ಪ್ರವಾಹಕ್ಕೆ ಸಿಲುಕಿದ್ದ ಕಾರಿನಿಂದ ಮಹಿಳೆಯೊಬ್ಬರನ್ನು ಪೊಲೀಸರು ಕಷ್ಟಪಟ್ಟು ರಕ್ಷಣೆ ಮಾಡುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಪ್ರವಾಹಕ್ಕೆ ಸಿಲುಕಿದ್ದ ಕಾರಿನಿಂದ ಮಹಿಳೆಯೊಬ್ಬರನ್ನು ಪೊಲೀಸರು ಕಷ್ಟಪಟ್ಟು ರಕ್ಷಣೆ ಮಾಡುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಅಮೆರಿಕಾದ ಅರಿಜೋನಾದಲ್ಲಿ ಈ ಘಟನೆ ನಡೆದಿದೆ. ಅಮೆರಿಕಾದಲ್ಲಿಯೂ ಈ ಭಾರಿ ವರುಣನ ಆರ್ಭಟ ಜೋರಾಗಿದ್ದು, ಹಲವೆಡೆ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದೆ. ಹೀಗೆ ಅಮೆರಿಕಾದ ಅರಿಜೋನಾದಲ್ಲಿ ಮಹಿಳೆಯರು ಪ್ರವಾಹದ ಮಧ್ಯೆ ಇದ್ದ ಕಾರಿನಲ್ಲಿ ಸಿಲುಕಿಕೊಂಡಿದ್ದು ಅವರನ್ನು ಪೊಲೀಸರು ರಕ್ಷಣೆ ಮಾಡಿದ್ದಾರೆ. 

ಅಪಚಿ ಜಂಕ್ಷನ್‌ ಪೊಲೀಸ್‌ ವಿಭಾಗದ ಸಾಮಾಜಿಕ ಜಾಲತಾಣದಲ್ಲಿ ಈ ವಿಡಿಯೋವನ್ನು ಪೋಸ್ಟ್ ಮಾಡಲಾಗಿದೆ. ಕಾರಿನ ಗಾಜುಗಳನ್ನೆಲ್ಲಾ ಒಡೆದು ಮಹಿಳೆಯನ್ನು ರಕ್ಷಣೆ ಮಾಡಲು ಪ್ರಯತ್ನಿಸಲಾಯಿತು. ಪೊಲೀಸರು ನೀವು ಹೊರಳಾಡಿಕೊಂಡು ಮೇಲೆ ಬರಬಹುದೇ ಕಾರಿನಿಂದ ಹೊರಬರಬಹುದೇ ಎಂದು ಮಹಿಳೆಯನ್ನು ಕೇಳುತ್ತಿರುವುದು ವಿಡಿಯೋದಲ್ಲಿ ಸೆರೆಯಾಗಿದೆ. ಇನ್ನೊಂದೆಡೆ ಒಡೆದು ಹೋಗಿರುವ ಕಿಟಕಿಗಳ ಮೂಲಕ ಪ್ರವಾಹದ ನೀರು ಕಾರಿನ ಒಳನುಗ್ಗುತ್ತಿರುವುದು ಕಾಣಿಸುತ್ತಿದೆ. ಜುಲೈ 28 ರಂದು ಈ ಘಟನೆ ನಡೆದಿದೆ. ಅಲ್ಲದೇ ಕಾರಿನ ಚಾಲಕನನ್ನು ಕೂಡ ಇದೇ ಸಂದರ್ಭದಲ್ಲಿ ರಕ್ಷಿಸಲಾಗಿದೆ ಎಂದು ತಿಳಿದು ಬಂದಿದೆ. ಆದರೆ ಕಾರಿನಲ್ಲಿದ್ದ ಮಹಿಳೆಯ ಶ್ವಾನವನ್ನು ರಕ್ಷಿಸಲು ಸಾಧ್ಯವಾಗಲಿಲ್ಲ ಎಂದು ಪೊಲೀಸರು ಹೇಳಿಕೊಂಡಿದ್ದಾರೆ. 

Scroll to load tweet…

ಪ್ರವಾಹದ ಮಧ್ಯೆ ಟ್ರಾಕ್ಟರ್‌ ಪಲ್ಟಿ: ಟ್ರಾಕ್ಟರ್‌ನಲ್ಲಿದ್ದವರು ನೀರುಪಾಲು Viral video

ಮಹಿಳೆಯ ಕೈಗಳನ್ನು ಹಿಡಿದು ಹೊರಗೆ ಎಳೆಯುವ ಮೂಲಕ ಕಾರಿನಿಂದ ಮಹಿಳೆಯನ್ನು ರಕ್ಷಿಸಲಾಗಿದೆ. ಆದರೆ ಶ್ವಾನ ನಾಪತ್ತೆಯಾಗಿದ್ದು, ಮಹಿಳೆಯ ಕುಟುಂಬದವರು ಹಾಗೂ ಸ್ನೇಹಿತರು ತಮ್ಮ ಪ್ರೀತಿಯ ಶ್ವಾನದ ಹುಡುಕಾಟದಲ್ಲಿ ತೊಡಗಿದ್ದಾರೆ. ಕಳೆದ ವಾರ ಅರಿಜೋನಾ ವ್ಯಾಪ್ತಿಯಲ್ಲಿ ಭಾರಿ ಮಳೆಯಾಗಿತ್ತು. ಭಾರಿ ಗಾಳಿ ಮಳೆಯಿಂದ ಪ್ರವಾಹ ಸ್ಥಿತಿ ನಿರ್ಮಾಣವಾಗಿತ್ತು. ಪಶ್ಚಿಮ ನೇವಾಡ ಹಾಗೂ ಉತ್ತರ ಅರಿಜೋನಾ ಪ್ರವಾಹಕ್ಕೆ ಕೊಚ್ಚಿ ಬಂದ ಮಣ್ಣ ಹಾಗೂ ಅವಶೇಷಗಳಿಂದ ತುಂಬಿತ್ತು ಎಂದು ವರದಿಯಾಗಿದೆ. 
Kodagu Floods: ಕೊಯನಾಡಿನಲ್ಲಿ ಕಿಂಡಿ ಅಣೆಕಟ್ಟೆಗೆ ಮರದ ದಿಮ್ಮಿಗಳು ಸಿಲುಕಿ ಪ್ರವಾಹ

ಕಳೆದ ವಾರ ರಾಜಸ್ತಾನದ ಜೋಧ್‌ಪುರದಲ್ಲಿ ಸುರಿದ ಮಳೆ ಇಡೀ ಜೋಧ್‌ಪುರ ನಗರದಲ್ಲಿ ಪ್ರವಾಹ ಸ್ಥಿತಿ ನಿರ್ಮಾಣ ಮಾಡಿತ್ತು. ಮಳೆಯಲ್ಲಿ ವಾಹನಗಳು ಕೊಚ್ಚಿ ಹೋಗುತ್ತಿರುವ ದೃಶ್ಯಗಳು ಅನೇಕರ ಫೋನ್‌ಗಳಲ್ಲಿ ಸೆರೆಯಾಗಿದ್ದವು. ಆ ದೃಶ್ಯದ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದವು. ಕೇವಲ ಎರಡು ಗಂಟೆಗಳ ಕಾಲ ಸುರಿದ ನಿರಂತರ ಮಳೆಯಿಂದ ನಗರದ ರಸ್ತೆಗಳೆಲ್ಲಾ ನದಿಗಳಾಗಿ ಮಾರ್ಪಟ್ಟಿದ್ದವು. ಗೋಡೆಗಳ ನಗರ ಹೊಳೆಯಾಗಿ ಬದಲಾಗಿತ್ತು. ಚರಂಡಿ ವ್ಯವಸ್ಥೆಯೂ ಸಂಪೂರ್ಣ ಹದಗೆಟ್ಟಿತ್ತು. ಮಳೆಯ ಈ ಅವಾಂತರದಿಂದ ಪಾರ್ಕಿಂಗ್‌ನಲ್ಲಿ ನಿಲ್ಲಿಸಿದ್ದ ಕಾರುಗಳು ಬೈಕ್‌ಗಳು ನೀರಿನಲ್ಲಿ ಕೊಚ್ಚಿ ಹೋಗಿದ್ದವು. 

ಅಲ್ಲದೇ ಜೋಧ್‌ಪುರದ ರೈಲ್ವೆ ಸ್ಟೇಷನ್‌ಗೂ ನುಗ್ಗಿದ ನೀರು ಫ್ಲಾಟ್‌ಫಾರ್ಮ್‌ಗಳನ್ನೇ ಮುಳುಗಿಸಿತ್ತು, ವಿಶ್ರಾಂತಿ ಕೊಠಡಿಗಳು ಕೂಡ ರೈಲ್ವೆ ಹಳಿಗಳು ಜಲಾವೃತವಾಗಿದ್ದವು. ಇದರೊಂದಿಗೆ ನಗರದ ತಗ್ಗು ಪ್ರದೇಶಗಳೆಲ್ಲವೂ ಬಹುತೇಕ ಜಲಾವೃತವಾಗಿದ್ದವು. ರೈ ಕಾ ಭಾಗ್‌ ರೈಲ್ವೆ ಸ್ಟೇಷನ್ ಅಂತೂ ಸಂಪೂರ್ಣವಾಗಿ ಜಲಾವೃತವಾಗಿತ್ತು. ಹೀಗಾಗಿ ರೈಲ್ವೆ ನಿರ್ವಹಣಾ ತಂಡ ಹಲವು ರೈಲುಗಳ ಪ್ರಯಾಣವನ್ನು ಸ್ಥಗಿತಗೊಳಿಸಿತ್ತು. 

ನಗರದ ಆಸ್ಪತ್ರೆ, ಸರ್ಕಾರಿ ಕಚೇರಿ, ಸಬ್ಜಿ ಮಂಡಿ ಮುಂತಾದ ಪ್ರಮುಖ ಮಾರುಕಟ್ಟೆಗಳು ಮಳೆನೀರಿನಿಂದಾಗಿ ತುಂಬಿ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿತ್ತು. ನಗರಾಡಳಿತ ಸಿಬ್ಬಂದಿ ಪರಿಸ್ಥಿತಿಯನ್ನು ತರಲು ಹರಸಾಹಸ ಪಟ್ಟಿದ್ದರು. ಶಾಲಾ ಕಾಲೇಜುಗಳಿಗೆ ರಜಾ ಘೋಷಿಸಲಾಗಿತ್ತು. ಕಾರು ತರಕಾರಿ ಬೈಕ್ ಸಿಲಿಂಡರ್ ಸೇರಿದಂತೆ ಬಹುತೇಕ ಎಲ್ಲಾ ವಸ್ತುಗಳು ನೀರಿನಲ್ಲಿ ಕೊಚ್ಚಿ ಹೋಗುತ್ತಿರುವ ದೃಶ್ಯದ ವಿಡಿಯೋಗಳು ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದವು.