Asianet Suvarna News Asianet Suvarna News

ಭಾರತೀಯಳ ಪರ್ಸ್ ಹಿಂದಿರುಗಿಸಿದ ಪಾಕ್ ಕ್ಯಾಬ್ ಡ್ರೈವರ್!

ಪಾಕ್ ಡ್ರೈವರ್ ಕಾರಿನಲ್ಲಿ ಪರ್ಸ್ ಮರೆತ ಭಾರತೀಯ ಯುವತಿ| ಕೇರಳ ಮೂಲದ ರಶೆಲ್ ರೋಸ್ ಪರ್ಸ್ ಮರಳಿಸಿದ ಪಾಕ್ ಮೂಲದ ಕ್ಯಾಬ್ ಡ್ರೈವರ್| ಪಾಕ್ ಮೂಲದ ಕ್ಯಾಬ್ ಡ್ರೈವರ್ ಮೊದಾಸ್ಸರ್ ಖಾದೀಮ್| ಟ್ವೀಟ್’ನಲ್ಲಿ ಮಾಹಿತಿ ಹಂಚಿಕೊಂಡ ರಶೆಲ್ ರೋಸ್|  

Pakistani Cab Driver In Dubai Returns Indian Student Wallet
Author
Bengaluru, First Published Jan 14, 2020, 9:12 PM IST
  • Facebook
  • Twitter
  • Whatsapp

ದುಬೈ(ಜ.14): ತನ್ನ ಕ್ಯಾಬ್’ನಲ್ಲಿ ಭಾರತೀಯ ಯುವತಿ ಬಿಟ್ಟು ಹೋದ ಪರ್ಸ್’ನ್ನು ಪಾಕ್ ಮೂಲದ ಕ್ಯಾಬ್ ಡ್ರೈವರ್ ಮರಳಿಸಿದ ಘಟನೆ ದುಬೈನಲ್ಲಿ ನಡೆದಿದೆ.

ಕೇರಳ ಮೂಲದ ರಶೆಲ್ ರೋಸ್ ಎಂಬ ಭಾರತೀಯ ಯುವತಿ ತನ್ನ ಗೆಳೆಯರೊಂದಿಗೆ ಪಾಕ್’ನ ಮೊದಾಸ್ಸರ್ ಖಾದೀಮ್ ಎಂಬಾತನ ಕ್ಯಾಬ್’ನಲ್ಲಿ ಪ್ರಯಾಣ ಮಾಡಿದ್ದಳು.

ಆದರೆ ಹೊರಡುವಾಗ ರಶೆಲ್ ತಮ್ಮ ಪರ್ಸ್’ನ್ನು ಖಾದೀಮ್ ಕಾರಿನಲ್ಲೇ ಬಿಟ್ಟು ಇಳಿದಿದ್ದಳು. ಕೆಲ ಹೊತ್ತಿನ ಬಳಿಕ ತನ್ನ ಕಾರಿನಲ್ಲಿ ಪರ್ಸ್ ಇರುವುದನ್ನು ಕಂಡ ಮೊದಾಸ್ಸರ್, RTAಗೆ ಫೋನ್ ಮಾಡಿ ವಿಷಯ ತಿಳಿಸಿದ್ದರು.

ಬಳಿಕ ದುಬೈ ಪೊಲೀಸರು ರಶೆಲ್ ಅವರನ್ನು ಸಂಪರ್ಕಿಸಿ ಆಕೆಯ ಪರ್ಸ್ ಸಿಕ್ಕಿರುವ ವಿಷಯ ತಿಳಿಸಿದ್ದಾರೆ. ರಶೆಲ್ ಪರ್ಸ್’ನಲ್ಲಿ ಇಂಗ್ಲೆಂಡ್’ನ ವೀಸಾ ಹಾಗೂ 19 ಸಾವಿರ ರೂ. ಇತ್ತೆಂದು ಹೇಳಲಾಗಿದೆ.

ಹಣ ಪಡೆಯದ ಭಾರತೀಯ ಕ್ಯಾಬ್ ಡ್ರೈವರ್‌ಗೆ ಸ್ಪೆಷಲ್ ಗಿಫ್ಟ್ ನೀಡಿದ ಪಾಕ್ ಕ್ರಿಕೆಟರ್ಸ್!

ಬಳಿಕ ಮೊದಾಸ್ಸರ್ ಅವರನ್ನು ಭೇಟಿಯಾದ ರಶೆಲ್, ತಮ್ಮ ಪರ್ಸ್ ಹಿಂದಿರುಗಿಸಿದ್ದಕ್ಕೆ ಧನ್ಯವಾದ ಸಲ್ಲಿಸಿದ್ದಾಳೆ. ಈ ಕುರಿತು ರಶೆಲ್ ತಮ್ಮ ಟ್ವೀಟ್’ನಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.

Follow Us:
Download App:
  • android
  • ios