ಬ್ರೆಸಿಲ್ಲಾ[ನ.15]: ರಷ್ಯಾದ ವಿಕ್ಟರಿ ಡೇ ಆಚರಣೆಗೆ ಅತಿಥಿಯಾಗಿ ಭಾಗವಹಿಸುವಂತೆ ಪ್ರಧಾನಿ ನರೇಂದ್ರ ಮೋದಿಗೆ, ರಷ್ಯಾ ಅಧ್ಯಕ್ಷ ವ್ಲಾಡಿಮರ್‌ ಪುಟಿನ್‌ ಆಹ್ವಾನ ನೀಡಿದ್ದಾರೆ.

ಬ್ರೆಜಿಲ್‌ನಲ್ಲಿ ನಡೆಯುತ್ತಿರಿವ ಬ್ರಿಕ್ಸ್‌ ರಾಷ್ಟ್ರಗಳ 11ನೇ ಶೃಂಗದಲ್ಲಿ ಉಭಯ ನಾಯಕರು ಭೇಟಿ ಮಾಡಿ ಸಂಬಂಧ ಸುಧಾರಣೆ ಹಾಗೂ ಇನ್ನಿತರ ವಿಚಾರಗಳ ಕುರಿತು ಚರ್ಚೆ ನಡೆಸಿದ್ದಾರೆ. ಈ ವೇಳೆ ವಿಕ್ಟರಿ ಡೇ ಆಚರಣೆಗೆ ಅತಿಥಿಯಾಗಿ ಭಾಗವಹಿಸಲು ಮೋದಿಗೆ ಪುಟಿನ್‌ ಆಹ್ವಾನ ನೀಡಿದ್ದಾರೆ. ಆಹ್ವಾನವನ್ನು ಮೋದಿ ಒಪ್ಪಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.

1945 ಏ. 9ರಂದು ನಾಜಿ ಜರ್ಮನ್‌ ಸೇನೆಯು ರಷ್ಯಾದ ಎದುರು ಶರಣಾದ ದಿನವನ್ನು ರಷ್ಯಾ ವಿಕ್ಟರಿ ಡೇ ಆಗಿ ಆಚರಿಸಲಾಗುತ್ತದೆ. ಅದು ರಷ್ಯಾ ಸರ್ಕಾರ ತನ್ನ ಮಿಲಿಟರಿ ಸಾಮರ್ಥ್ಯ ಪ್ರದರ್ಶಿಸುತ್ತದೆ.