ಇಸ್ಲಮಾಬಾದ್(ನ.27): ಮದುವೆ ಬಳಿಕ ವಧು ವರರಿಗೆ ಅತಿಥಿಗಳು ಹಾಗೂ ಕುಟುಂಬಸ್ಥರು ಏನಾದರೊಂದು ಗಿಫ್ಟ್ ಕೊಡುವುದು ಸಾಮಾನ್ಯ. ಆದರೆ ಯಾವುದಾದರೂ ಮದುವೆಯಲ್ಲಿ AK-47 ಗಿಫ್ಟ್ ಆಗಿ ಕೊಟ್ಟಿರುವ ಬಗ್ಗೆ ನೀವು ಯಾವತ್ತಾದರೂ ಕೇಳಿದ್ದೀರಾ? ಅರೆ.... ನಿಜಾನಾ? ಅನ್ನೋರು ಈ ಸುದ್ದಿ ಓದಲೇಬೇಕು.

ಹೌದು ಪಾಕಿಸ್ತಾನದಲ್ಲಿ ಈ ಘಟನೆ ನಡೆದಿದ್ದು, ಸದ್ಯ ಈ ವಿಡಿಯೋ ಭಾರೀ ವೈರಲ್ ಆಗಿದೆ. ಇಲ್ಲೊಂದು ಮದುವೆ ಕಾರ್ಯಕ್ರಮ ನಡೆದಿದ್ದು, ವರನ ಬಳಿ ಬಂದ ಮಹಿಳೆಯೊಬ್ಬಳು ಆತನ ಹಣೆಗೆ ಮುತ್ತಿಟ್ಟು, ಆತನಿಗೆ AK-47 ಗಿಫ್ಟ್ ಆಗಿ ನೀಡುತ್ತಾಳೆ. ಇದನ್ನು ಕಂಡು ಮದುವೆಗೆ ಆಗಮಿಸಿದ್ದ ಅತಿಥಿಗಳು ಖುಷಿಯಿಂದ ಕೂಗಾಡುತ್ತಾರೆ.

ಈ ವಿಡಿಯೋದಲ್ಲಿ ಮಹಿಳೆ ವರನನ್ನು ರಹನಾ ಎಂದು ಪದೇ ಪದೇ ಕರೆಯುತ್ತಿರುವುದನ್ನು ಕಾಣಬಹುದು. ಈ ವಿಡಿಯೋವನ್ನು ಟ್ವಿಟರ್‌ನಲ್ಲಿ ಶೇರ್ ಮಾಡಿರುವ ವ್ಯಕ್ತಿ'ನಮ್ಮ ಭಾವನೆಗಳೆಡೆ ಗಮನ ನೀಡುವ ಅತ್ತೆ ಸಿಗಬೇಕು' ಎಂದು ಬರೆದಿದ್ದಾರೆ. ಹೀಗಿದ್ದರೂ ಇದು ಯಾವಾಗ ನಡೆದ ಘಟನೆ ಎಂದು ಬರೆದಿಲ್ಲ.