Asianet Suvarna News Asianet Suvarna News

Russia Ukraine Crisis: ಭಾರತೀಯರ ತೆರವಿಗೆ ವ್ಯವಸ್ಥೆ, ವಿಶ್ವಸಂಸ್ಥೆಯಲ್ಲೂ ರಷ್ಯಾ ಭರವಸೆ

- ಖಾರ್ಕೀವ್ ಹಾಗೂ ಸುಮಿ ನಗರದಲ್ಲಿ ಬಸ್ ಸಂಚಾರ ವ್ಯವಸ್ಥೆ

- ಉಕ್ರೇನ್‌ನಿಂದ 3700 ಭಾರತೀಯರ ಒತ್ತೆ: ಆರೋಪ

- ರಷ್ಯಾದ ಆರೋಪವನ್ನು ತಳ್ಳಿಹಾಕಿದ ಭಾರತ

russia informed un security council that it is ready to evacuate indians from ukraine san
Author
Bengaluru, First Published Mar 6, 2022, 4:15 AM IST | Last Updated Mar 6, 2022, 4:15 AM IST

ವಿಶ್ವಸಂಸ್ಥೆ (ಮಾ.6): ಯುದ್ಧ ಪೀಡಿತ ಉಕ್ರೇನ್‌ನಲ್ಲಿ (War torn Ukraine) ಸಿಲುಕಿರುವ ಭಾರತೀಯ ವಿದ್ಯಾರ್ಥಿಗಳು ಸೇರಿದಂತೆ ಎಲ್ಲಾ ದೇಶಗಳ ನಾಗರಿಕರ ಸ್ಥಳಾಂತರಕ್ಕೆ ಬಸ್ಸುಗಳ ವ್ಯವಸ್ಥೆ ಮಾಡುವುದಾಗಿ ರಷ್ಯಾ, ವಿಶ್ವಸಂಸ್ಥೆಯ ಭದ್ರತಾ ಮಂಡಳಿಗೂ (UN Security Council) ಶನಿವಾರ ಮಾಹಿತಿ ನೀಡಿದೆ. ಸದ್ಯ ಪೂರ್ವ ಉಕ್ರೇನ್‌ನ ಖಾರ್ಕಿವ್‌ (Kharkiev) ಮತ್ತು ಸುಮಿ (Sumy) ನಗರಗಳಲ್ಲಿ ಬಸ್‌ ಸಂಚಾರ ವ್ಯವಸ್ಥೆ ಮಾಡಿದ್ದಾಗಿ ರಷ್ಯಾ (Russia) ತಿಳಿಸಿದೆ.

ರಷ್ಯಾ, ಉಕ್ರೇನ್‌ನಲ್ಲಿರುವ ನ್ಯುಕ್ಲಿಯರ್‌ ಪವರ್‌ ಪ್ಲಾಂಟ್‌ ವಶಕ್ಕೆ ಪಡೆದ ಬೆನ್ನಲ್ಲೇ ಭದ್ರತಾ ಮಂಡಳಿಯ 15 ರಾಷ್ಟ್ರಗಳು ಶುಕ್ರವಾರ ತುರ್ತು ಸಭೆ ನಡೆಸಿದವು. ಈ ಸಭೆಯಲ್ಲಿ ರಷ್ಯಾದ ಶಾಶ್ವತ ಪ್ರತಿನಿಧಿ, ‘ವಿದೇಶಿಯರ ಶಾಂತಿಯುತ ಸ್ಥಳಾಂತರ ಪ್ರಕ್ರಿಯೆಗೆ ರಷ್ಯಾ ಮಿಲಿಟರಿ ಎಲ್ಲಾ ರೀತಿ ಪ್ರಯತ್ನ ಮಾಡುತ್ತಿದೆ. ಆದರೆ ಉಕ್ರೇನ್‌ 3700 ಭಾರತೀಯರು, 2700 ವಿಯೆಟ್ನಾಂ, ಚೀನಾದ 121 ಜನರು ಸೇರಿ ಅನೇಕರನ್ನು ಖಾರ್ಕಿವ್‌ ಮತ್ತು ಸುಮಿನಲ್ಲಿ ಒತ್ತೆಯಾಗಿರಿಸಿಕೊಂಡಿದೆ’ ಎಂದು ಆರೋಪಿಸಿದ್ದಾರೆ. ‘ರಷ್ಯಾದ ಬೆಲ್‌ಗೋರ್ಡ್‌ ಪ್ರದೇಶದಲ್ಲಿ ಖಾರ್ಕಿವ್‌ ಮತ್ತು ಸುಮಿಯಿಂದ ಸ್ಥಳಾಂತರ ಪ್ರಕ್ರಿಯೆಗೆ 130 ಬಸ್ಸುಗಳು ಸಜ್ಜಾಗಿವೆ. ಅವರನ್ನು ವಾಪಸ್‌ ಬೆಲ್‌ಗೋರ್ಡ್‌ಗೆ ಕರೆತಂದು ಅಲ್ಲಿಂದ ಸ್ವದೇಶಕ್ಕೆ ಕಳುಹಿಸಲಾಗುತ್ತದೆ’ ಎಂದು ತಿಳಿಸಿದ್ದಾರೆ. ಆದರೆ ಭಾರತೀಯ ವಿದ್ಯಾರ್ಥಿಗಳನ್ನು ಉಕ್ರೇನ್‌ ಒತ್ತೆಯಾಳಾಗಿ ಇರಿಸಿಕೊಂಡಿದೆ ಎಂಬ ಆರೋಪವನ್ನು ಭಾರತ ತಳ್ಳಿಹಾಕಿದೆ.

ನಾಳೆ 3ನೇ ಸುತ್ತಿನ ಮಾತುಕತೆ
ಕೀವ್‌:
ರಷ್ಯಾ ಮತ್ತು ಉಕ್ರೇನ್‌ ನಡುವಿನ ಯುದ್ಧವನ್ನು ಕೊನೆಗೊಳಿಸುವು ನಿಟ್ಟಿನಲ್ಲಿ 3ನೇ ಹಂತರ ಸಂಧಾನ ಮಾತುಕತೆ ಸೋಮವಾರ ನಡೆಯಲಿದೆ. ಉಕ್ರೇನ್‌ ಪರ ಸಂಧಾನಕಾರನಾಗಿ ಕಾರ್ಯನಿರ್ವಹಿಸುತ್ತಿರುವ ಡೇವಿಡ್‌ ಅರ್ಖಾಮಿಯಾ ಅವರು ಶನಿವಾರ ರಾತ್ರಿ ಈ ವಿಷಯ ಪ್ರಕಟಿಸಿದ್ದಾರೆ.

ಈ ಮಾತುಕತೆಯಲ್ಲೂ ಕದನವಿರಾಮ ಘೋಷಣೆ, ಯುದ್ಧ ನಿಲ್ಲಿಸುವಂತಹ ಒಪ್ಪಂದಕ್ಕೆ ಸಹಿ ಹಾಕಲು ಉಕ್ರೇನ್‌ ಬೇಡಿಕೆ ಒಡ್ಡಬಹುದು. ರಷ್ಯಾ ಸಹ ಈ ಮಾತುಕತೆಯಲ್ಲಿ ಉಕ್ರೇನ್‌ ಮೇಲೆ ಷರತ್ತುಗಳನ್ನು ವಿಧಿಸುವ ಸಾಧ್ಯತೆ ಇದೆ. 2ನೇ ಹಂತದ ಮಾತುಕತೆಯ ವೇಳೆ ನಾಗರಿಕರ ಸ್ಥಳಾಂತರದ ವೇಳೆ ಕದನ ವಿರಾಮ ಘೋಷಿಸಲು ಉಭಯ ರಾಷ್ಟ್ರಗಳು ನಿರ್ಧಾರ ತೆಗೆದುಕೊಂಡಿದ್ದವು. ಆದರೆ ಮರಿಯುಪೋಲ್‌ನಲ್ಲಿ ನಾಗರಿಕರ ಸ್ಥಳಾಂತರದ ವೇಳೆ ರಷ್ಯಾ ಶೆಲ್‌ ದಾಳಿ ನಡೆಸಿದ್ದರಿಂದ ಕದನ ವಿರಾಮ ಘೋಷಣೆ ಮುರಿದುಬಿದ್ದಿತ್ತು. ಎರಡನೇ ಮಾತುಕತೆಯ ವೇಳೆ ಉಕ್ರೇನ್‌ 3 ಷರತ್ತುಗಳನ್ನು ವಿಧಿಸಿತ್ತು. ಆದರೆ ರಷ್ಯಾ ಅವುಗಳಿಗೆ ಒಪ್ಪಿಗೆ ನೀಡಿರಲಿಲ್ಲ.

Russia Ukraine War "ರಷ್ಯಾ ಮೇಲಿನ ಯುದ್ಧ ಎಂದು ಪರಿಗಣಿಸುತ್ತೇವೆ", ಬಲಾಢ್ಯ ರಾಷ್ಟ್ರಗಳಿಗೆ ಪುಟಿನ್ ವಾರ್ನಿಂಗ್!
ಉಕ್ರೇನ್‌ ಕಡಲಿನಲ್ಲಿ 21 ಭಾರತೀಯರು ಅತಂತ್ರ
ಮುಂಬೈ:
ಉಕ್ರೇನ್‌ನ ಯುದ್ಧ ಭೂಮಿಯಲ್ಲಿ ಭಾರತದ ವಿದ್ಯಾರ್ಥಿಗಳಷ್ಟೇ ಅಲ್ಲ, ಆ ದೇಶಕ್ಕೆ ಹಡಗಿನಲ್ಲಿ ಸರಕು ಸಾಗಿಸಲು ಹೋಗಿದ್ದ 21 ಭಾರತೀಯರೂ ಸಿಲುಕಿಕೊಂಡಿರುವ ಸಂಗತಿ ಬೆಳಕಿಗೆ ಬಂದಿದೆ. ಮಾರ್ಷಲ್ಸ್‌ ಐ ಲ್ಯಾಂಡ್‌ ಧ್ವಜ ಹೊಂದಿರುವ ಹಡಗಿನಲ್ಲಿ ಭಾರತೀಯರು ಫೆ.22ರಂದು ಉಕ್ರೇನ್‌ನ ಮೈಕೋಲೇವ್‌ ತಲುಪಿದ್ದರು. ಜೋಳ ಸರಕನ್ನು ಅನ್‌ಲೋಡ್‌ ಮಾಡಿದ್ದ ಅವರು, ಫೆ.25ರಂದು ವಾಪಸ್‌ ಪ್ರಯಾಣ ಆರಂಭಿಸಬೇಕಾಗಿತ್ತು. ಆದರೆ ಅಷ್ಟರಲ್ಲಿ ಯುದ್ಧ ಆರಂಭವಾಗಿ ಅತಂತ್ರರಾಗಿದ್ದಾರೆ.

ಉಕ್ರೇನ್​​ನಿಂದ ಬಂದಿರುವ ವೈದ್ಯಕೀಯ ವಿದ್ಯಾರ್ಥಿಗಳಿಗೆ ಗುಡ್‌ ನ್ಯೂಸ್
ರಷ್ಯಾ ಪಡೆಗಳು ಮೈಕೋಲೇವ್‌ನತ್ತ ದಾಂಗುಡಿ ಇಡುತ್ತಿರುವ ಕಾರಣ ಈ ಎಲ್ಲರೂ ಆತಂಕಗೊಂಡಿದ್ದಾರೆ. ದಕ್ಷಿಣ ಉಕ್ರೇನ್‌ನಿಂದ ತಮ್ಮನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಬೇಕು ಎಂದು ಮೊರೆ ಇಡುತ್ತಿದ್ದಾರೆ. ಹಡಗು ಮಹಾನಿರ್ದೇಶನಾಲಯ ಹಾಗೂ ನೌಕರರನ್ನು ನೇಮಕ ಮಾಡಿಕೊಂಡಿದ್ದ ಮುಂಬೈನ ವಿಆರ್‌ ಮಾರೀಟೈಮ್‌ ಕಂಪನಿಗಳು ಭಾರತೀಯ ರಾಜತಾಂತ್ರಿಕರು ಮತ್ತು ವಿದೇಶಾಂಗ ಸಚಿವಾಲಯದ ಅಧಿಕಾರಿಗಳ ಜತೆ ಸಂಪರ್ಕದಲ್ಲಿವೆ. ಹಡಗು ಕಂಪನಿಯ ಸೂಚನೆ ಮೇರೆಗೆ ಹಡಗಿನಲ್ಲೇ ಉಳಿದುಕೊಂಡಿದ್ದೇವೆ. ಸ್ಥಳೀಯ ಏಜೆಂಟ್‌ಗಳು ಅಗತ್ಯ ಸಾಮಗ್ರಿ ತಂದುಕೊಡುತ್ತಿದ್ದಾರೆ ಎಂದು ನೌಕರರು ಹೇಳಿದ್ದಾರೆ. ನೀರಿಗೆ ತತ್ವಾರವಿದೆ. ನಮ್ಮಂತೆಯೇ ಹಲವು ಹಡಗುಗಳು ಇಲ್ಲಿ ಬೀಡುಬಿಟ್ಟಿವೆ. ಶೆಲ್‌ ದಾಳಿಯ ಸಪ್ಪಳ ಕೇಳಿಸುತ್ತಿದೆ. ಆತಂಕವಾಗುತ್ತಿದೆ. ಬೇರೆ ದಾರಿಯೇ ಇಲ್ಲ ಎಂದು ಹಡಗಿನಲ್ಲಿರುವ ಭಾರತೀಯರೊಬ್ಬರು ತಿಳಿಸಿದ್ದಾರೆ.

Latest Videos
Follow Us:
Download App:
  • android
  • ios