ಹಲವು ಭಾರತೀಯ ಯುವಕರು ಬಿಡುಗಡೆ ಕಂಡರೂ ಕಲಬುರಗಿ ಯುವಕರಿಗೆ ಮಾತ್ರ ಇನ್ನೂ ಬಿಡುಗಡೆಯ ಭಾಗ್ಯ ಸಿಕ್ಕಿಲ್ಲ.
ಕಲಬುರಗಿ(ಫೆ.27): ರಷ್ಯಾದಲ್ಲಿ ಸಿಲುಕಿರುವ ಮೂವರು ಕಲಬುರಗಿ ಯುವಕರಿಗೆ ಇನ್ನೂ ಬಿಡುಗಡೆಯ ಭಾಗ್ಯ ಸಿಕ್ಕಿಲ್ಲ. ಹೌದು, ಹಲವು ಭಾರತೀಯ ಯುವಕರು ಬಿಡುಗಡೆ ಕಂಡರೂ ಕಲಬುರಗಿ ಯುವಕರಿಗೆ ಮಾತ್ರ ಇನ್ನೂ ಬಿಡುಗಡೆಯ ಭಾಗ್ಯ ಸಿಕ್ಕಿಲ್ಲ.
ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ
ರಷ್ಯಾ ಸೇನೆಯ ಸಹಾಯಕರಾಗಿ ಕೆಲಸ ಮಾಡುತ್ತಿರುವ ಭಾರತೀಯ ಯುವಕರಿಗೆ ಯುದ್ಧದಲ್ಲಿ ತೊಡಗಿಸಿಕೊಳ್ಳುತ್ತಿರುವ ಬಗ್ಗೆ ಆರೋಪಿಸಲಾಗಿದೆ. ಈ ಹಿನ್ನಲೆಯಲ್ಲಿ ಭಾರತ ವಿದೇಶಾಂಗ ಇಲಾಖೆ ರಷ್ಯಾ ಜೊತೆ ಸಂಪರ್ಕಿಸಿದ ನಂತರ ಹಲವು ಯುವಕರನ್ನ ಬಿಡುಗಡೆ ಮಾಡಲಾಗಿದೆ.
ಮೋಸದ ಜಾಲಕ್ಕೆ ಸಿಲುಕಿ ರಷ್ಯಾ ಸೇನೆ ಸೇರಿದ್ದ ಹಲವು ಭಾರತೀಯರ ಬಿಡುಗಡೆ: ಕೇಂದ್ರ
ಹಲವು ಭಾರತೀಯ ಯುವಕರ ಬಿಡುಗಡೆಯಾಗಿದೆ ಎಂದು ವಿದೇಶಾಂಗ ಇಲಾಖೆ ತಿಳಿಸಿತ್ತು. ಆದ್ರೆ ಕಲಬುರಗಿಯ ಮೂವರು ಯುವಕರಿಗೆ ಸಿಕ್ಕಿಲ್ಲ ಇನ್ನೂ ಬಿಡುಗಡೆಯ ಭಾಗ್ಯ. ಬಿಡುಗಡೆಗೆ ಸಂಬಂಧಿಸಿದಂತೆ ಎರಡು ದಿನಗಳಿಂದ ಪ್ರಕ್ರಿಯೆಗಳು ನಡೆಯುತ್ತಿವೆ. ನಾಳೆಯೊಳಗೆ ನಮ್ಮ ಮಕ್ಕಳ ಬಿಡುಗಡೆಯಾಗುವ ಸಾಧ್ಯತೆ ಇದೆ ಎಂದು ಕಲಬುರಗಿ ಯುವಕನ ತಂದೆ ನವಾಜ್ ಅಲಿ ತಿಳಿಸಿದ್ದಾರೆ.
