ಡೆಮಾಕ್ರಟಿಕ್‌ ಸಂಸದರ ಸಂಖ್ಯಾಕೊರತೆ: ವಾಗ್ದಂಡನೆಯಿಂದ ಟ್ರಂಪ್‌ ಪಾರು?| ಅಮೆರಿಕದ ಸೆನೆಟ್‌ನಲ್ಲಿ ಟ್ರಂಪ್‌ರನ್ನು ವಾಗ್ದಂಡನೆಗೆ ಗುರಿಪಡಿಸಲು ಡೆಮಾಕ್ರಟಿಕ್‌ ಪಕ್ಷಕ್ಕೆ 3ನೇ 2ರಷ್ಟುಬಹುಮತದ ಅಗತ್ಯ

ವಾಷಿಂಗ್ಟನ್(ಜ.28): ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರು ಸಿಲುಕಿಕೊಂಡಿರುವ ವಾಗ್ದಂಡನೆ ಭೀತಿಯಿಂದ ಪಾರಾಗುವ ಸಾಧ್ಯತೆ ದಟ್ಟವಾಗಿದೆ.

ಅಮೆರಿಕದ ಸೆನೆಟ್‌ನಲ್ಲಿ ಟ್ರಂಪ್‌ರನ್ನು ವಾಗ್ದಂಡನೆಗೆ ಗುರಿಪಡಿಸಲು ಡೆಮಾಕ್ರಟಿಕ್‌ ಪಕ್ಷಕ್ಕೆ 3ನೇ 2ರಷ್ಟುಬಹುಮತದ ಅಗತ್ಯವಿದೆ. ಆದರೆ 100 ಸಂಖ್ಯಾಬಲದ ಸೆನೆಟ್‌ನಲ್ಲಿ ರಿಪಬ್ಲಿಕನ್‌ ಮತ್ತು ಡೆಮಾಕ್ರಟಿಕ್‌ನ ತಲಾ 50 ಸದಸ್ಯರಿದ್ದಾರೆ. ಹೀಗಾಗಿ ಟ್ರಂಪ್‌ರನ್ನು ವಾಗ್ದಂಡನೆಗೆ ಗುರಿಪಡಿಸಲೇಬೇಕೆಂದಾದಲ್ಲಿ ರಿಪಬ್ಲಿಕನ್‌ ಪಕ್ಷದ 17 ಸಂಸದರನ್ನು ಡೆಮಾಕ್ರಟ್‌ ಪಕ್ಷ ಸೆಳೆಯಬೇಕಿತ್ತು. ಆದರೆ ಅದು ಸಾಧ್ಯವಾಗಿಲ್ಲ. ಹೀಗಾಗಿ ಟ್ರಂಪ್‌ ಅವರು ಬಹುತೇಕ ವಾಗ್ದಂಡನೆಗೆ ಒಳಗಾಗುವ ಭೀತಿಯಿಂದ ಪಾರಾದಂತೆಯೇ ಎನ್ನಲಾಗುತ್ತಿದೆ.

4 ವರ್ಷಗಳ ಅಧಿಕಾರಾವಧಿಯಲ್ಲಿ 2 ಸಲ ವಾಗ್ದಂಡನೆ ಶಿಕ್ಷೆಗೆ ಗುರಿಯಾದ ಏಕೈಕ ಅಧ್ಯಕ್ಷ ಎಂಬ ಅಪಕೀರ್ತಿ ಟ್ರಂಪ್‌ ಪಾಲಾಗಿದೆ.