*ಮೆಣಸಿನ ಪುಡಿ ಎರಚಿದರು, ಥಳಿಸಿದರು: ವಿದ್ಯಾರ್ಥಿಗಳ ಆರೋಪ*ಮಾಹಿತಿ ನೀಡದೇ ಗಡಿ ದಾಟಲು ಹೋಗಬೇಡಿ: ವಿದ್ಯಾರ್ಥಿಗಳಿಗೆ ಭಾರತ ಸೂಚನೆ

ಕೀವ್‌ (ಮಾ. 01) : ಯುದ್ಧಪೀಡಿತ ಉಕ್ರೇನ್‌ನಿಂದ ಪಾರಾಗಲು ಗಡಿಗೆ ತೆರಳುತ್ತಿದ್ದಾಗ ಪೊಲೀಸರು ತಮ್ಮನ್ನು ತಡೆದು ಹಲ್ಲೆ ನಡೆಸಿದ್ದಾರೆ ಎಂದು ಹಲವು ಭಾರತೀಯ ವಿದ್ಯಾರ್ಥಿಗಳು ಆರೋಪಿಸಿದ್ದಾರೆ. ರಷ್ಯಾ ಅಣುಬಾಂಬ್‌ನ ಬೆದರಿಕೆ ಒಡ್ಡಿದ ನಂತರ ಹೆಚ್ಚಿನ ಸಂಖ್ಯೆಯ ವಿದ್ಯಾರ್ಥಿಗಳು ಕೀವ್‌ ಮತ್ತು ಖಾರ್ಕೀವ್‌ ನಗರಗಳಿಂದ ಪೋಲಂಡ್‌ ಗಡಿಯತ್ತ ತೆರಳುತ್ತಿದ್ದಾರೆ. ವೀಡಿಯೋವೊಂದರಲ್ಲಿ ಉಕ್ರೇನಿನ ಪೊಲೀಸರು ಮಹಿಳೆಯೊಬ್ಬಳನ್ನು ಥಳಿಸುತ್ತಿರುವುದು ದಾಖಲಾಗಿದೆ. ಈ ಸಮಯದಲ್ಲಿ ಗುಂಡಿನ ಶಬ್ದಗಳು ಮತ್ತು ಕಿರುಚಾಡುತ್ತಿರುವುದು ಕಂಡುಬಂದಿದೆ. ಅವರ ಸೂಟ್‌ಕೇಸ್‌ಗಳನ್ನು ರಸ್ತೆಯ ಮೇಲೆ ಬಿಸಾಡಲಾಗಿದೆ. ಮತ್ತೊಂದು ವಿಡಿಯೋದಲ್ಲಿ ಗಡಿಯತ್ತ ತೆರಳುತ್ತಿರುವ ವಿದ್ಯಾರ್ಥಿಯನ್ನು ಥಳಿಸುತ್ತಿರುವುದು ದಾಖಲಾಗಿದೆ.

‘ಪೊಲೀಸರು ನಮ್ಮ ಮೇಲೆ ಮೆಣಸಿನ ಪುಡಿ ಎರಚಿದರು. ಹಲವು ಬಾರಿ ಪೊಲೀಸರು ಹೀಗೆ ಮಾಡಿದ್ದರಿಂದ ಬಹಳಷ್ಟುಜನರು ಮೂರ್ಛೆ ಹೋದರು. ಸಹಾಯಕ್ಕಾಗಿ ಸ್ಲೊವೋಕಿಯಾದ ರಾಯಭಾರ ಕಚೇರಿಯನ್ನುಸಂಪರ್ಕಿಸಿದ್ದೇವೆ. ಉಕ್ರೇನ್‌ ರಾಯಭಾರ ಕಚೇರಿ ಸಂಪರ್ಕಕ್ಕೆ ಸಿಗುತ್ತಿಲ್ಲ. ಯಾವುದೇ ಸಹಾಯವಾಣಿಗಳು ಕೆಲಸ ಮಾಡುತ್ತಿಲ್ಲ’ ಎಂದು ಉಕ್ರೇನ್‌ನಲ್ಲಿ ಸಿಲುಕಿಕೊಂಡಿರುವ ವಿದ್ಯಾರ್ಥಿನಿ ಮಾಳವಿಕಾ ಹೇಳಿದ್ದಾರೆ.

ಇದನ್ನೂ ಓದಿ: Russia Ukraine Crisis: ಮತ್ತೆ 489 ಭಾರತೀಯರು ಉಕ್ರೇನ್‌ನಿಂದ ತವರಿಗೆ: ವಾಪಸಾದವರಿಗೆ ಕೋವಿಡ್‌ ನಿರ್ಬಂಧ ಸಡಿಲ!

‘ಇಬ್ಬರು ಪೊಲೀಸರು ನಮ್ಮ ಹಾಸ್ಟೆಲ್‌ನ ಗೇಟು ಮುರಿದು ಒಳ ಬಂದು ನಮ್ಮ ಸ್ಥಳವನ್ನು ಗುರುತು ಮಾಡಿಕೊಂಡು ಹೋದರು. ಅವರು ಉಕ್ರೇನ್‌ ಅಥವಾ ರಷ್ಯಾ ಸೈನಿಕರೇ ಎಂಬುದರ ಬಗ್ಗೆ ತಿಳಿದಿಲ್ಲ. ಸುಮಾರು 200 ವಿದ್ಯಾರ್ಥಿಗಳು ಈ ಹಾಸ್ಟೆಲ್‌ನಲ್ಲಿ ಇದ್ದೇವೆ. ನಮಗೆ ಕನಿಷ್ಠ ರಕ್ಷಣೆಯೂ ಇಲ್ಲ’ ಎಂದು ವಿದ್ಯಾರ್ಥಿಯೊಬ್ಬರು ಹೇಳಿದ್ದಾರೆ.

Scroll to load tweet…

ಮಾಹಿತಿ ನೀಡದೇ ಗಡಿ ದಾಟಲು ಹೋಗಬೇಡಿ: ವಿದ್ಯಾರ್ಥಿಗಳಿಗೆ ಭಾರತ ಸೂಚನೆ: ಉಕ್ರೇನ್‌ ಗಡಿಯಲ್ಲಿ ಭಾರತೀಯರು ಹಾಗೂ ಉಕ್ರೇನಿ ಸೈನಿಕರ ನಡುವೆ ಜಟಾಪಟಿ ನಡೆಯುತ್ತಿದೆ ಎಂಬ ವರದಿಗಳ ಕಾರಣ, ಭಾರತ ಸರ್ಕಾರವು ಭಾರತೀಯ ಮೂಲದ ವಿದ್ಯಾರ್ಥಿಗಳಿಗೆ ಸೂಚನೆಯೊಂದನ್ನು ನೀಡಿದೆ. ವಿದೇಶಾಂಗ ಇಲಾಖೆ ಗಮನಕ್ಕೆ ತಾರದೇ ಯಾರೂ ಕೂಡ ನೇರವಾಗಿ, ಅನ್ಯದೇಶಗಳಿಗೆ ಸಾಗಲು ಉಕ್ರೇನ್‌ ಗಡಿಗೆ ಹೋಗಬಾರದು ಎಂದು ತಿಳಿಸಿದೆ.

ಈ ನಡುವೆ, ಯುದ್ಧಪೀಡಿತ ಉಕ್ರೇನಿನ ರಾಜಧಾನಿ ಕೀವ್‌ನಲ್ಲಿ ಕಫä್ರ್ಯ ಸಡಲಿಕೆ ಮಾಡಲಾಗಿದ್ದು, ಅಲ್ಲಿರುವ ಭಾರತೀಯರು ರೈಲಿನ ಮೂಲಕ ದೇಶದ ಪಶ್ಚಿಮ ಭಾಗಕ್ಕೆ ತಲುಪಬೇಕು ಎಂದು ಭಾರತೀಯ ರಾಯಭಾರ ಕಚೇರಿ ಸೂಚನೆ ನೀಡಿದೆ.

ಕೀವ್‌, ಖಾರ್ಕಿವ್‌, ಪೂರ್ವ ಉಕ್ರೇನಿನಲ್ಲಿ ಯುದ್ಧ ತೀವ್ರವಾದ ಹಿನ್ನೆಲೆಯಲ್ಲಿ ನಾಗರಿಕರ ಸಂಚಾರದ ಮೇಲೆ ಕರ್ಫ್ಯೂ ವಿಧಿಸಲಾಗಿತ್ತು. ಹೀಗಾಗಿ ಭಾರತೀಯರು ರೇಲ್ವೆ ಸ್ಟೇಶನ್‌ಗಳಿಗೆ ತೆರಳದಂತೆ ಕೀವ್‌ನಲ್ಲಿರುವ ರಾಯಭಾರ ಕಚೇರಿ ಸೂಚನೆ ನೀಡಿತ್ತು. ಈಗ ಪರಿಸ್ಥಿತಿ ನಿಯಂತ್ರಣಕ್ಕೆ ಬಂದಿದ್ದು, ಕೀವ್‌ನಲ್ಲಿ ವಾರಾಂತ್ಯದ ಕರ್ಫ್ಯೂವನ್ನು ತೆರವುಗೊಳಿಸಲಾಗಿದೆ.

ಇದನ್ನೂ ಓದಿ: Russia Ukraine Crisis: ವಿಶ್ವಸಂಸ್ಥೆಯಲ್ಲೂ ಸಮರ: ಅಣ್ವಸ್ತ್ರ ಸನ್ನದ್ಧತೆ ಆತಂಕಕಾರಿ ಬೆಳವಣಿಗೆ ಎಂದ ಯುಎನ್!‌

ಮಿತವಾದ ನಾಗರಿಕರ ಸಂಚಾರಕ್ಕೆ ಅನುಮತಿ ನೀಡಲಾಗಿದೆ. ಜನರ ಸ್ಥಳಾಂತರಕ್ಕಾಗಿಯೇ ಉಕ್ರೇನ್‌ ವಿಶೇಷ ತುರ್ತು ರೈಲುಗಳ ಸೇವೆ ಒದಗಿಸುತ್ತಿದೆ. ಹೀಗಾಗಿ ವಿದ್ಯಾರ್ಥಿಗಳು ಶೀಘ್ರವೇ ರೇಲ್ವೆ ಬಳಸಿ ಉಕ್ರೇನಿನ ಪಶ್ಚಿಮ ಭಾಗಗಳತ್ತ ತೆರಳಬೇಕು ಎಂದು ರಾಯಭಾರ ಕಚೇರಿ ಸೂಚಿಸಿದೆ.

ವೈಯಕ್ತಿಕ ಸಂಪರ್ಕ ಬಳಸಿ ಭಾರತೀಯರ ರಕ್ಷಣೆ: ಉಕ್ರೇನ್‌ ರಾಯಭಾರಿ: ಉಕ್ರೇನಿನಲ್ಲಿ ಭೀಕರ ಯುದ್ಧ ನಡೆಯುತ್ತಿದ್ದು ಪರಿಸ್ಥಿತಿಯು ಗಂಭೀರವಾಗಿದ್ದರೂ ಉಕ್ರೇನಿನ ಅಧಿಕಾರಿಗಳು ಭಾರತೀಯ ಪ್ರಜೆಗಳನ್ನು ಸ್ಥಳಾಂತರಿಸಲು ಸಹಾಯ ಮಾಡುತ್ತಿದ್ದಾರೆ ಎಂದು ಉಕ್ರೇನಿನ ರಾಯಭಾರಿ ಇಗೋರ್‌ ಪೊಲಿಖಾ ಸೋಮವಾರ ಹೇಳಿದ್ದಾರೆ.

‘ಉಕ್ರೇನಿನಲ್ಲಿ ಪರಿಸ್ಥಿತಿ ಗಂಭೀರವಾಗಿದೆ. ನಾವು ಆಕ್ರಮಣಕ್ಕೆ ಬಲಿಯಾಗಿದ್ದೇವೆ. ನಮ್ಮಲ್ಲಿ ಮಿತವಾದ ಸಂಪನ್ಮೂಲವಿದೆ. ಆದರೂ ನಾನೇ ಸ್ವತಃ ಉಕ್ರೇನಿನ ಭದ್ರತಾ ಪಡೆಗಳೊಂದಿಗೆ ಮಾತನಾಡಿ ಭಾರತೀಯರನ್ನು ಸುರಕ್ಷಿತವಾಗಿ ಸ್ಥಳಾಂತರಿಸಲು ಸಹಾಯ ಮಾಡುವಂತೆ ಕೋರಿದ್ದೇನೆ. ನನ್ನ ವೈಯಕ್ತಿಕ ಸಂಪರ್ಕವನ್ನು ಬಳಸಿಕೊಂಡು ಭಾರತೀಯರಿಗೆ ಸಹಾಯ ಒದಗಿಸಲು ಪ್ರಯತ್ನಿಸುತ್ತಿದ್ದೇನೆ’ ಎಂದಿದ್ದಾರೆ.