ಇಸ್ಲಮಾಬಾದ್[ಜ.14]: ಹಬ್ಬದ ಸಮಯದಲ್ಲಿ ಅಂಗಡಿಗಳು ಡಿಸ್ಕೌಂಟ್ ನೀಡುವಂತೆ, ಪಾಕಿಸ್ತಾನದ ಮದುವೆ ಛತ್ರವೊಂದು ಭರ್ಜರಿ ಡಿಸ್ಕೌಂಟ್ ಪ್ರಕಟಿಸಿದೆ.

ಪಾಕಿಸ್ತಾನದ ಬಹವಾಲ್ಪುರದಲ್ಲಿರುವ ಮದುವೆ ಛತ್ರದಲ್ಲಿ 2 ನೇ ಮದುವೆ ಆಗುವವರಿಗೆ ಶೇ.೫೦ರಷ್ಟು ಹಾಗೂ ೩ನೇ ಮದುವೆ ಆಗುವವರಿಗೆ ಶೇ.75ರಷ್ಟು ಹಾಗೂ ೪ನೇ ಮದುವೆಗೆ ಛತ್ರ ಉಚಿತವಾಗಿ ನೀಡುವುದಾಗಿ ಪ್ರಕಟಿಸಲಾಗಿದೆ.

ಆದರೆ, ಈ ಆಫರ್ ಪಡೆಯಲು ಕೆಲ ಷರತ್ತು ವಿಧಿಸಲಾಗಿದೆ. ಅದೇನೆಂದರೆ 2ನೇ ಮದುವೆ ಆಗುವ ವ್ಯಕ್ತಿಯ ಮೊದಲ ಪತ್ನಿ ಛತ್ರಕ್ಕೆ ಬಂದು ಬುಕಿಂಗ್ ಮಾಡಬೇಕು. ಅದೇ ಷರತ್ತು 3ನೇ ಮತ್ತು ನಾಲ್ಕನೇ ಮದುವೆ ಆಗುವವರಿಗೂ ಅನ್ವಯ ಆಗಲಿದೆ. ಈ ಆಫರ್ ನ ಆಡಿಯೋ ಕ್ಲಿಪ್ ಈಗ ವೈರಲ್ ಆಗಿದೆ.