- 8 ವರ್ಷದ ಮಗು ರಸ್ತೆ ಮೇಲೆ ಸತ್ತಿದೆ- ರಷ್ಯಾ ವಿಶೇಷ ಮಿಲಿಟರಿ ಕಾರಾರಯಚರಣೆ ಹೆಸರಲ್ಲಿ ಜನರ ಕೊಲೆ ಮಾಡುತ್ತಿದೆ- ನೋ ಫ್ಲೈ ಜೋನ್ ಎಂದು ಘೋಷಿಸಿ, ನಾವು ರಷ್ಯಾ ಎದುರಿಸುತ್ತೇವೆ- ರಷ್ಯಾ ದಾಳಿ ವಿರುದ್ಧ ಭಾವುಕ ಪತ್ರ
ಕೀವ್ (ಮಾ.10): ಉಕ್ರೇನ್ (Ukraine) ಮೇಲೆ ರಷ್ಯಾ ಆಕ್ರಮಣ ಮಾಡಿ 14 ದಿನಗಳ ನಂತರ ಉಕ್ರೇನ್ ಅಧ್ಯಕ್ಷ ವೊಲೊದಿಮಿರ್ ಜೆಲೆನ್‌ಸ್ಕಿ (Volodymyr Zelensky) ಅವರ ಪತ್ರಿ ಒಲೆನಾ ಜೆಲೆನ್‌ಸ್ಕಾ (Olena zelenska) ಮೊದಲ ಬಾರಿ ರಷ್ಯಾ (Russia) ದಾಳಿಯನ್ನು ವಿರೋಧಿಸಿ ಬಹಿರಂಗವಾಗಿ ಭಾವುಕ ಪತ್ರ ಬರೆದಿದ್ದಾರೆ. ರಷ್ಯಾ ವಿಶೇಷ ಮಿಲಿಟರಿ ಕಾರ್ಯಾಚರಣೆ (special military operations) ಹೆಸರಿನಲ್ಲಿ ಉಕ್ರೇನ್ ಮೇಲೆ ಆಕ್ರಮಣ ಮಾಡಿದೆ. ಆದರೆ ಉಕ್ರೇನ್ ನಾಗರಿಕರನ್ನು ಕೊಲೆ ಮಾಡುತ್ತಿದೆ. ರಷ್ಯಾ ನಡೆಸುತ್ತಿರುವ ದಾಳಿಯನ್ನು ನಂಬಲಾಗದಂತಾಗಿದೆ ಎಂದು ಅವರು ಹೇಳಿದ್ದಾರೆ.
‘ಫೆ.24ರಂದು ರಷ್ಯಾ ದಾಳಿ ಆಕ್ರಮಣ ಮಾಡಿರುವ ವಿಷಯ ನಮಗೆ ಗೊತ್ತಾಯಿತು. ರಷ್ಯಾದ ಟ್ಯಾಂಕರ್‌ಗಳು ಉಕ್ರೇನ್‌ನ ಗಡಿಯನ್ನು ದಾಟಿದವು, ವಿಮಾನಗಳು ನಮ್ಮ ವಾಯುಸೀಮೆಯಲ್ಲಿ ಹಾರಾಡಿದವು, ಮಿಸೈಲ್‌ಗಳು ನಮ್ಮ ನಗರಗಳ ಸುತ್ತ ಸಿಡಿದವು. ಇದೆಲ್ಲವನ್ನು ರಷ್ಯಾ ಮಾಡಿದ್ದು ವಿಶೇಷ ಮಿಲಿಟರಿ ಕಾರ್ಯಾಚರಣೆ ಎಂಬ ಹೆಸರಿನಲ್ಲಿ. ಆದರೆ ಇದನ್ನು ವಿಶೇಷ ಕಾರ್ಯಾಚರಣೆ ಎಂದು ಕರೆಯಲು ಸಾಧ್ಯವೇ? ಇದು ಉಕ್ರೇನ್ ನಾಗರಿಕ ಮೇಲೆ ರಷ್ಯಾ ನಡೆಸಿದ ಕೊಲೆ’ ಎಂದು ಅವರು ಹೇಳಿದ್ದಾರೆ.
ಅಲೈಸ್ ಎಂಬ 8 ವರ್ಷದ ಮಗು ರಷ್ಯಾ ದಾಳಿಗೆ ಸಿಲುಕಿ ರಸ್ತೆಯಲ್ಲಿ ಮೃತಪಟ್ಟಿದೆ. 14 ವರ್ಷದ ಅರ್ಸೆನೀಯ್ ಭಗ್ನಾವಶೇಷಗಳ ಅಡಿ ಸಿಲುಕಿದ್ದರೂ, ರಕ್ಷಿಸಲು ಸಾಧ್ಯವಾಗದೇ ಮೃತಪಟ್ಟಿದ್ದಾರೆ. ಆದರೆ ರಷ್ಯಾ ನಾಗರಿಕರ ಮೇಲೆ ದಾಳಿ ಮಾಡುತ್ತಿಲ್ಲ ಎಂದು ಹೇಳಿಕೊಳ್ಳುತ್ತಿದೆ. ಆದರೆ ರಷ್ಯಾ ದಾಳಿಗೆ ಮೊದಲು ಸಾವನ್ನಪ್ಪುತ್ತಿರುವವರು ನಮ್ಮ ಮಕ್ಕಳು ಎಂದು ಹೇಳಿದ್ದಾರೆ.
ನೋ ಫ್ಲೈಜೋನ್ ಎಂದು ಘೋಷಿಸಿ: ಉಕ್ರೇನ್‌ನ್ನು ನೋ ಫ್ಲೈ ಜೋನ್ ( No Fly Zone ) ಎಂದು ಘೋಷಿಸಿ ಎಂದು ನ್ಯಾಟೋ (NATO) ಒಕ್ಕೂಟಕ್ಕೆ ಮನವಿ ಮಾಡಿದ್ದಾರೆ. ಒಮ್ಮೆ ನೋ ಫ್ಲೈ ಜೋನ್ ಎಂದು ಘೊಷಣೆಯಾದರೆ ರಷ್ಯಾವನ್ನು ನಾವು ಎದುರಿಸುತ್ತೇವೆ. ಪುಟಿನ್‌ನನ್ನು ( Vladimir Putin ) ತಡೆಯದಿದ್ದರೆ ಈ ಯುದ್ಧ ಅಣ್ವಸ್ತ್ರ ಯದ್ಧವಾಗಬಹುದು. ಈಗಾಗಲೇ ರಷ್ಯಾ ದಾಳಿಯಿಂದ ನಮ್ಮ ರಸ್ತೆಗಳು ನಿರ್ಗತಿಕರಿಂದ ತುಂಬಿದೆ ಎಂದು ಅವರು ಹೇಳಿದ್ದಾರೆ.
500 ಭಾರತೀಯರು ಉಕ್ರೇನ್ ಸೇನೆಗೆ ಸೇರ್ಪಡೆಗೆ ಸಜ್ಜು?
ಕೀವ್: ರಷ್ಯಾ ದಾಳಿಗೆ ಪ್ರತಿದಾಳಿ ನಡೆಸಲು ರಚನೆ ಮಾಡಿರುವ ಉಕ್ರೇನ್‌ನ ಅಂತಾರಾಷ್ಟ್ರೀಯ ಸೇನೆಗೆ ( Ukraine Internation Army ) 500ಕ್ಕೂ ಹೆಚ್ಚು ಭಾರತೀಯರು ಸೇರ್ಪಡೆಯಾಗುವ ಸಾಧ್ಯತೆ ಇದೆ. ಇಷ್ಟೊಂದು ಸಂಖ್ಯೆಯ ಭಾರತೀಯರು ಸೇನೆ ಸೇರಲು ಅರ್ಜಿ ಸಲ್ಲಿಸಿದ್ದಾರೆ ಎಂದು ಮಾಧ್ಯಮ ವರದಿಗಳು ಹೇಳಿವೆ.
ಮಿಗ್ ವಿಮಾನವನ್ನು ಉಕ್ರೇನ್‌ಗೆ ಕಳಿಸಲು ಒಪ್ಪಿಗೆ, ಪೊಲೇಂಡ್ ಶರತ್ತಿಗೆ ಒಪ್ಪದ ಅಮೆರಿಕಾ
ಯುದ್ಧ ಆರಂಭವಾದ ನಂತರ ಸೈನ್ಯಕ್ಕೆ ಸೇರಲು ಸಾಮಾನ್ಯ ನಾಗರಿಕರಿಗೂ ಅಧ್ಯಕ್ಷ ಜೆಲೆನ್‌ಸ್ಕಿ ಅವಕಾಶ ನೀಡಿದ್ದರು. ಈ ಹಿನ್ನೆಲೆಯಲ್ಲಿ ಸಾವಿರಾರು ಉಕ್ರೇನ್ ಮತ್ತು ಇತರ ದೇಶಗಳ ನಾಗರಿಕರು ಸೇನೆಗೆ ಸೇರ್ಪಡೆಯಾಗಿದ್ದಾರೆ. ತಮಿಳುನಾಡಿನ ಸೈನಿಕೇಶ್ ರವಿಚಂದ್ರನ್ ಎಂಬ ಯುವಕ ಈಗಾಗಲೇ ಉಕ್ರೇನ್ ಸೇನೆ ಸೇರಿದ್ದಾರೆ.
ರಷ್ಯಾದಲ್ಲಿ ಬರ್ಗರ್, ಕೆಎಫ್‌ಸಿ ಆಹಾರ ಸಿಗ್ತಾ ಇಲ್ಲ, ಸೋಷಿಯಲ್ ಮೀಡಿಯಾ ಸ್ಥಗಿತ, ಒಟಿಟಿ ಬಂದ್!
ಇಷ್ಟಲ್ಲದೇ 500ಕ್ಕೂ ಹೆಚ್ಚು ಭಾರತೀಯರು ಸೇನೆಗೆ ಸೇರಲು ಅರ್ಜಿ ಸಲ್ಲಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ. ಸ್ವಯಂ ಸೇವಕರು ಸೇನೆ ಸೇರಲು ಬಯಸಿದರೆ ಅವರಿಗಾಗಿಯೇ ಉಕ್ರೇನ್ ಆಡಳಿತ ವಿಶೇಷ ವೆಬ್‌ಸೈಟ್ ರೂಪಿಸಿದೆ. ಇಲ್ಲಿ ಮಾಹಿತಿಗಳನ್ನು ಭರ್ತಿ ಮಾಡುವ ಮೂಲಕ ಸೈನ್ಯಕ್ಕೆ ಸೇರ್ಪಡೆಯಾಗಬಹುದಾಗಿದೆ ಇಲ್ಲಿಯವರೆಗೆ ಸೇನೆಗೆ ಸೇರಲು 3 ಸಾವಿರ ಅಮೆರಿಕನ್ನರು ಅರ್ಜಿ ಸಲ್ಲಿಸಿದ್ದಾರೆ. ಸಾವಿರಾರು ವಿದೇಶಿಗರು ಉಕ್ರೇನ್ ಪರವಾಗಿ ಹೋರಾಟ ಮಾಡುತ್ತಿದ್ದಾರೆ ಎಂದು ವರದಿಯಾಗಿದೆ.
