ಲಂಡನ್‌(ನ.03): ಬ್ರಿಟನ್‌ ರಾಜಕುಮಾರ ವಿಲಿಯಂಗೆ ಏಪ್ರಿಲ್‌ನಲ್ಲೇ ಸೋಂಕು ತಗುಲಿದ್ದರೂ, ಆ ಸುದ್ದಿಯನ್ನು ರಹಸ್ಯವಾಗಿಡಲಾಗಿತ್ತು ಎಂದು ಲಂಡನ್‌ ಮಾಧ್ಯಮಗಳು ವರದಿ ಮಾಡಿದೆ.

ಬ್ರಿಟನ್‌ಗೆ ಮೊದಲ ಅಲೆ ಅಪ್ಪಳಿಸಿದ ವೇಳೆಯಲ್ಲೇ ಪ್ರಧಾನಿ ಜಾನ್ಸನ್‌ ಬೋರಿಸ್‌ಗೆ ಸೋಂಕು ತಾಗಿತ್ತು. ಈ ವೇಳೆಯಲ್ಲಿ ವಿಲಿಯಂ ಕೂಡ ಸೋಂಕು ಪೀಡಿತರಾಗಿದ್ದರು. ಅವರ ತಂದೆ ಪ್ರಿನ್ಸ್‌ ಚಾರ್ಲ್ಸ್ ಐಸೋಲೇಶನ್‌ಗೆ ಒಳಗಾಗಿದ್ದರು ಎಂದು ವರದಿಯಲ್ಲಿ ಹೇಳಲಾಗಿದೆ.

ವಿಲಿಯಂಗೆ ಸ್ವಲ್ಪ ತೀವ್ರವಾಗಿಯೇ ಸೋಂಕು ಭಾಧಿಸಿತ್ತು. ಆರಮನೆಯ ವೈದ್ಯರು ಶುಶ್ರೂಷೆ ಮಾಡಿದ್ದರು. ಈ ಮಧ್ಯೆಯೂ ಅವರು ವಿವಿಧ ಸಭೆಗಳನ್ನು ನಡೆಸಿದ್ದರು. ಜನರಲ್ಲಿ ಆತಂಕ ತಪ್ಪಿಸಲು ರಾಜಮನೆತನ ಸುದ್ದಿಯನ್ನು ರಹಸ್ಯವಾಗಿ ಇಟ್ಟಿತ್ತು ಎಂದು ಹೇಳಲಾಗಿದೆ.