ರಷ್ಯಾ ಸೇನೆಗೆ ನಮ್ಮನ್ನು ಸೇರಿಸಿದರು ಹಾಗೂ ಉಕ್ರೇನ್ ವಿರುದ್ಧ ಹೋರಾಡುವುದಕ್ಕೆ ಕಳುಹಿಸಿದರು ಎಂದು ರಷ್ಯಾ ಕಪಿಮುಷ್ಠಿಯಲ್ಲಿ ಬಂಧಿಯಾಗಿರುವ ಕೆಲ ಭಾರತೀಯರು ದೂರಿದ್ದಾರೆ. ಈ ಹಿನ್ನೆಲೆಯಲ್ಲಿ ನಮ್ಮನ್ನು ಇಲ್ಲಿಂದ ಬಿಡುಗಡೆ ಮಾಡಿ ಎಂದು ಪಂಜಾಬ್ ಮತ್ತು ಹರಿಯಾಣದಿಂದ ರಷ್ಯಾಗೆ  ಬಂದ ಏಳು ಯುವಕರ ಗುಂಪು ಸಹಾಯಕ್ಕಾಗಿ ಭಾರತೀಯ ರಾಜತಾಂತ್ರಿಕ ಅಧಿಕಾರಿಗಳಿಗೆ ತುರ್ತು ಮನವಿ ಮಾಡಿದೆ. ತಮ್ಮನ್ನು ರಷ್ಯಾದಲ್ಲಿ ಮಿಲಿಟರಿ ಸೇವೆಗೆ ಕಳುಹಿಸಿ ವಂಚಿಸಲಾಗಿದೆ ಮತ್ತು ಉಕ್ರೇನ್‌ ಯುದ್ಧದಲ್ಲಿ ಭಾಗವಹಿಸಲು ನಿಯೋಜಿಸಲಾಗಿದೆ ಎಂದು ಅವರು ಆರೋಪಿಸಿದ್ದಾರೆ.

ಹೀಗೆ ರಷ್ಯಾದಲ್ಲಿ ಹೋಗಿ ಸಂಕಷ್ಟಕ್ಕೆ ಸಿಲುಕಿರುವ 7 ಜನ ಭಾರತೀಯರನ್ನು ಗಗನ್‌ದೀಪ್ ಸಿಂಗ್ (24), ಲವ್‌ಪ್ರೀತ್ ಸಿಂಗ್ (24), ನರೈನ್ ಸಿಂಗ್ (22), ಗುರುಪ್ರೀತ್ ಸಿಂಗ್ (21), ಗುರುಪ್ರೀತ್ ಸಿಂಗ್ (23), ಹರ್ಷ್ ಕುಮಾರ್ (20) ಮತ್ತು ಅಭಿಷೇಕ್ ಕುಮಾರ್ (21) ಎಂದು ಗುರುತಿಸಲಾಗಿದೆ. ಇವರಲ್ಲಿ ಐವರು ಪಂಜಾಬ್‌ನಿಂದ ಬಂದಿದ್ದರೆ, ಇನ್ನಿಬ್ಬರು ಹರಿಯಾಣದವರು ಎಂದು ದಿ ಹಿಂದೂ ಅಂಗ್ಲ ಮಾಧ್ಯಮ ವರದಿ ಮಾಡಿದೆ.

ಜೈಪುರ ಕೋಟೆ ಸಫಾರಿಗೆ ಹೊರಟ ರಷ್ಯಾ ಪ್ರವಾಸಿಗರನ್ನು ಎತ್ತೆಸೆದ ಆನೆ, ಇಬ್ಬರಿಗೆ ಗಾಯ!

ಟ್ಬಿಟ್ಟರ್‌ನಲ್ಲಿ ಈ ವಿಚಾರಕ್ಕೆ ಸಂಬಂಧಿಸಿದಂತೆ ವೈರಲ್ ಆಗಿರುವ 1 ನಿಮಿಷ 45 ಸೆಕೆಂಡ್‌ಗಳ ವೀಡಿಯೋದಲ್ಲಿ 7 ಜನ ರಷ್ಯಾ ಮಿಲಿಟರಿಯ ಚಳಿಗಾಲದ ಜಾಕೆಟ್ ಹಾಗೂ ಮಿಲಿಟರಿ ಕ್ಯಾಪ್ ಧರಿಸಿದ್ದಾರೆ. ಅವರೆಲ್ಲರೂ ಮಂದವಾಗಿ ಬೆಳಕಿರುವ ಕಿಟಕಿ ಮುಚ್ಚಿರುವ ಕೋಣೆಯಲ್ಲಿ ಇದ್ದು,  ಅದರಲ್ಲಿ ಆರು ಜನ ಒಂದು ಮೂಲೆಯಲ್ಲಿ ಇದ್ದರೆ  7ನೇ ವ್ಯಕ್ತಿ ಹರ್ಯಾಣದ ಕರ್ನಾಲ್ ಮೂಲದ 19 ವರ್ಷದ ಹರ್ಷ ಎಂಬುವವರು ಈ ವೀಡಿಯೋ ಮಾಡಿದ್ದಾರೆ. ಅಲ್ಲದೇ ತಮಗೆ ನೆರವಾಗುವಂತೆ ಮನವಿ ಮಾಡಿದ್ದಾರೆ.

ಈ 7 ಜನ ಡಿಸೆಂಬರ್ 27 ರಂದು ಹೊಸವರ್ಷವನ್ನು ಆಚರಿಸುವ ಸಲುವಾಗಿ ರಷ್ಯಾಗೆ ತೆರಳಿದ್ದು, ಅವರ ಬಳಿ 90 ದಿನಗಳಿಗೆ ಮಾನ್ಯತೆ ಇದ್ದ ರಷ್ಯಾದ ಪ್ರವಾಸಿ ವೀಸಾ ಇತ್ತು. ಇದಾದ ನಂತರ ಅವರು ಪಕ್ಕದ ಬೆಲಾರಸ್‌ಗೆ ತೆರಳಿದ್ದಾರೆ. ಒಬ್ಬರು ಏಜೆಂಟ್ ಅವರನ್ನು ಬೆಲಾರಸ್‌ಗೆ ಕರೆದೊಯ್ದಿದ್ದಾರೆ. ಅಲ್ಲಿಗೆ ಹೋಗಲು ನಮಗೆ ವೀಸಾ ಬೇಕು ಎಂಬುದು ಕೂಡ ಗೊತ್ತಿರಲಿಲ್ಲ,  ಆದರೆ ನಮ್ಮನ್ನು ಅಲ್ಲಿಗೆ ಕರೆದೊಯ್ದ ಏಜೆಂಟ್ ನಮ್ಮ ಬಳಿ ಹೆಚ್ಚಿನ ಹಣ ಕೇಳಿದ ಬಳಿಕ ನಮ್ಮನ್ನು ಮಧ್ಯದಲ್ಲೇ ಕೈ ಬಿಟ್ಟು ಹೋದ, ಈ ವೇಳೆ ಪೊಲೀಸರಿಗೆ ನಾವು ಸಿಕ್ಕಿದ್ದು, ಅವರು ನಮ್ಮನ್ನು ರಷ್ಯಾದ ಆಡಳಿತಾಧಿಕಾರಿಗಳಿಗೆ ಒಪ್ಪಿಸಿದರು. ಅಲ್ಲಿ ಅವರು ನಮ್ಮನ್ನು ಹಲವು ಡಾಕ್ಯುಮೆಂಟ್‌ಗಳಿಗೆ ಸಹಿ ಹಾಕುವಂತೆ ಮಾಡಿದರು. ಈಗ ಅವರು ನಮ್ಮನ್ನು ಉಕ್ರೇನ್ ವಿರುದ್ಧದ ಯುದ್ಧದಲ್ಲಿ ಭಾಗಿಯಾಗುವಂತೆ ಒತ್ತಡ ಹೇರುತ್ತಿದ್ದಾರೆ ಎಂದು ಹರ್ಷ ಅವರು ಈ ವೀಡಿಯೋದಲ್ಲಿ ಹೇಳಿದ್ದಾರೆ.  

ರಷ್ಯಾದಲ್ಲಿ ಸಿಲುಕಿದ ಕಲಬುರಗಿ ಯುವಕರಿಗೆ ಇನ್ನೂ ಇಲ್ಲ ಬಿಡುಗಡೆಯ ಭಾಗ್ಯ..!
 

Follow Us:
Download App:
  • android
  • ios